ಮಾರ್ಚ್ 28, 2025 ರಂದು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಕಟ್ಟಡಗಳು ಕುಸಿದು ರಸ್ತೆಗಳು ಬಿರುಕು ಬಿಟ್ಟಿವೆ. ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 40ಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿದ್ದಾರೆ. ಮ್ಯಾನ್ಮಾರ್‌ನ ಮಾಂಡಲೆ ನಗರದಲ್ಲಿಯೂ ಹಾನಿಯಾಗಿದ್ದು, ಅವಾ ಸೇತುವೆ ಕುಸಿದಿದೆ ಎಂದು ವರದಿಯಾಗಿದೆ.
ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ಭಯಾನಕ ವಿಡಿಯೋ: ಕೇವಲ 10 ಸೆಕೆಂಡುಗಳು... ಎಲ್ಲವೂ ಮುಗಿದು ಹೋಯಿತು! ಮಾರ್ಚ್ 28 ರಂದು ಮ್ಯಾನ್ಮಾರ್-ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಕಟ್ಟಡಗಳು ಕಾರ್ಡ್‌ಗಳಂತೆ ಕುಸಿದವು, ರಸ್ತೆಗಳು ಬಿರುಕು ಬಿಟ್ಟವು. ಕ್ಯಾಮೆರಾದಲ್ಲಿ ಸೆರೆಯಾದ ವಿನಾಶದ ಚಿತ್ರಗಳು ಬೆಚ್ಚಿ ಬೀಳಿಸುವಂತಿವೆ.
ಆಗ್ನೇಯ ಏಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಹೆಚ್ಚು ಪರಿಣಾಮ ಬೀರಿದೆ. ಅನೇಕ ಎತ್ತರದ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡವು. ಇದು ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದ ದೃಶ್ಯ.
ಮ್ಯಾನ್ಮಾರ್‌ನಲ್ಲಿ ಎರಡು ಪ್ರಬಲ ಭೀಕರ ಭೂಕಂಪ: ಸಾವು ನೋವು ಅಪಾರ ನಷ್ಟ!
ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಗಗನಚುಂಬಿ ಕಟ್ಟಡ ಕುಸಿದ ಮತ್ತೊಂದು ತುಣುಕು
ಈ ನಿರ್ಮಾಣ ಹಂತದ ಎತ್ತರದ ಕಟ್ಟಡ ಕುಸಿದ ಪರಿಣಾಮವಾಗಿ 40 ಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿದ್ದಾರೆ. ಅವರೆಲ್ಲರೂ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ, ಮಾರ್ಚ್ 28 ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 1:20 ರ ಸುಮಾರಿಗೆ ಬ್ಯಾಂಕಾಕ್ ಭೂಕಂಪದ ಸಮಯದಲ್ಲಿ ಮಹಾನಗರ ಕಟ್ಟಡ ಅಲುಗಾಡಿದ ವಿಡಿಯೋ ತುಣುಕು ಇಲ್ಲಿದೆ.
ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದಾಗಿ ಗಗನಚುಂಬಿ ಕಟ್ಟಡದ ಮೇಲ್ಛಾವಣಿಯಿಂದ ಸ್ವಿಮ್ಮಿಂಗ್ ಪೂಲ್ ನೀರು ಕಟ್ಟಡದ ಅಂಚಿನಲ್ಲಿ ಹರಿಯುತ್ತಿರುವುದು ಕಂಡುಬಂದಿದೆ.
ಈ ಭೂಕಂಪದಿಂದ ಮ್ಯಾನ್ಮಾರ್‌ನ ಮಾಂಡಲೆ ನಗರದಲ್ಲಿ ಭಾರಿ ಹಾನಿ ಸಂಭವಿಸಿದೆ, ಡಜನ್ಗಟ್ಟಲೆ ಕಟ್ಟಡಗಳು ಕುಸಿದಿವೆ ಮತ್ತು ಇರಾವಡಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅವಾ ಸೇತುವೆ ಸಹ ಕುಸಿದಿದೆ.
ನೆಲ ಬಿರುಕು, ನಗರ ನಾಶ! ಇತಿಹಾಸದ 10 ವಿನಾಶಕಾರಿ ಭೂಕಂಪಗಳು
ಮೆಟ್ರೋ ರೈಲು ಅಲುಗಾಡುತ್ತಿರುವ ದೃಶ್ಯಗಳು ತೀವ್ರತೆ ಎಷ್ಟಿತ್ತು ಎಂದು ಹೇಳುತ್ತಿದೆ.
