Kabul Blast: ಕಾಬೂಲ್‌ನ 2 ಶಾಲೆಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ, ಮುಗ್ಧ ಮಕ್ಕಳು ಬಲಿ!
* ಅಫ್ಘಾನಿಸ್ತಾನ ರಾಜಧಾನಿ ಕಬೂಲ್‌ನಲ್ಲಿ ಆತ್ಮಾಹುತಿ ದಾಳಿ
* ದಾಳಿಗೆ ಏಳಕ್ಕೂ ಅಧಿಕ ಮಕ್ಕಳು ಬಲಿ
* ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ದಾಳಿ ನಡೆಸಿರುವ ಶಂಕೆ
ಕಾಬೂಲ್(ಏ.19): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತೊಮ್ಮೆ ಉಗ್ರರ ದಾಳಿಗೆ ತತ್ತರಿಸಿದೆ. ಈ ವೇಳೆ ಉಗ್ರರು ಅಮಾಯಕ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ. ಕಾಬೂಲ್‌ನ ಪಶ್ಚಿಮ ಪ್ರದೇಶದ ಎರಡು ಶಾಲೆಗಳ ಹೊರಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 25 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ಮಕ್ಕಳು ಸಹ ಗಾಯಗೊಂಡಿದ್ದಾರೆ.
ಶಾಲಾ ರಜೆ ಆರಂಭ, ಮನೆಯತ್ತ ಹೆಜ್ಜೆ ಹಾಕಿದ್ದ ಮಕ್ಕಳು
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಮ್ತಾಜ್ ಎಜುಕೇಶನಲ್ ಸೆಂಟರ್ ಬಳಿ ಮಂಗಳವಾರ ಮೊದಲ ಸ್ಫೋಟ ಸಂಭವಿಸಿದೆ. ಅಬ್ದುಲ್ ರಹೀಮ್ ಶಹೀದ್ ಹೈಸ್ಕೂಲ್ ಎದುರು ಎರಡನೇ ಸ್ಫೋಟ ಸಂಭವಿಸಿದೆ. ಈ ಸ್ಫೋಟಗಳು ನಡೆದಾಗ ಮಕ್ಕಳು ರಜೆ ಮುಗಿಸಿ ಮನೆಗೆ ತೆರಳಲು ಸಜ್ಜಾಗಿದ್ದರೆನ್ನಲಾಗಿದೆ. ಕಾಬೂಲ್‌ನ ದಸ್ತಾ-ಬರ್ಚಿ ಪ್ರದೇಶದಲ್ಲಿ ಸ್ಫೋಟಗಳು ಸಂಭವಿಸಿವೆ.
ಅಫ್ಘಾನಿಸ್ತಾನದ ಕೊನೆಯ ಹಣಕಾಸು ಸಚಿವ ಈಗ ಅಮೆರಿಕಾದಲ್ಲಿ ಉಬರ್ ಚಾಲಕ
ಇಸ್ಲಾಮಿಕ್ ಸ್ಟೇಟ್ ದಾಳಿ ನಡೆಸಿರುವ ಶಂಕೆ, ಆದರೆ ಇನ್ನೂ ಸಿಗದ ಸ್ಪಷ್ಟನೆ
ಈ ಸ್ಫೋಟಗಳ ಹೊಣೆಯನ್ನು ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ. ಅಂದಹಾಗೆ, ಈ ಇಸ್ಲಾಮಿಕ್ ಸ್ಟೇಟ್ ಅಫ್ಘಾನಿಸ್ತಾನದಲ್ಲಿ ಆಗಾಗ್ಗೆ ದಾಳಿ ನಡೆಸುತ್ತಿದೆ. ಹಾಗಾಗಿ ಈ ದಾಳಿ ಅವರೇ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಅವರು ಇನ್ನೂ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಇಸ್ಲಾಮಿಕ್ ಸ್ಟೇಟ್ ಅಫ್ಘಾನಿಸ್ತಾನದ ಶಿಯಾ ಮುಸ್ಲಿಂ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡಿದೆ. ತಾಲಿಬಾನ್ ಸರ್ಕಾರವು ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದೆ, ಆದರೆ ಈ ಸ್ಫೋಟಗಳು ತನ್ನ ಭದ್ರತಾ ವ್ಯವಸ್ಥೆಯ ನೈಜತೆಯನ್ನು ಬಹಿರಂಗಪಡಿಸಿವೆ. ಇಸ್ಲಾಮಿಕ್ ಸ್ಟೇಟ್ ಆಫ್ಘಾನಿಸ್ತಾನದಲ್ಲಿ 'ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾಂತ್ಯ' ಎಂಬ ಹೆಸರಿನಲ್ಲಿ ಸಕ್ರಿಯವಾಗಿದೆ.
ಆರಂಭದಿಂದಲೂ ದಾಳಿ
ಅಫ್ಘಾನಿಸ್ತಾನದಿಂದ ನ್ಯಾಟೋ ಪಡೆಗಳ ವಾಪಸಾತಿ ಮತ್ತು ತಾಲಿಬಾನ್ ವಶಪಡಿಸಿಕೊಂಡ ಬೆನ್ನಲ್ಲೇ ಇಲ್ಲಿ ಭಯೋತ್ಪಾದಕ ದಾಳಿಗಳು ಪ್ರಾರಂಭವಾದವು. ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಮೊದಲ ದಾಳಿ ನಡೆದಿತ್ತು. ಇದರ ನಂತರ ಕಾಬೂಲ್‌ನ ಮಧ್ಯಭಾಗದಲ್ಲಿರುವ 18ನೇ ಶತಮಾನದ ಪುಲ್-ಇ-ಖಿಶ್ತಿ ಮಸೀದಿಯ ಮೇಲೆ ದಾಳಿ ನಡೆಯಿತು. ಏಪ್ರಿಲ್ 4 ರಂದು ನಡೆದ ಈ ಭಯೋತ್ಪಾದಕ ದಾಳಿಯಲ್ಲಿ ಓರ್ವ ಶಂಕಿತನನ್ನು ಬಂಧಿಸಲಾಗಿತ್ತು.
20 ರಿಂದ 25 ನಿಮಿಷಗಳ ಮಧ್ಯಂತರದಲ್ಲಿ ಎಲ್ಲಾ ಸ್ಫೋಟಗಳು
ಮೂರು ಸ್ಫೋಟಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಟೋಲೋ ನ್ಯೂಸ್ ಪ್ರಕಾರ, ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯವು ದಾಳಿಗಳನ್ನು ದೃಢಪಡಿಸಿದೆ ಮತ್ತು ತನಿಖೆಗೆ ಆದೇಶಿಸಿದೆ. ಕೆಲವು ಮೂಲಗಳ ಪ್ರಕಾರ, ಸಾವನ್ನಪ್ಪಿದ ಮಕ್ಕಳ ಸಂಖ್ಯೆ 6. ಈ ಮೂರು ಸ್ಫೋಟಗಳು 20-25 ನಿಮಿಷಗಳ ಅಂತರದಲ್ಲಿ ನಡೆದಿವೆ.
ಅಫ್ಘಾನಿಸ್ತಾನದಲ್ಲಿ ಏರ್‌ಲಿಫ್ಟ್ ವೇಳೆ ಬೇರ್ಪಟ್ಟ ಹಾಲುಗಲ್ಲದ ಕಂದ ಮತ್ತೆ ಪೋಷಕರ ಮಡಿಲಿಗೆ
ಪಾಕಿಸ್ತಾನದೊಂದಿಗೆ ಪ್ರತ್ಯೇಕ ವಿವಾದ
ಪಾಕಿಸ್ತಾನದೊಂದಿಗೆ ತಾಲಿಬಾನ್ ಸಂಬಂಧವೂ ಸರಿಯಾಗಿಲ್ಲ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ ವೈಮಾನಿಕ ದಾಳಿ ನಡೆಸಿತು, ಇದರಲ್ಲಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಇದಾದ ಬಳಿಕ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನ ಎಚ್ಚರಿಕೆ ನೀಡಿದ್ದು, ಮತ್ತೆ ಇಂತಹ ಘಟನೆ ನಡೆದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.