ಕಲ್ಕತ್ತಾ (ಜು. 24): ಈಗ ತರಹೇವಾರಿ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದಿವೆ. ಕೆಲವರು ಚಿನ್ನ ಬೆಳ್ಳಿಯ ಮಾಸ್ಕ ಅನ್ನು ಮಾಡಿಕೊಂಡಿದ್ದೂ ಆಯ್ತು. ಈ ಸಾಲಿಗೆ ಎಲ್‌ಇಡಿ ಮಾಸ್ಕ್‌ ಇನ್ನೊಂದು ಸೇರ್ಪಡೆ!

ಪಶ್ಚಿಮ ಬಂಗಾಳದ ಕಾಂಚ್ರಪಾರ ನಗರದ ಬಿವಾಸ್‌ ದಾಸ್‌ ಎಂಬಾತ ಮುಖಕ್ಕೆ ಎಲ್‌ಇಡಿ ಲೈಟ್‌ ಇರುವ ಮಾಸ್ಕ್‌ ಧರಿಸಿ ಸುದ್ದಿ ಆಗಿದ್ದಾನೆ. ವಿಶೇಷವೆಂದರೆ ಎಲ್‌ಇಡಿ ಮಾಸ್ಕ್‌ ಅನ್ನು ಆತನೇ ತಯಾರಿಸಿದ್ದಾನೆ. ರಾತ್ರಿಯ ವೇಳೆ ಮಾಸ್ಕ್‌ ಮಿರಿ ಮಿರಿ ಮಿಂಚುವ ಈ ಮಾಸ್ಕ್‌ ಎಲ್ಲರ ಗಮನ ಸೆಳೆಯುತ್ತಿದೆ.

ಕೊರೊನಾ ಹೆಸರಿನಲ್ಲಿ ನಿಮ್ಮ ಖಾತೆಗೂ ಕನ್ನ ಬೀಳಬಹುದು ಹುಷಾರ್‌

ಉತ್ತರ ಪರಗಣದ ಜಿಲ್ಲೆಗಳಲ್ಲಿ ಅತೀ ಹೆಚ್ಚು ಕಂಟೈನ್ಮೆಂಟ್ ಝೋನ್‌ಗಳಿವೆ. ಹಾಗಾಗಿ ಜನರ ಮನೆಯಿಂದ ಹೊರ ಬರಬೇಕಾದರೆ ಜಾಗೃತಿ ವಹಿಸಬೇಕಾಗಿದೆ. ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಿ  ಜಾಗೃತಿ ವಹಿಸುತ್ತಿದ್ದಾರೆ.