ಮ್ಯಾನ್ಮಾರ್‌ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಥೈಲ್ಯಾಂಡ್, ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲೂ ಕಂಪನದ ಅನುಭವವಾಗಿದೆ. ಬ್ಯಾಂಕಾಕ್‌ನಲ್ಲಿ ಕಟ್ಟಡವೊಂದು ಮತ್ತು ಮ್ಯಾನ್ಮಾರ್‌ನಲ್ಲಿ ಸೇತುವೆಯೊಂದು ಕುಸಿದಿವೆ. ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿತ್ತು. ಥಾಯ್ ಪ್ರಧಾನಿ ತುರ್ತು ಸಭೆ ನಡೆಸಿದ್ದಾರೆ. ಬಾಂಗ್ಲಾದೇಶ, ಭಾರತ, ಲಾವೋಸ್, ಥೈಲ್ಯಾಂಡ್ ಮತ್ತು ಚೀನಾದಲ್ಲೂ ಕಂಪನದ ಅನುಭವವಾಗಿದೆ.
ಮ್ಯಾನ್ಮಾರ್ (28): ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪವಾಗಿದೆ. 7.7 ಮತ್ತು 6.4 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಕಂಪನದ ತೀವ್ರತೆ ಎಷ್ಟು ಪ್ರಬಲವಾಗಿದೆಯೆಂದರೆ ಅವು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲೂ ಅನುಭವಕ್ಕೆ ಬಂದಿದೆ. ಭೂಕಂಪದ ಪರಿಣಾಮ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಮತ್ತು ಮ್ಯಾನ್ಮಾರ್‌ನಲ್ಲಿ ಸೇತುವೆಯೊಂದು ಕುಸಿದು ಬಿದ್ದಿವೆ. ಘಟನೆಯಲ್ಲಿ ಅಪಾರ ಸಾವು ನೋವು ನಷ್ಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಲಾಗುತ್ತಿದೆ.
ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲಿ ಕಂಪನದ ಅನುಭವವಾಗಿದೆ. ವಿಯೆಟ್ನಾಂನಲ್ಲಿ, ಹನೋಯ್ ಮತ್ತು ಹೋ ಚಿ ಮಿನ್ಹ್ ನಗರಗಳೆರಡೂ ಕಂಪನಗಳನ್ನು ಅನುಭವಿಸಿದವು, ಭೂಕಂಪನ ಚಟುವಟಿಕೆಯಿಂದಾಗಿ ಬೆಳಕಿನ ನೆಲೆವಸ್ತುಗಳು ತೂಗಾಡುತ್ತಿದ್ದವು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಭೂವಿಜ್ಞಾನ ಕೇಂದ್ರ GFZ ಮ್ಯಾನ್ಮಾರ್‌ನಲ್ಲಿ ಭೂಕಂಪನದ ಕೇಂದ್ರಬಿಂದುವಾಗಿದ್ದು , 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಹೇಳಿದೆ. ಮೊದಲ ಭೂಕಂಪನವಾದ 12 ನಿಮಿಷಗಳಲ್ಲಿ ಆ ಪ್ರದೇಶದಲ್ಲಿ 6.4 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿತು. ದೇಶದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಥೈಲ್ಯಾಂಡ್‌ನ ವಿಪತ್ತು ತಡೆಗಟ್ಟುವಿಕೆ ಇಲಾಖೆ ತಿಳಿಸಿದೆ.
ಜನನಿಬಿಡ ಕೇಂದ್ರ ಬ್ಯಾಂಕಾಕ್‌ನಲ್ಲಿರುವ ಗಗನಚುಂಬಿ ಕಟ್ಟಡಗಳು ಮತ್ತು ಹೋಟೆಲ್‌ಗಳಿಂದ ಆಘಾತಕ್ಕೊಳಗಾದ ನಿವಾಸಿಗಳು ಹೊರಗೆ ಓಡಿಬರುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಶುಕ್ರವಾರ ಸಂಭವಿಸಿದ ಭೂಕಂಪದ ಸಮಯದಲ್ಲಿ ಬ್ಯಾಂಕಾಕ್‌ನಲ್ಲಿರುವ ಪ್ರಸಿದ್ಧ ಮಹಾನಕೋರ್ನ್ ಕಟ್ಟಡವು ಅಲುಗಾಡುತ್ತಿರುವ ವಿಡಿಯೋ ಕೂಡ ಇದೆ.
17 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಬ್ಯಾಂಕಾಕ್‌ನ ಗ್ರೇಟರ್ ಪ್ರದೇಶವು ಅನೇಕ ಎತ್ತರದ ಅಪಾರ್ಟ್‌ಮೆಂಟ್‌ಗಳಿಗೆ ಹೆಸರುವಾಸಿಯಾಗಿದೆ. ಪ್ರಬಲ ಭೂಕಂಪದ ನಂತರ ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ತುರ್ತು ಸಭೆ ನಡೆಸಿದ್ದಾರೆ. ಭೂಕಂಪದ ಕೇಂದ್ರಬಿಂದುವು ಮೋನಿವಾದಿಂದ ಪೂರ್ವಕ್ಕೆ ಸುಮಾರು 50 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿರುವ ಮಧ್ಯ ಮ್ಯಾನ್ಮಾರ್‌ನಲ್ಲಿತ್ತು.
2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
ಮ್ಯಾನ್ಮಾರ್ (ಬರ್ಮಾ) ನಿಂದ 12 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ್ದು ನೆರೆಯ ದೇಶವಾದ ಬಾಂಗ್ಲಾದೇಶ, ಭಾರತ, ಲಾವೋಸ್, ಮ್ಯಾನ್ಮಾರ್ (ಬರ್ಮಾ), ಥೈಲ್ಯಾಂಡ್ ಮತ್ತು ಚೀನಾ ಸಗೈಂಗ್ ಪ್ರಾಂತ್ಯದಲ್ಲೂ ಇದರ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದುವು ಮೋನಿವಾ ನಗರದಿಂದ ಪೂರ್ವಕ್ಕೆ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಮಧ್ಯ ಮ್ಯಾನ್ಮಾರ್‌ನಲ್ಲಿತ್ತು.
