ಮಯನ್ಮಾರ್ ಪದಚ್ಯುತ ನಾಯಕಿಗೆ 6 ವರ್ಷ ಜೈಲು, ಭ್ರಷ್ಟಚಾರಕ್ಕೆ ಬೆಲೆ ತೆತ್ತ ಸೂಕಿ!
ಭಾರತದಲ್ಲಿ ರಾಜಕರಾಣಿಗಳ ಮೇಲಿನ ಭ್ರಷ್ಟಾಚಾರ ಆರೋಪ ಸಾಬೀತಾಗುವುದೇ ಅನುಮಾನ, ವಿಚಾರಣೆ ಕರೆಸಿದರೆ ಪ್ರತಿಭಟನೆ, ಒಂದು ವೇಳೆ ಜೈಲಾದರೂ ಅಷ್ಟೇ ಬೇಗ ಬೇಲ್. ಆದರೆ ಮಯನ್ಮಾರ್‌ನಲ್ಲಿ ಹಾಗಲ್ಲ. ಮಯನ್ಮಾರ್ ನಾಯಕಿ ಸೂಕಿ ಭ್ರಷ್ಟಾಚಾರ ಆರೋಪ ಸಾಬೀತಾಗಿದ್ದು ಒಟ್ಟು 17 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಬ್ಯಾಂಕಾಕ್(ಆ.15): ಮಯನ್ಮಾರ್ ಪದಚ್ಯುತ ನಾಯಕಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆಯಾಗಿರುವ ಪ್ರಜಾಪ್ರಭುತ್ವ ನಾಯಕಿ ಅಂಗ್ ಸಾನ್ ಸೂ ಕಿ ಮೇಲಿನ ಭ್ರಷ್ಟಾಚಾರ ಆರೋಪ ಸಾಬೀತಾಗಿದೆ. ಇದರ ಪರಿಣಾಮ ಮತ್ತೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರಿಂದ ಒಟ್ಟು ಅಂಗ್ ಸಾನ್ ಸೂ ಕಿ ಒಟ್ಟು 17 ವರ್ಷ ಜೈಲು ಶಿಕ್ಷೆ ಅನುಭವಸಿಬೇಕಿದೆ. 77 ವರ್ಷದ ಅಂಗ್ ಸಾನ್ ಸೂ ಕಿ ನಡೆಸಿದ ಭ್ರಷ್ಟಾಚಾರ ಆರೋಪ ಸಾಬೀತಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಸೇನಾ ನ್ಯಾಯಾಲಯ ನಾಲ್ಕು ಪ್ರಕರಣಗಳಲ್ಲಿ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ 11 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಂಗ್ ಸಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದಕ್ಕೆ ಮತ್ತೆ 6 ವರ್ಷ ಅಂದರೆ ಒಟ್ಟು 17 ವರ್ಷ ಇದೀಗ ಜೈಲಿನಲ್ಲಿ ಕಳೆಯಬೇಕಾಗಿದೆ.
ಅಂಗ್ ಸಾನ್ ಸೂ ಕಿ ಆಡಳಿತದಲ್ಲಿದ್ದಾಗ, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರಿ ಜಮೀನನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆ ಬಾಡಿಗೆ ನೀಡಿದ ಆರೋಪ ಎದುರಿಸಿದ್ದರು. ಈ ಜಮೀನನ್ನು ತಮ್ಮ ಸ್ವಂತ ಉದ್ಯಮಕ್ಕೆ ಬಳಸಿಕೊಂಡಿದ್ದಾರೆ. ಇನ್ನು ದೇಣಿಗೆಯಿಂದ ಬಂದ ಹಣದಿಂದ ವಸತಿ ಕಟ್ಟಡ ನಿರ್ಮಿಸಿದ ಆರೋಪ ಸೂಕಿ ಮೇಲಿತ್ತು. ಈ ಕುರಿತು ವಿಚಾರಣೆ ಎದುರಿಸಿದ ಸೂಕಿ ಮೇಲಿನ ಆರೋಪಗಳು ಸಾಬೀತಾಗಿದೆ. ಇದರಿಂದ ಈಗಾಗಲೇ 11 ವರ್ಷ ಜೈಲು ಶಿಕ್ಷೆ ಪಡೆದಿದ್ದರು. ಇದೀಗ ನಾಲ್ಕು ಪ್ರಕರಣಗಳಲ್ಲಿನ ತೀರ್ಪು ಪ್ರಕಟಗೊಂಡಿದ್ದು, ಹೆಚ್ಚುವರಿ 6 ವರ್ಷ ಜೈಲು ಶಿಕ್ಷೆ ಸೇರ್ಪಡೆಗೊಂಡಿದೆ
jail for Suu Kyi: ಮಯನ್ಮಾರ್ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷ ಜೈಲು
ಖಿನ್ ಕಿ ಫೌಂಡೇಷನ್ ಪ್ರಧಾನ ಕಚೇರಿ ಹಾಗೂ ಇದಕ್ಕೆ ಸಂಬಂಧಿಸಿ ಯೋಜನಗಳನ್ನು ನಿರ್ಮಿಸಲು ನೈಪಿಜಾವ್‌ನಲ್ಲಿ ನಾಯಕಿ ಸೂಕಿ ಸರ್ಕಾರಿ ಜಮೀನನ್ನು ಗುತ್ತಿಗೆ ನೀಡಿದ್ದರು. ಇದರಿಂದ ರಾಜ್ಯ 13 ಬಿಲಿಯನ್ ಡಾಲರ್ ಹಣ ನಷ್ಟವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಕಂದಾಯ ಇಲಾಖೆ ನಿಗದಿ ಪಡಿಸಿದ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಭೂಮಿ ನೀಡಾಗಿತ್ತು.
2019 ಮತ್ತು 2020ರಲ್ಲಿ ಅಧಿಕಾರದಲ್ಲಿದ್ದ ನಾಯಕಿ ಸೂಕಿ, ಉದ್ಯಮಿ ಬಳಿಯಿಂದ 550,0000 ಡಾಲರ್ ಲಂಚ ಸ್ವೀಕರಿಸಿದ್ದರು. ದೇಣಿಗೆಯಿಂದ ಪಡೆದ ಹಣದಲ್ಲಿ ತಮ್ಮ ಖಾಸಗಿ ನಿವಾಸ ನಿರ್ಮಾಣಕ್ಕೆ ಬಳಸಿಕೊಂಡಿದ್ದರು. ಇದು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಆದರೆ ಈ ಆರೋಪಗಳನ್ನು ಸೂಕಿ ನಿರಾಕರಿಸಿದ್ದರು. ಇನ್ನು ಮೊದಲ ಬಾರಿಗೆ 11 ವರ್ಷದ ಜೈಲು ಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ನಾಯಕಿ ಸೂಕಿ ಪದಚ್ಯುತಗೊಂಡಿದ್ದರು. ಇದು ಭಾರಿ ಗಲಭೆಗೆ ಕಾರಣವಾಗಿತ್ತು. ಸೂಕಿ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದರು. ಮಯನ್ಮಾರ್ ಹೊತ್ತಿ ಉರಿದಿತ್ತು.ದಂಗೆಯಲ್ಲಿ 2,200 ನಾಗರೀಗರು ಬಲಿಯಾಗಿದ್ದಾರೆ ಅನ್ನೋ ವರದಿಗಳಿವೆ. 15,000 ಕ್ಕೂ ಹೆಚ್ಚು ಜರನ್ನು ಬಂಧಿಸಲಾಗಿದೆ.
ಮ್ಯಾನ್ಮಾರ್ ಏರ್‌ಸ್ಟ್ರೈಕ್‌ಗೆ ಹೆದರಿ ಥಾಯ್ಲೆಂಡ್‌ಗೆ ಸಾವಿರಾರು ಜನ ವಲಸೆ!