ಉರುಗ್ವೆಯ ಪೂರ್ವ ತೀರದಲ್ಲಿ ಸುಮಾರು 2 ಸಾವಿರ ಪೆಂಗ್ವಿನ್‌ಗಳು ಕಳೆದ 10 ದಿನಗಳಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿವೆ.
ಪೆರುಗ್ವೆ: ಉರುಗ್ವೆಯ ಪೂರ್ವ ತೀರದಲ್ಲಿ ಸುಮಾರು 2 ಸಾವಿರ ಪೆಂಗ್ವಿನ್‌ಗಳು ಕಳೆದ 10 ದಿನಗಳಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿವೆ. ಅತಿಯಾದ ಮೀನುಗಾರಿಕೆಯಿಂದ ಇವುಗಳಿಗೆ ಸುಲಭವಾಗಿ ಆಹಾರ ಸಿಗದೇ ಸಾವನ್ನಪ್ಪಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಆದರೆ ಸಾವಿನ ನಿಖರ ಕಾರಣ ಪತ್ತೆಗೆ ಅಧ್ಯಯನ ನಡೆದಿದೆ.
ಮ್ಯಾಗೆಲ್ಯಾನಿಕ್ ಪ್ರಬೇಧಕ್ಕೆ ಸೇರುವ ಈ ಪೆಂಗ್ವಿನ್‌ಗಳು ದಕ್ಷಿಣ ಅರ್ಜೆಂಟೀನಾ ತೀರದಲ್ಲಿ (southern Argentina) ಸಂತಾನೋತ್ಪತ್ತಿಗಾಗಿ ಬೀಡುಬಿಡುತ್ತವೆ. ಬಳಿಕ ಆಹಾರ ಮತ್ತು ಬೆಚ್ಚನೆಯ ನೀರನ್ನು ಅರಸಿ ಉತ್ತರದತ್ತ ಹೊರಡುವ ಇವುಗಳು ಬ್ರೆಜಿಲ್‌ವರೆಗೂ ಪ್ರಯಾಣ ಕೈಗೊಳ್ಳುತ್ತವೆ. ಈಗ ಉರುಗ್ವೆ ತೀರದಲ್ಲಿ ಸಾವನ್ನಪ್ಪಿರುವ ಬಹುತೇಕ ಪೆಂಗ್ವಿನ್‌ಗಳು ಮರಿಗಳಾಗಿದ್ದು, ಸಂಪೂರ್ಣವಾಗಿ ಕೊಬ್ಬು ತುಂಬಿದ ದೇಹವನ್ನು ಹೊಂದಿಲ್ಲದೇ ನೀರಿನಲ್ಲಿ ಮುಳುಗಿ ಸಾವಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ.
