ಮಾರಕ ಕೊರೋನಾಗೆ ವ್ಯಾಕ್ಸಿನ್ : ವಿಜ್ಞಾನಿಗಳ ತಂಡದಲ್ಲಿ ನಮ್ಮ ಕನ್ನಡಿಗ

ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಮಾರಕ ವೈರಸ್ ನಿಯಂತ್ರಣಕ್ಕೆ ಔಷಧ ಕಂಡು ಹಿಡಿಯುವ ಯತ್ನ ನಡೆಯುತ್ತಿದೆ. ಈ ತಂಡದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರೊಬ್ಬರು ಇದ್ದಾರೆ. 

Hassan Based Scientist Join Team To Vaccine Detection for coronavirus

ಹಾಸನ [ಮಾ.16]: ಕೊರೋನಾ ಮಹಾಮಾರಿ ಇದೀಗ ದೇಶದಲ್ಲಿ ತಾಂಡವವಾಡುತ್ತಿದೆ. ವಿಶ್ವದಾದ್ಯಂತ 6 ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಭಾರತದಲ್ಲಿಯೂ ಮೂರು ಸಾವುಗಳಾಗಿದೆ. ಇದೇ ಬೆನ್ನಲ್ಲೇ ಔಷಧ ಕಂಡು ಹಿಡಿಯುವ ಯತ್ನ ನಡೆದಿದೆ. 

"

ಈ ನಿಟ್ಟಿನಲ್ಲಿ ಇದೀಗ ಕೊರೋನ‌ ವೈರಸ್ ಗೆ ಔಷಧ ಕಂಡು ಹಿಡಯುವ ಯತ್ನ ಪ್ರಗತಿಯಲ್ಲಿದೆ. ವ್ಯಾಕ್ಸಿನ್ ಕಂಡುಹಿಡಿಯಲು ತಂಡ ರಚನೆ ಮಾಡಲಾಗಿದ್ದು, ತಂಡದಲ್ಲಿ‌ ಹಾಸನ ಮೂಲದ ಕನ್ನಡಿಗರೊಬ್ಬರು ಸ್ಥಾನ ಪಡೆದಿದ್ದಾರೆ. 

ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್  ಕೊರೊನ ವೈರಸ್ ತಂಡದಲ್ಲಿ ನಮ್ಮ ಕರುನಾಡಿದ  ಮಹದೇಶ್ ಪ್ರಸಾದ್ ಸ್ಥಾನ ಪಡೆದಿದ್ದಾರೆ. 

ಕೊರೋನಾ : ಮಂಗಳೂರಲ್ಲಿ 9 ಮಂದಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ...

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನವರಾದ ಮಹದೇಶ ಪ್ರಸಾದ್  ಜರ್ಮನಿಯಲ್ಲಿ ವಿಜ್ಞಾನಿಯಾಗಿದ್ದು, ಕಳೆದ ಒಂದು ವರ್ಷದಿಂದ ಸಂಶೋಧನೆ ಸಲುವಾಗಿ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. 

ಇದೀಗ ಯುರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೋನ ವ್ಯಾಕ್ಸಿನ್ ಕಂಡು ಹಿಡಿಯಲು ಹತ್ತು ತಂಡ ರಚಿಸಿದ್ದು ಈ ತಂಡದಲ್ಲಿ ಸ್ಥಾನ ಪಡೆದು ಕರುನಾಡಿಗೆ ಹೆಮ್ಮೆ ತಂದಿದ್ದಾರೆ. 

Latest Videos
Follow Us:
Download App:
  • android
  • ios