ಬೀಜಿಂಗ್‌(ಡಿ.09): ಜಗತ್ತಿನ ಅತಿ ಎತ್ತರದ ಪರ್ವತವೆಂಬ ಖ್ಯಾತಿ ಪಡೆದಿರುವ ನೇಪಾಳದ ಮೌಂಟ್‌ ಎವರೆಸ್ಟ್‌ನ ಹೊಸ ಎತ್ತರ 8848.86 ಮೀಟರ್‌ ಎಂದು ನೇಪಾಳ ಮತ್ತು ಚೀನಾ ಜಂಟಿಯಾಗಿ ಪ್ರಕಟಿಸಿವೆ. ಇದು 1954ರಲ್ಲಿ ಭಾರತ ಸರ್ಕಾರ ತನ್ನ ಸರ್ವೇ ಇಲಾಖೆಯಿಂದ ಸಮೀಕ್ಷೆ ನಡೆಸಿ ಅಳೆದಿದ್ದ 8848 ಮೀಟರ್‌ಗಿಂತ 86 ಸೆಂ.ಮೀ.ಗಳಷ್ಟುಹೆಚ್ಚು.

ಲಾಕ್‌ಡೌನ್‌ನಿಂದ ತಗ್ಗಿದ ಮಾಲಿನ್ಯ, ಬಿಹಾರದಿಂದ ಕಾಣಿಸುತ್ತಿದೆ ಮೌಂಟ್ ಎವರೆಸ್ಟ್ ಶಿಖರ!

2015ರಲ್ಲಿ ಸಂಭವಿಸಿದ ಭಾರಿ ಭೂಕಂಪನ ಹಾಗೂ ಇನ್ನಿತರ ಹಲವಾರು ಕಾರಣಗಳಿಂದ ಎವರೆಸ್ಟ್‌ನ ಎತ್ತರ ಬದಲಾಗಿರಬಹುದು ಎಂಬ ಕಾರಣಕ್ಕೆ ನೇಪಾಳ ಸರ್ಕಾರ ಪರ್ವತದ ಈಗಿನ ನಿಖರ ಎತ್ತರವನ್ನು ಅಳೆಯಲು ನಿರ್ಧರಿಸಿ ಸಮೀಕ್ಷೆ ನಡೆಸಿದೆ. ನೇಪಾಳ ಹಾಗೂ ಚೀನಾ ಈ ಸಮೀಕ್ಷೆಯನ್ನು ಜಂಟಿಯಾಗಿ ನಡೆಸಿದ್ದು, ಎವರೆಸ್ಟ್‌ನ ನಿಖರ ಎತ್ತರ 8848.86 ಮೀಟರ್‌ ಎಂದು ಪ್ರಕಟಿಸಿರುವುದಾಗಿ ಚೀನಾದ ಸರ್ಕಾರಿ ನ್ಯೂಸ್‌ ಏಜೆನ್ಸಿ ‘ಕ್ಸಿನುವಾ’ ಮಂಗಳವಾರ ಪ್ರಕಟಿಸಿದೆ. ಜೊತೆಗೆ, ನೇಪಾಳದ ವಿದೇಶಾಂಗ ಸಚಿವ ಪ್ರದೀಪ್‌ ಗ್ಯಾವಳಿ ಕೂಡ ಇದನ್ನೇ ಪ್ರಕಟಿಸಿದ್ದಾರೆ.

ಇಲ್ಲಿಯವರೆಗೂ ಭಾರತ ಸರ್ಕಾರ 1954ರಲ್ಲಿ ಮೌಂಟ್‌ ಎವರೆಸ್ಟನ್ನು ಅಳೆದು ತಿಳಿಸಿದ್ದ 8848 ಮೀಟರ್‌ ಎತ್ತರವನ್ನೇ ಜಗತ್ತು ನೆಚ್ಚಿಕೊಂಡಿತ್ತು. ನಂತರ ಚೀನಾ 1975ರಲ್ಲಿ ಒಂದು ಬಾರಿ ಹಾಗೂ 2005ರಲ್ಲಿ ಇನ್ನೊಂದು ಬಾರಿ ಮೌಂಟ್‌ ಎವರೆಸ್ಟನ್ನು ಅಳೆದು ಅದರ ಎತ್ತರ 8848.13 ಮೀಟರ್‌ ಹಾಗೂ 8844.43 ಮೀಟರ್‌ ಎಂದು ವಿಭಿನ್ನ ಅಳತೆಯನ್ನು ಹೇಳಿತ್ತು. ನೇಪಾಳ ಮತ್ತು ಚೀನಾದ ಗಡಿಯಲ್ಲಿ ನೇಪಾಳದೊಳಗೆ ಮೌಂಟ್‌ ಎವರೆಸ್ಟ್‌ ಇದೆ. ಉಭಯ ದೇಶಗಳ ನಡುವೆ ಈ ಭಾಗದ ಗಡಿ ಬಗ್ಗೆ ಇದ್ದ ವಿವಾದ 1961ರಲ್ಲಿ ಬಗೆಹರಿದಿದೆ.

ಲಾಕ್‌ಡೌನ್‌ನಿಂದ ತಗ್ಗಿದ ಮಾಲಿನ್ಯ, ಬಿಹಾರದಿಂದ ಕಾಣಿಸುತ್ತಿದೆ ಮೌಂಟ್ ಎವರೆಸ್ಟ್ ಶಿಖರ!

ಅಳೆದಿದ್ದೇಕೆ?

2015ರಲ್ಲಿ ಸಂಭವಿಸಿದ ಭಾರಿ ಭೂಕಂಪ ಹಾಗೂ ಇನ್ನಿತರ ನೈಸರ್ಗಿಕ ಕಾರಣಗಳಿಂದ ಮೌಂಟ್‌ ಎವರೆಸ್ಟ್‌ನ ಎತ್ತರ ಬದಲಾಗಿರಬಹುದು ಎಂಬ ಅನುಮಾನ ನೇಪಾಳಕ್ಕಿತ್ತು. ಹೀಗಾಗಿ ಹೊಸತಾಗಿ ಅಳೆದಿದೆ