ಕೆನಡಾದಲ್ಲಿ ಕನ್ನಡದ ಕಂಪು: ಕನ್ನಡದಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಕನ್ನಡಿಗ

  • ಕೆನಡಾದಲ್ಲಿ ಕನ್ನಡದ ಕಂಪು ಬೀರಿದ ಆರ್ಯಚಂದ್ರ
  • ಕನ್ನಡದಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕಾರ
  • ಕೆನಡಾ ಸಂಸತ್‌ನಲ್ಲಿ ಕನ್ನಡದಲ್ಲಿ ಪ್ರಮಾಣವಚನ
     
MP from Canada parliment Arya chandra from Tumkur take oath in Kannada language akb

ಕೆನಡಾ: ಕರ್ನಾಟಕದ (Karnataka) ವ್ಯಕ್ತಿಯೊಬ್ಬರು ಕೆನಡಾದಲ್ಲಿ(Canada) ಸಂಸದರಾಗಿದ್ದು, ಕನ್ನಡದಲ್ಲೇ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗಿದೆ. ಕನ್ನಡಿಗರು ಅವರು ಕನ್ನಡದಲ್ಲಿ ಮಾತನಾಡುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹೆಮ್ಮೆ ಪಡುತ್ತಿದ್ದಾರೆ.

ಕನ್ನಡಿಗರ ಪಾಲಿಗೆ ಇದು ಹೆಮ್ಮೆಯ ಕ್ಷಣವಾಗಿದೆ. ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗ್ರಾಮವೊಂದರ ಚಂದ್ರ ಆರ್ಯ ಎಂಬವರೇ ಹೀಗೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವ್ಯಕ್ತಿ. ಇವರು ಕೆನಡಾದಲ್ಲಿ ಸಂಸದರಾಗಿದ್ದು, ಕನ್ನಡ ಭಾಷೆಯಲ್ಲಿಯೇ ಕೆನಡಾ ಸಂಸತ್‌ನಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. 

"

 

ಅವರು ಪ್ರಮಾಣ ವಚನದ ಸಂಪೂರ್ಣ ಸಾರಾಂಶ ಹೀಗಿದೆ. 

ಮಾನ್ಯ ಸಭಾಪತಿ ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಶಿಲ್ಲೆಯ ದುವಾರು ಗ್ರಾಮದ ವ್ಯಕ್ತಿಯೊಬ್ಬ ಕೆನಡದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುತ್ತಿರುವುದು ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. 

ತಮಿಳು ಸಿನಿಮಾದಲ್ಲಿ ಕನ್ನಡದ ಕಂಪು ಬೀರಿದ ಕ್ಯಾಪ್ಟನ್!

ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತೇನೆ. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಧನ್ಯವಾದಗಳು ಸಭಾಪತಿ ಹೀಗೆ ಹೇಳಿ ಶಿರಾದ ಚಂದ್ರ ಆರ್ಯ ಅವರು ತಮ್ಮ ಪ್ರಮಾಣ ವಚನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದಾರೆ.

ಮಾರಕ ಕೊರೋನಾಗೆ ವ್ಯಾಕ್ಸಿನ್ : ವಿಜ್ಞಾನಿಗಳ ತಂಡದಲ್ಲಿ ನಮ್ಮ ಕನ್ನಡಿಗ

ನಮ್ಮ ರಾಜ್ಯದಲ್ಲೇ ಕನ್ನಡ ಮಾತನಾಡಲು ಕಷ್ಟಪಡುವ, ಕನ್ನಡದ ಬಗ್ಗೆ ತಾತ್ಸಾರ ತೋರುವ, ಓ ಕನ್ನಡನಾ ಅಂತ ತಾತ್ಸಾರದಿಂದ ಮಾತನಾಡುವ, ಪುಟ್ಟ ಮಕ್ಕಳೊಂದಿಗೆ ಮನೆಯಲ್ಲೂ ಇಂಗ್ಲೀಷ್ ಮಾತನಾಡುತ್ತಾ ಥೇಮ್ಸ್‌ ನೀರು ಕುಡಿದಂತೆ ಮಾಡುವ ಕನ್ನಡಿಗರಿರುವಾಗ ದೂರದ ಕೆನಡಾದಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಕನ್ನಡ ಮಾತನಾಡುವ ಅನಿವಾರ್ಯತೆ ಇಲ್ಲದಿದ್ದರು, ಕನ್ನಡದ ಮೇಲಿನ ಅಪಾರವಾದ ಹೆಮ್ಮೆಯಿಂದ ಅಭಿಮಾನದಿಂದ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ತುಮಕೂರಿನ ಆರ್ಯಚಂದ್ರ ಐದು ಕೋಟಿ ಕನ್ನಡಿಗರ ಪಾಲಿಗೆ ಹೆಮ್ಮೆ ಪಡುವ ವ್ಯಕ್ತಿಯಾಗಿದ್ದಾರೆ. ಕನ್ನಡದ ಕಂಪನ್ನು ವಿಶ್ವಮಟ್ಟದಲ್ಲಿ ಹಬ್ಬಿಸಿದ ಅವರಿಗೆ ಎಲ್ಲರೂ ಸಲಾಂ ಹೇಳಲೇಬೇಕು.

ಕನ್ನಡ ಭಾಷೆ ಮೇಲಿನ ಅಭಿಮಾನವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುವ ಹಲವಾರು ಉದಾಹರಣೆಗಳನ್ನು ಪ್ರತಿದಿನ ಕಾಣುತ್ತಿರುತ್ತೇವೆ. ಇಲ್ಲೊಬ್ಬ ಮಹನೀಯರು ಕನ್ನಡದ ಕಂಪು ಪಸರಿಸುವ ಕೆಲಸವನ್ನು ತಮ್ಮ ಹೋಟೆಲ್ ಮೂಲಕ ಮಾಡಿಕೊಂಡು ಬಂದಿದ್ದಾರೆ. ಅವರೇ ಕನ್ನಡ ಕೆಫೆ ಮುಖ್ಯಸ್ಥ ಸುರೇಶ್ ಗೌಡ. ಕಾಫಿ ಹೀರುತ್ತಾ ಕನ್ನಡದ ಹಳೆಯ ಚಿತ್ರಗೀತೆಗಳಿಗೆ ಕಿವಿಯಾಗುತ್ತಾ, ಕನ್ನಡದ ಸಾಧಕರ ಪೋಟೋಗಳನ್ನು ಕಣ್ಣ ಮುಂದೆ ಕಾಣುತ್ತಾ, ಅವರ ಸಾಧನೆಗಳ ಮೇಲೆ ಒಂದು ಮೆಲುಕು ಹಾಕುತ್ತ ಇದ್ದರೆ ಒಬ್ಬ ನಿಜ ಕನ್ನಡ ಪ್ರೇಮಿಗೆ ಇನ್ನೇನು ಬೇಕು. ಬೆಂಗಳೂರು ಜಯನಗರದ ‘ಕನ್ನಡ ಕೆಫೆ’ ಯಲ್ಲಿ ಇಂಥದ್ದೊಂದು ಅವಕಾಶ ನಿಮಗಾಗಿ ತೆರೆದುಕೊಂಡಿದೆ.

ಇಂಥದ್ದೊಂದು ಹೊಸ ಅನುಭವ ನೀಡುವ, ಹೊಟ್ಟೆ ಜತೆಗೆ ಮನಸ್ಸಿಗೂ ಮುದ ನೀಡುವ ತಾಣ ಜಯನಗರದ 'ಕನ್ನಡ ಕೆಫೆ'.  ಹೋಟೆಲ್ ನ ಎಲ್ಲ ಭಾಗದಲ್ಲಿಯೂ ಕನ್ನಡದ ಘೋಷ ವಾಕ್ಯಗಳನ್ನು ಬರೆಯಲಾಗಿದ್ದು ನಮ್ಮಲ್ಲೇ ಹುದುಗಿರುವ ಕನ್ನಡ ಪ್ರೇಮ ಜಾಗೃತವಾಗುತ್ತದೆ. ಗೋಡೆಗಳ ಮೇಲೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಗಳು ಗಮನ ಸೆಳೆಯುತ್ತವೆ. ರಾಜಧಾನಿ ಬೆಂಗಳೂರಿನ ಸೊಬಗು, ಮೈಸೂರು ದಸರಾ, ಪಾರಂಪರಿಕ ತಾಣಗಳಾದ ಬಾದಾಮಿ-ಐಹೊಳೆ, ಪಟ್ಟದಕಲ್ಲು, ಹಂಪಿಯ ದೃಶ್ಯ ವೈಭವವನ್ನು ಕಣ್ಣು ತುಂಬಿಕೊಳ್ಳಬಹುದು

Latest Videos
Follow Us:
Download App:
  • android
  • ios