Mumbai Attack ಮಾಸ್ಟರ್ ಮೈಂಡ್‌ಗೆ 31 ವರ್ಷ ಶಿಕ್ಷೆ ಕೊಟ್ಟ ಪಾಕಿಸ್ತಾನ!
* ಪಾಕಿಸ್ತಾನ ಒಂಥರಾ ವಿಚಿತ್ರ ದೇಶ
* ಭಯೋತ್ಪಾದಕರಿಗೆ ಶಿಕ್ಷೆ ಕೊಟ್ಟ ಪಾಕಿಸ್ತಾನ
* ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಇಮ್ರಾನ್ ಖಾನ್
*ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್‌ಗೆ 31 ವರ್ಷ ಶಿಕ್ಷೆ
ಇಸ್ಲಾಮಾಬಾದ್ (ಏ. 09) ಈ ಪಾಕಿಸ್ತಾನ (Pakistan) ಒಂಥರಾ ವಿಚಿತ್ರ, ತಾನೇ ಕುಮ್ಮಕ್ಕು ನೀಡುವುದು ಅಲ್ಲದೇ ಶಿಕ್ಷೆಯನ್ನು ವಿಧಿಸುತ್ತದೆ. ಮುಂಬೈ ದಾಳಿ (Hafiz Saeed) ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್‌ಗೆ ಪಾಕಿಸ್ತಾನ ನ್ಯಾಯಾಲಯ 31 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಜೈಲಿನಲ್ಲೇ ಇರುವ ಉಗ್ರನಿಗೆ ಮತ್ತೊಂದು ಶಿಕ್ಷೆ ಆದಂತೆ ಆಗಿದೆ.
ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಲಷ್ಕರ್ - ಎ - ತೊಯ್ಬಾ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್‌ಗೆ 31 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಲಾಹೋರ್‌ನಲ್ಲಿ ಇರುವ ನ್ಯಾಯಾಲಯವು ಹಫೀಜ್ ಸಯೀದ್‌ಗೆ ಜೈಲು ಶಿಕ್ಷೆ 3 ಲಕ್ಷದ 40 ಸಾವಿರ ಪಾಕಿಸ್ತಾನ ರೂಪಾಯಿ ದಂಡ ವಿಧಿಸಿದೆ.
ಲಷ್ಕರ್ - ಎ - ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋದಷ್ಟೇ ಅಲ್ಲ, ಸಾಕಷ್ಟು ಆಸ್ತಿಯನ್ನೂ ಪಾಕಿಸ್ತಾನದಲ್ಲಿ ಹೊಂದಿದ್ದಾನೆ. ಇದೀಗ ಆತನಿಗೆ ಸೇರಿದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ತಿಳಿಸಿದೆ.
2008 ನವೆಂಬರ್ 26 ರಂದು ಪಾಕಿಸ್ತಾನದಿಂದ ಬಂದಿದ್ದ ಉಗ್ರರು ಮುಂಬೈ ತಾಜ್ ಹೋಟೆಲ್ ಗೆ ನುಗ್ಗಿದ್ದರು. ಲಷ್ಕರ್ - ಎ - ತೊಯ್ಬಾ ಉಗ್ರ ಸಂಘಟನೆಯ ನಿರೂಪಕ ಈತ. ಪಾಕಿಸ್ತಾನದ ಒಳಗೆ ಕಾರ್ಯಾಚರಣೆ ನಡೆಸಲು ಜಮಾತ್ ಉದ್ ದವಾ ಎಂಬ ಸಂಘಟನೆ ಕಟ್ಟಿಕೊಂಡಿದ್ದಾನೆ. ಇದೇ ಸಂಘಟನೆ ವಿರುದ್ಧ ದಾಖಲಾಗಿದ್ದ 2 ಪ್ರಕರಣಗಳಲ್ಲಿ ಇದೀಗ ಹಫೀಜ್ ಸಯೀದ್ ದೋಷಿ ಎಂದು ಸಾಬೀತಾಗಿದ್ದು ಶಿಕ್ಷೆಗೆ ಗುರಿಪಡಿಸಲಾಗಿದೆ. ವಿವಿಧ ಕಡೆಗಳಿಂದ ಹಣ ಸಂಗ್ರಹಣೆ ಮಾಡಿಕೊಂಡು ಅದನ್ನು ಉಗ್ರ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದ.
ಉಗ್ರನ ಮನೆ ಹತ್ತಿರವೇ ಬಾಂಬ್ ಸ್ಫೋಟ
ಐಐಟಿ ಪದವಿಧರ ಮಾಡಿದ ಕೆಲಸ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖಪುರದ ಗೋರಖನಾಥ ಮಂದಿರದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಐಐಟಿ ಪದವೀಧರ ಅಹ್ಮದ್ ಮುರ್ತಜಾ ಅಬ್ಬಾಸಿ, ‘ಸಿಎಎ, ಎನ್‌ಆರ್‌ಸಿ ವಿವಾದ ಹಾಗೂ ಇತ್ತೀಚೆಗೆ ಕರ್ನಾಟಕದ ಹಿಜಾಬ್ ನಿರ್ಬಂಧ ತೀರ್ಮಾನದಿಂದ ನೊಂದಿದ್ದೆ. ಹೀಗಾಗಿ ಹತಾಶನಾಗಿ ದಾಳಿಗೆ ನಿರ್ಧರಿಸಿದ್ದೆ ಎನ್ನುವ ಮೂಲಕ ಬಾಂಬ್ ಸಿಡಿಸಿದ್ದ.
‘ಮುಸ್ಲಿಮರ ವಿರುದ್ಧ ಸಿಎಎ ಹಾಗೂ ಎನ್‌ಆರ್‌ಸಿಯನ್ನು ಸರ್ಕಾರ ಹೇರುತ್ತಿದೆ. ಕರ್ನಾಟಕದಲ್ಲಿ ಕೂಡ ಮುಸ್ಲಿಮರಿಗೆ ಹಿಜಾಬ್ ಧರಿಸಲು ನಿರ್ಬಂಧಿಸಲಾಗಿದೆ. ನಮ್ಮ ಸಹಾಯಕ್ಕೆ ಯಾರೂ ಬರುತ್ತಿಲ್ಲ. ಹೀಗಾಗಿ ಇದಕ್ಕೆ ಪ್ರತೀಕಾರವಾಗಿ ಏನೋ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಎಷ್ಟುಹತಾಶ ಆಗಿದ್ದೆ ಎಂದರೆ ನಿದ್ದೆ ಕೂಡ ಬರುತ್ತಿರಲಿಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದ.