ಭೂಕಂಪವಾದಾಗ ಇಡೀ ಭೂಮಿಯೇ ಅಡಿಮೇಲಾಗುವುದು. ಮಾನವ ನಿರ್ಮಿಸಿದ ಅದ್ಭುತಗಳೆಲ್ಲವೂ ಕ್ಷಣದಲ್ಲೇ ಪಳೆಯುಳಿಕೆಯಾಗಿ ಭೂಮಿಯ ಗರ್ಭ ಸೇರುವುದು. ಇದು ಶತಮಾನಗಳ ನಂತರ ನೆಲ ಅಗೆದ ಸಂದರ್ಭಗಳಲ್ಲಿ ಅಥವಾ ಮತ್ತೊಮ್ಮೆ ಭೂಕಂಪವಾದಾಗ ಆ ಹಿಂದಿನ ಅಪರೂಪದ ಅವಶೇಷಗಳು ಪಳೆಯುಳಿಕೆಗಳಾಗಿ ಕಾಣಸಿಗುತ್ತವೆ.
ಭೂಕಂಪವಾದಾಗ ಇಡೀ ಭೂಮಿಯೇ ಅಡಿಮೇಲಾಗುವುದು. ಮಾನವ ನಿರ್ಮಿಸಿದ ಅದ್ಭುತಗಳೆಲ್ಲವೂ ಕ್ಷಣದಲ್ಲೇ ಪಳೆಯುಳಿಕೆಯಾಗಿ ಭೂಮಿಯ ಗರ್ಭ ಸೇರುವುದು. ಇದು ಶತಮಾನಗಳ ನಂತರ ನೆಲ ಅಗೆದ ಸಂದರ್ಭಗಳಲ್ಲಿ ಅಥವಾ ಮತ್ತೊಮ್ಮೆ ಭೂಕಂಪವಾದಾಗ ಆ ಹಿಂದಿನ ಅಪರೂಪದ ಅವಶೇಷಗಳು ಪಳೆಯುಳಿಕೆಗಳಾಗಿ ಕಾಣಸಿಗುತ್ತವೆ. ಆ ಕಾಲದ ಜೀವನಶೈಲಿಯ ಅಂಶವನ್ನು ಈಗಿನ ತಲೆಮಾರಿನ ಮುಂದೆ ತೆರೆದಿಡುತ್ತದೆ. ಅದೇ ರೀತಿ ಈಗ ಬರ್ಮಾದಲ್ಲಿ ಕಳೆದ ಮಾರ್ಚ್ 28ರಂದು ನಡೆದ 7.7 ತೀವ್ರತೆಯ ಭೂಕಂಪನವು ಈಗ ಅಲ್ಲಿ 1752 ರಿಂದ 1885ರಲ್ಲಿ ಆಡಳಿತ ನಡೆಸುತ್ತಿದ್ದ ಕೊನ್ಬಾಂಗ್ ರಾಜವಂಶ ಅಂದರೆ ಮೂರನೇ ಬರ್ಮಿಸ್ ಸಾಮ್ರಾಜ್ಯದ ಪಳೆಯುಳಿಕೆಯನ್ನು ಈಗಿನ ತಲೆಮಾರಿಗೆ ಕಾಣುವಂತೆ ಮಾಡಿದೆ. ಈಗಿನ ಮಯನ್ಮಾರ್ ಎನಿಸಿರುವ ಆಗಿನ ಬರ್ಮಾವನ್ನು ಆಳಿದ ಕೊನೆಯ ರಾಜವಂಶ ಇದಾಗಿದ್ದು, ಈ ಸಾಮ್ರಾಜ್ಯವನ್ನು ಬ್ರಿಟಿಷರು ಉರುಳಿಸಿದ್ದರು..
ಆದರೆ ಮಯನ್ಮಾರ್‌ನಲ್ಲಿ ಮಾರ್ಚ್ 28ರಂದು ನಡೆದ ನೈಸರ್ಗಿಕ ವಿಕೋಪವೂ ಇಲ್ಲಿನ ಸಂಶೋಧಕರಿಗೆ ಈ ಸಾಮ್ರಾಜ್ಯದ ಅವಶೇಷಗಳ ಬಗ್ಗೆ ಅಥವಾ ನಿರ್ದಿಷ್ಟವಾಗಿ ಕನಿಷ್ಠ ಒಂದು ಕಾಲದ ಅವಶೇಷದ ಬಗ್ಗೆ ಅಪರೂಪದ ನೋಟವನ್ನು ಈಗಿನ ತಲೆಮಾರಿಗೆ ತೋರಿಸಿದೆ. ಮಾರ್ಚ್ 28 ರಂದು ಮ್ಯಾನ್ಮಾರ್‌ನ ಟಾಡಾ-ಯು ಟೌನ್‌ಶಿಪ್‌ನಲ್ಲಿ 7.7 ತೀವ್ರತೆಯ ಭೂಕಂಪವು ಸಂಭವಿಸಿತ್ತು. ಮಯನ್ಮಾರ್‌ನ ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯದ ಅನುವಾದಿತ ವರದಿಯ ಪ್ರಕಾರ ಈ ಭೂಕಂಪನದ ನಂತರ ಕಂಡ ಅವಶೇಷಗಳು ಕೊನ್ಬಾಂಗ್ ಯುಗದ ರಾಜಮನೆತನದ ನೀರಿನ ಅರಮನೆಯ ಭಾಗವಾಗಿರಬಹುದೆಂದು ಅಲ್ಲಿನ ಸಂಶೋಧಕರು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಭೂಕಂಪ: ದೆಹಲಿಯಲ್ಲೂ ನಡುಗಿದ ಭೂಮಿ!
ಈ ಪುರಾತತ್ವ ಇಲಾಖೆಗೆ ಸೇರಿದ ಈ ಸ್ಥಳದಲ್ಲಿ 2009ರಲ್ಲಿ ಸ್ಥಳೀಯರು ಇಟ್ಟಿಗೆಗಳನ್ನು ಬೇಯಿಸುತ್ತಿದ್ದಾಗ ಅಲ್ಲಿ ಮೆಟ್ಟಿಲುಗಳು ಇರುವುದನ್ನು ಪತ್ತೆ ಮಾಡಿದ್ದರು. ಆದರೆ ಇತ್ತೀಚೆಗೆ ನಡೆದ ಭೂಕಂಪನವು ಉಂಟು ಮಾಡಿದ ಬಿರುಕುಗಳು ಮಣ್ಣಿನ ಪದರಗಳ ಕೆಳಗೆ ಅಡಗಿದ್ದ ಈ ರಚನೆಯ ವಿವಿಧ ಭಾಗಗಳು ಕಾಣುವಂತೆ ಮಾಡಿದೆ. ಹೀಗಾಗಿ ಮಯನ್ಮಾರ್‌ನ ಪುರಾತತ್ತ್ವ ಶಾಸ್ತ್ರ ಇಲಾಖೆಯ ಮಂಡಲೆ ಶಾಖೆಯ ನೇತೃತ್ವದಲ್ಲಿಏಪ್ರಿಲ್ 9 ರಂದು ಈ ಪ್ರದೇಶದಲ್ಲಿ ಪರಿಶೋಧನಾ ಉತ್ಖನನಗಳು ಪ್ರಾರಂಭವಾಗಿವೆ. ಹಿಡಿಗಳಿರುವಂತಹ ಮೆಟ್ಟಿಲುಗಳು(handrail), ಇಟ್ಟಿಗೆಯ ವೇದಿಕೆಗಳು ಮತ್ತು 18 ಇಂಚಿನ ರೈಸರ್ ಮೆಟ್ಟಿಲುಗಳು ಈ ಭೂಕಂಪದ ನಂತರ ಇಲ್ಲಿ ಗೋಚರಿಸಲು ಪ್ರಾರಂಭಿಸಿದೆ. ಕೆಲ ವರದಿಗಳ ಪ್ರಕಾರ, ಇಲ್ಲಿ ಸಿಕ್ಕ ಈ ಕೆಲವು ವೈಶಿಷ್ಟ್ಯಗಳು 'ಪುರ-ಪೈಕ್' ಎಂದು ಕರೆಯಲ್ಪಡುವ ಪ್ರಾಚೀನ ತಾಳೆ ಎಲೆ ಹಸ್ತಪ್ರತಿಗಳ ರೇಖಾಚಿತ್ರಗಳನ್ನು ಹೋಲುತ್ತವೆ.
ಐತಿಹಾಸಿಕವಾಗಿ, ಮ್ಯಾನ್ಮಾರ್ ಸಂಸ್ಕೃತಿಯಲ್ಲಿ ನೀರು ಧಾರ್ಮಿಕತೆಯ ಸಂಕೇತವಾಗಿದೆ, ಆದ್ದರಿಂದ ನೀರಿನ ಅರಮನೆಗಳು ಆಚರಣೆಗಳಿಗೆ ಪ್ರಮುಖ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪುರಾತತ್ವ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯ ಇಲಾಖೆ ವರದಿ ಮಾಡಿದೆ. ತಾಳೆಗರಿಯ ಹಸ್ತಪ್ರತಿಯಲ್ಲಿ ವಿವರಿಸಲಾದ ನೀರಿನ ಅರಮನೆಯೂ ಐದು ಭವ್ಯವಾದ ಮೆಟ್ಟಿಲುಗಳು ಮತ್ತು ಮಾವಿನ ಮರಗಳಿಂದ ನೆರಳಿನಲ್ಲಿರುವ 18 ರಿಂದ 20 ಕೋಣೆಗಳನ್ನು(dormitories) ಹೊಂದಿದೆ. ನೀರಿನ ಅರಮನೆಯ ಬಗ್ಗೆ ತಾಳೆಗರಿಯ ಹಸ್ತಪ್ರತಿಯಲ್ಲಿ ಬರ್ಮಾ ಸಾಮ್ರಾಜ್ಯದ ಅವಧಿಯಲ್ಲಿ ಪ್ರಮುಖ ಮಂತ್ರಿಯಾಗಿದ್ದ ಮಂತ್ರಿ ಲೆಟ್ವೆ ನವ್ರಾಹ್ತಾ ಬರೆದಿದ್ದಾರೆ ಎಂದು ಅಲ್ಲಿನ ಪುರಾತತ್ವ ಇಲಾಖೆ ಹೇಳಿದೆ.
ಎರಡು ಭಾಗಗಳಾಗಿ ವಿಂಗಡನೆಯಾಗ್ತಿದೆ ಭಾರತದ ಭೂಭಾಗ? ವಿಜ್ಞಾನಿಗಳಿಂದ ಭೀಕರ ಭೂಕಂಪದ ಸುಳಿವು
ರಾಜಮನೆತನದ ನೀರಿನ ಅರಮನೆಯನ್ನು ಕಂಡುಹಿಡಿಯುವ ನಿರೀಕ್ಷೆಯು ರೋಮಾಂಚನಕಾರಿಯಾಗಿದ್ದರೂ, ಈ ರಚನೆಯು ಸರಳವಾಗಿರಬಹುದು ಎಂದು ನಂಬಲಾಗುತ್ತಿದೆ. ಸಂಶೋಧಕರು ಈ ಕಟ್ಟಡವು ಮರದ ನಿವಾಸವಾಗಿರಬಹುದು, ಇದು ಸುಮಾರು 200-250 ಅಡಿ ಉದ್ದ ಮತ್ತು 200 ಅಡಿ ಅಗಲವಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ರಚನೆಯು ಮಲೇಷ್ಯಾದ ಮಂಡಲೆಯಲ್ಲಿರುವ ಇನ್ವಾ ವರ್ಕರ ಮರದ ಮಠ ಮತ್ತು ಶ್ವೆನಂದಾವ್ (ಗೋಲ್ಡನ್ ಪ್ಯಾಲೇಸ್) ಮಠವನ್ನು ಹೋಲುತ್ತದೆ ಎಂದು ವರದಿಯಾಗಿದೆ
