ನೆಲದಿಂದ ಚಿಮ್ಮಿದ ಗುಂಡೊಂದು ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ಸೀಳಿಕೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ತಾಗಿದ ಆಘಾತಕಾರಿ ಘಟನೆ ದಕ್ಷಿಣ ಏಷ್ಯಾ ರಾಷ್ಟ್ರ ಮಯನ್ಮಾರ್(ಬರ್ಮಾ)ದಲ್ಲಿ ನಡೆದಿದೆ.

ಮಯನ್ಮಾರ್‌: ನೆಲದಿಂದ ಚಿಮ್ಮಿದ ಗುಂಡೊಂದು ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ಸೀಳಿಕೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ತಾಗಿದ ಆಘಾತಕಾರಿ ಘಟನೆ ದಕ್ಷಿಣ ಏಷ್ಯಾ ರಾಷ್ಟ್ರ ಮಯನ್ಮಾರ್(ಬರ್ಮಾ)ದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ವಿಮಾನ 35,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದು, ಲ್ಯಾಂಡ್ ಆಗಲು ಕೆಲ ನಿಮಿಷಗಳಿದ್ದಾಗ ಈ ಅವಘಡ ಸಂಭವಿಸಿದೆ. ನೆಲದಿಂದ ಹಾರಿದ ಗುಂಡು ವಿಮಾನದ ಕೆಳಭಾಗವನ್ನು ಸೀಳಿಕೊಂಡು ಬಂದು ಒಳಗೆ ಕುಳಿತಿದ್ದ ವ್ಯಕ್ತಿಯ ಕತ್ತಿಗೆ ತಾಗಿದೆ. ಮಯನ್ಮಾರ್ ರಾಷ್ಟ್ರೀಯ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಈ ಅವಘಡ ಸಂಭವಿಸಿದೆ.

ನಂತರ ವಿಮಾನ ಮಯನ್ಮಾರ್‌ನ ಲೋಯ್ಕಾವ್‌ ವಿಮಾನ ನಿಲ್ದಾಣದಲ್ಲಿ (Loikaw Airport) ಲ್ಯಾಂಡ್ ಆಗುತ್ತಿದ್ದಂತೆ ಗುಂಡಿನ ದಾಳಿಯಿಂದ ಗಾಯಗೊಂಡ ಪ್ರಯಾಣಿಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬ್ರಿಟಿಷ್ ನ್ಯೂಸ್ ಏಜೆನ್ಸಿ ದಿ ಸನ್ ಪ್ರಕಾರ, ವಿಮಾನವೂ 35,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಹಾರುತ್ತಿದ್ದಾಗ, ವಿಮಾನ ನಿಲ್ದಾಣದ ಉತ್ತರದಲ್ಲಿ, ನಾಲ್ಕು ಕಿಲೋ ಮೀಟರ್ ದೂರದಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯ ಬಳಿಕ ಲೋಯ್ಕಾವ್‌ನಲ್ಲಿರುವ, ಮಯನ್ಮಾರ್ ರಾಷ್ಟ್ರೀಯ ವಿಮಾನಯಾನ (Myanmar National Airlines) ಸಂಸ್ಥೆಯ ಕಚೇರಿಯೂ ಅನಿರ್ದಿಷ್ಟಾವಧಿಗೆ ನಗರಕ್ಕೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.

ರೊಹಿಂಗ್ಯಾಗಳಿಗೆ ದೆಹಲಿಯಲ್ಲಿ ಪ್ಲಾಟ್‌ ನೀಡಲು ನಿರ್ಧಾರ ಎಂದ ಪುರಿ, ಇಲ್ಲ ಎಂದು ಸ್ಪಷ್ಟನೆ ನೀಡಿದ ಗೃಹ ಇಲಾಖೆ

ಈ ಕೃತ್ಯವನ್ನು ಕಯಾಹ್‌ನಲ್ಲಿರುವ ಬಂಡುಕೋರ ಸಂಘಟನೆಗಳು (rebel forces) ನಡೆಸಿವೆ ಎಂದು ಮಯನ್ಮಾರ್‌ನಲ್ಲಿ ಅಸ್ತಿತ್ವದಲ್ಲಿರುವ ಸೇನಾ ಸರ್ಕಾರವೂ ಹೇಳಿದೆ ಎಂದು ಆಂಗ್ಲ ಮಾಧ್ಯಮ ದಿ ಮಿರರ್ ವರದಿ ಮಾಡಿದೆ. ಆದರೆ ಬಂಡುಕೋರ ಸಂಘಟನೆಗಳು ಈ ಆರೋಪವನ್ನು ನಿರಾಕರಿಸಿವೆ.

ಮಯನ್ಮಾರ್‌ನಲ್ಲಿ(Myanmar) ಆಡಳಿತ ನಡೆಸುತ್ತಿರುವ ಮಿಲಿಟರಿ ಕೌನ್ಸಿಲ್‌ ಮಾಧ್ಯಮ ವಕ್ತಾರ, ಮೇಜರ್ ಜನರಲ್ ಝ ಮಿನ್‌ ಟನ್ (Zaw Min Tun) ಈ ಬಗ್ಗೆ ಆ ದೇಶದ ಮಾಧ್ಯಮವಾದ ಎಂಆರ್‌ಟಿವಿಗೆ ಪ್ರತಿಕ್ರಿಯಿಸಿದ್ದು, ಕೆರೆನ್ನಿ ನ್ಯಾಷನಲ್ ಪ್ರೊಗ್ರೇಸಿವ್ ಪಕ್ಷಕ್ಕೆ(Karenni National Progressive Party) ಸೇರಿದ ಉಗ್ರ ಸಂಘಟನೆ ಈ ಕೃತ್ಯವೆಸಗಿದೆ ಎಂದು ಹೇಳಿದ್ದಾರೆ. ಇದೊಂದು ಅಲ್ಪಸಂಖ್ಯಾತ ಜನಾಂಗೀಯ ಸಂಘಟನೆ ಆಗಿದ್ದು, ಸರ್ಕಾರದ ವಿರುದ್ಧ ಹೋರಾಡುತ್ತಿದೆ ಎಂದರು. ಈ ಗುಂಪು ಸಶ್ತ್ರಾಸ್ತ್ರವನ್ನು ಹೊಂದಿರುವ ಪ್ರಜಾಪ್ರಭುತ್ವ ಪರವಾಗಿರುವ ಪೀಪಲ್ ಡಿಫೆನ್ಸ್ ಗ್ರೂಪ್‌ನ ಜೊತೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. 

ಮಯನ್ಮಾರ್ ಪದಚ್ಯುತ ನಾಯಕಿಗೆ 6 ವರ್ಷ ಜೈಲು, ಭ್ರಷ್ಟಚಾರಕ್ಕೆ ಬೆಲೆ ತೆತ್ತ ಸೂಕಿ!

ಈ ರೀತಿ ಪ್ರಯಾಣಿಕ ವಿಮಾನದ (passenger plane) ಮೇಲೆ ದಾಳಿ ಮಾಡುವುದು ಒಂದು ಯುದ್ಧಪರಾದವಾಗಿದ್ದು, ಶಾಂತಿ ಬಯಸುವ ಜನರು ಈ ಕೃತ್ಯವನ್ನು ಎಲ್ಲೆಡೆ ಖಂಡಿಸಬೇಕಾಗಿದೆ ಎಂದು ಝ ಮಿನ್‌ ಟನ್ ಹೇಳಿದ್ದಾರೆ. 2021ರಲ್ಲಿ ಸೇನೆಯೂ ಆಂಗ್ ಸಾನ್ ಸೂಕಿ (Aung San Suu Kyi)ನಾಯಕತ್ವದ ಪ್ರಜಾಪ್ರಭುತ್ವ ಸರ್ಕಾರವನ್ನು ಹೊಡೆದುರುಳಿಸಿದ ಬಳಿಕ ಕಯಾಹ್ ಮಿಲಿಟರಿ ಮತ್ತು ಸ್ಥಳೀಯ ಪ್ರತಿರೋಧಿ ಗುಂಪುಗಳ ನಡುವೆ ಮಯನ್ಮಾರ್‌ನಲ್ಲಿ ತೀವ್ರವಾದ ಹೋರಾಟ ನಡೆಯುತ್ತಿದೆ.