Asianet Suvarna News Asianet Suvarna News

ಮಾಯಾನಗರಿ ಮುಂಬೈ ಬಗ್ಗೆ ಜನರಿಗಿಲ್ಲ ಒಲವು, ಜಾಗತಿಕ ಮಟ್ಟದಲ್ಲೇ ಕಡಿಮೆ ರೇಟಿಂಗ್!

-ಮನೆ ಖರೀದಿಸಲು ಅತ್ಯಂತ ಕಡಿಮೆ ಇಷ್ಟಪಡುವ ನಗರ ಮುಂಬೈ!

-ಇನ್ಸ್ಟಾಗ್ರಾಮ್‌ ಪೋಸ್ಟ್‌ಗಳನ್ನು ಬಳಸಿ ನಡೆದ ಸಮೀಕ್ಷೆ

-ಮನೆ ಖರೀದಿಸಲು ಅತ್ಯಂತ  ಹೆಚ್ಚು ಇಷ್ಟಪಡುವ ನಗರಗಳಲ್ಲಿ ಚಂಢೀಗಢಕ್ಕೆ 5ನೇ ಸ್ಥಾನ

Mumbai is least happiest city in the world to a buy house
Author
Bengaluru, First Published Oct 21, 2021, 10:39 AM IST

ಇಂಗ್ಲೆಂಡ್‌ (ಅ. 21):  ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಮಹಾರಾಷ್ರ್ಟದ ಮುಂಬೈ (Mumbai) ನಗರವು ಒಂದು. ದೇಶದಲ್ಲೇ ಅತ್ಯಂತ ದುಬಾರಿ ಮನೆಗಳನ್ನು ಹೊಂದಿರುವ ಮುಂಬೈನಲ್ಲಿ ಮನೆ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ. ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್‌ ಅಂಬಾನಿ (Mukesh Ambani)  ಮನೆ ಇರುವುದು ಕೂಡ ಇದೆ ನಗರದಲ್ಲಿ. ಆದರೆ ಇಂಗ್ಲೆಂಡ್‌ನ (England) ಆನ್ಲೈನ್‌ ಮಾರ್ಟೆಜ್‌ ಅಡ್ವೈಸರ್‌ (Online Mortage Advisor) ಕಂಪನಿಯೊಂದು ಬಿಡುಗಡೆ ಮಾಡಿರುವ ವರದಿಯಲ್ಲಿ ಜನರು ಮುಂಬೈ ನಗರವು ನಿವೇಶನ ಖರೀದಿಸಲು ಅತ್ಯಂತ ಕಡಿಮೆ ಇಷ್ಟಪಡುವ ನಗರ ಎಂದು ಹೇಳಿದೆ. ವರದಿಯ ಪ್ರಕಾರ ಮನೆ ಖರೀದಿಸಲು ಅತ್ಯಂತ ಕಡಿಮೆ ಇಷ್ಟಪಡುವ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕಾದ ಅಟ್ಲಾಂಟಾ (Atlanta) ಮತ್ತು ಆಸ್ಟ್ರೇಲಿಯಾದ ಸಿಡ್ನಿ (Sydney) ಕ್ರಮವಾಗಿ ಏರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಪ್ಯಾರೀಸ್‌ (Paris) 7ನೇ ಸ್ಥಾನದಲ್ಲಿದ್ದರೆ  ದುಬೈ (Dubai) 19ನೇ ಸ್ಥಾನದಲ್ಲಿದೆ. 

ಅಪ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ, 50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಲು ಭಾರತ ಸಜ್ಜು!

ಜನರು ಮನೆ ಖರೀದಿಸಲು ಜಗತ್ತಿನ ಅತ್ಯಂತ ಇಷ್ಟಪಡುವ ಅಗ್ರಗಣ್ಯ 20  ನಗರಗಳಲ್ಲಿ ಚಂಢೀಗಢ (Chandigarh) 5ನೇ ಸ್ಥಾನದಲ್ಲಿದ್ದು, ಜೈಪುರ್‌ (Jaipur) ನಗರವು 10ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ 13ನೇ ಸ್ಥಾನವನ್ನು ಚೆನ್ನೈ (Chennai) ಪಡೆದುಕೊಂಡರೆ 17ನೇ ಮತ್ತು 20ನೇ ಸ್ಥಾನವನ್ನು ಕ್ರಮವಾಗಿ ಇಂದೋರ್‌ (Indore) ಮತ್ತು ಲಕ್ನೋ (Lucknow) ಪಡೆದುಕೊಂಡಿವೆ. ಈ ಮೂಲಕ ಟಾಪ್‌ 20 ಪಟ್ಟಿಯಲ್ಲಿ ಭಾರತದ ಐದು ನಗರಗಳಿವೆ. ಈ ಸಮೀಕ್ಷೆ ಪ್ರಕಾರ ಮನೆ ಖರೀದಿಸಲು ಜಗತ್ತಿನಲ್ಲೇ ಅತ್ಯಂತ ಸಂತೋಷದಾಯಕ ನಗರಗಳಲ್ಲಿ ಸ್ಪೇನ್‌ನ ಬಾರ್ಸಿಲೋನಾ (Barcelona) ಮತ್ತು ಇಟಲಿಯ ಫ್ಲೋರೆನ್ಸ್‌ (Florence) ಅಗ್ರ ಸ್ಥಾನದಲ್ಲಿವೆ. 

ಸಮೀಕ್ಷೆ ನಡೆದದ್ದು ಹೇಗೆ?

ಈ ಸಮೀಕ್ಷೆಯನ್ನು ನಡೆಸಲು ಸಂಸ್ಥೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿದೆ. ಇನ್ಸ್ಟಾಗ್ರಾಂನಲ್ಲಿ ಜನರು ಹಾಕಿರುವ ಜಿಯೋ ಟ್ಯಾಗ್‌ (geo-tagged) ಮಾಡಿರುವ ಪೋಟೋಗಳ ಆಧಾರದ ಮೇಲೆ ವರದಿ ನೀಡಲಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಸಾವಿರಾರು ಪೋಟೊಗಳನ್ನು ಸ್ಥಳಗಳ ಆಧಾರದ ಮೇಲೆ ವಿಂಗಡಿಸಿ ಸರಾಸರಿ ಬಳಕೆದಾರರ ಸಂತೋಷದ ಮಟ್ಟವನ್ನು ಇತ್ತೀಚೆಗೆ ಮನೆ ಖರೀದಿಸಿದವರ ಇಷ್ಟಪಡುವ ಮಟ್ಟಕ್ಕೆ ಹೋಲಿಸಿದ್ದಾರೆ.  ಪ್ರತಿ ಫೋಟೋದಲ್ಲಿ ಮುಖದಲ್ಲಿ ಕಾಣುವ ಅತ್ಯಂತ ಪ್ರಭಾವಶಾಲಿ ಭಾವನೆಗಳನ್ನು ಕಂಡುಹಿಡಿಯಲು ಕೃತಕ ಬುದ್ಧಿಮತ್ತೆ (Artificial Intelligence) ಮೂಲಕ  ಮುಖ ಗುರುತಿಸುವಿಕೆ ವಿಧಾನವನ್ನು  ಬಳಸಲಾಗಿದೆ. 

ಬ್ರಿಟನ್‌ ಪ್ರಧಾನಿಯನ್ನು ಭೇಟಿಯಾದ ಉದ್ಯಮಿ ಗೌತಮ್‌ ಅದಾನಿ!

ಇನ್ಸ್ಟಾಗ್ರಾಮ ಹ್ಯಾಶ್‌ಟ್ಯಾಗ್ ಬಳಸಿ ಸಮಿಕ್ಷೆ !

ಇನ್ಸ್ಟಾಗ್ರಾಮ್‌ನಲ್ಲಿರುವ (Instagram) ಎರಡು ರೀತಿ ಪೋಸ್ಟ್‌ಗಳನ್ನು ಈ ಸಮೀಕ್ಷೆಯಲ್ಲಿ ಬಳಸಲಾಗಿದೆ. #selfie ಮತ್ತು #homeowners ಹ್ಯಾಷ್‌ಟ್ಯಾಗಳನ್ನು ಹೊಂದಿರುವ ಪೋಸ್ಟ್‌ಗಳನ್ನು ಬಳಸಿ,  ಸ್ಥಳವನ್ನು ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿರುವ ಪ್ರತಿಯೊಂದು ಪೋಟೋವನ್ನು ಮೈಕ್ರೋಸಾಫ್ಟ್‌ ಅಜ್ಯುರ್‌ (Microsoft Azure face recognition) ಮೂಲಕ ಸ್ಜ್ಯಾನ್‌ ಮಾಡಲಾಗಿ ವಿವಧ ಭಾವನೆಗಳ ಆಧಾರದ ಮೇಲೆ ಸ್ಕೋರ್‌ ನೀಡಲಾಗಿದೆ. ಸಿಟ್ಟು, ಭಯ, ಸಂತೋಷ, ಅಸಹ್ಯ, ದುಃಖ, ತಟಸ್ಥ ಮುಂತಾದ ಭಾವನೆಗಳನ್ನು ಬಳಸಲಾಗಿದೆ. ಎಲ್ಲ ಋಣಾತ್ಮಕ ಭಾವನೆಗಳನ್ನು ಒಂದೆಡೆ ಸೇರಿಸಿ ಸಮೀಕ್ಷೆ ಮಾಡಲಾಗಿದೆ. ಜಗತ್ತಿನಲ್ಲಿ ಮನೆ ಖರೀದಿಸಲು ಇಷ್ಟಪಡುವ ನಗರಗಳ ಸರಾಸರಿಗೆ ಹೋಲಿಸಿದರೆ, ಬಾರ್ಸಿಲೋನಾ ಸರಾಸರಿಗಿಂತ 15.6% ರಷ್ಟು ಹೆಚ್ಚಿದೆ.   ಚಂಢೀಗಡ 13%,  ಜೈಪುರ 10.8%, ಚೆನ್ನೈ 8.9%,  ಇಂದೋರ್‌ 7.4%,  ಲಖ್ನೌ  7.1% ರಷ್ಟು ಜಾಗತಿಕ ಸರಾಸರಿಗಿಂತ ಹೆಚ್ಚಿನ ಅಂಕ ಪಡೆದಿವೆ.

Follow Us:
Download App:
  • android
  • ios