Asianet Suvarna News Asianet Suvarna News

ಮನುಷ್ಯನಿಗೆ ಅಪಾಯಕಾರಿಯಾದ ಈ ಪಕ್ಷಿ ಅಳಿವಿನಂಚಿನಲ್ಲಿದೆ!

ಸೌಮ್ಯವಾಗಿ ಕಾಣುವ ವ್ಯಕ್ತಿಗಳು ಸ್ವಭಾವದಲ್ಲಿ ಸೌಮ್ಯವಾಗಿರಬೇಕೆಂದೇನಿಲ್ಲ. ಈ ಪಕ್ಷಿ ಕೂಡ ಹಾಗೆ. ನೋಡೋಕೆ ನಾಚಿಗೆ ಸ್ವಭಾವದಂತೆ ಕಂಡ್ರೂ ಆಕ್ರಮಣ ಮಾಡಿದ್ರೆ ಸಾವು ಗ್ಯಾರಂಟಿ. ಗಿನ್ನಿಸ್ ದಾಖಲೆ ಸೇರಿರುವ ಈ ಪಕ್ಷಿ ಬಗ್ಗೆ ನಿಮಗೆಷ್ಟು ಗೊತ್ತು?

Most Dangerous Bird In The World is endangered Cassowary Bird roo
Author
First Published Nov 16, 2023, 3:14 PM IST

ಪಕ್ಷಿ ಎಂದರೆ ಸ್ವಚ್ಛಂದತೆಯ ಹಾಗೂ ಶಾಂತಿಯ ಪ್ರತೀಕ. ತಮ್ಮ ಶ್ರಮದಿಂದಲೇ ಗೂಡು ಕಟ್ಟಿಕೊಂಡು, ಆಹಾರ ಹುಡುಕಿ ತಿನ್ನುತ್ತ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಅವುಗಳು ನೋಡಲು ಬಹಳ ಚೆಂದ. ನಮ್ಮ ಸುತ್ತಲೇ ನಾವು ಅನೇಕ ಜಾತಿಯ ಪಕ್ಷಿಗಳನ್ನು ನೋಡುತ್ತೇವೆ. ಕೆಲವೊಂದು ಪಕ್ಷಿಗಳು ನೋಡಲು ಸುಂದರವಾಗಿದ್ದರೆ ಬಹಳ ಅಪರೂಪಕ್ಕೆ ಕೆಲ ಪಕ್ಷಿಗಳು ಭಯಾನಕವಾಗಿರುತ್ತವೆ. ಹಾಗೆಯೇ ಒಂದೊಂದು ಹಕ್ಕಿಗಳು ಒಂದೊಂದು ಬಗೆಯ ಬಣ್ಣವನ್ನು, ಆಕಾರವನ್ನು ಹೊಂದಿರುತ್ತವೆ. ಎಲ್ಲ ಪಕ್ಷಿಗಳು ಸ್ನೇಹಪರವಲ್ಲ.  ಪಕ್ಷಿಗಳಲ್ಲಿ ಅಪಾಯಕಾರಿ ಪಕ್ಷಿಗಳು ಕೂಡ ಇವೆ.

ಹದ್ದು (Eagle), ರಣಹದ್ದು ಮುಂತಾದ ಅಪಾಯಕಾರಿ ಪರಭಕ್ಷಕ ಪಕ್ಷಿಗಳ ಹೆಸರನ್ನು ನಾವು ಕೇಳಿದ್ದೇವೆ. ರಣಹದ್ದು ಕೆಲ ಬಾರಿ ಮನುಷ್ಯನ ಮೇಲೆ ದಾಳಿ ನಡೆಸುತ್ತದೆ. ಇಂದು ನಾವು ಹೇಳಲು ಹೊರಟಿರುವ ಈ ಪಕ್ಷಿ (bird)  ಕೂಡ ಅಷ್ಟೇ ಅಪಾಯಕಾರಿ. ಈ ಪಕ್ಷಿ ಗಿನ್ನಿಸ್ ದಾಖಲೆಗೆ ಸೇರಿದೆ. ಈ ಹಕ್ಕಿ ತನ್ನ ಬಣ್ಣದಿಂದಲೋ ಅಥವಾ ಜೀವನಕ್ರಮದಿಂದಲೋ ಫೇಮಸ್ ಆಗಿಲ್ಲ. ಬದಲಾಗಿ ಇದು ಅಪಾಯಕಾರಿ ಪಕ್ಷಿ ಎಂಬ ದಾಖಲೆ ಸೃಷ್ಟಿಸಿದೆ. 2019ರಲ್ಲಿ ನಡೆದ ಘಟನೆಯ ನಂತರ ಇದು ಜಾಗತಿಕ ಮಟ್ಟದಲ್ಲೇ ಅತ್ಯಂತ ಅಪಾಯಕಾರಿ ಪಕ್ಷಿ ಎಂಬ ಬಿರುದಿಗೆ ಒಳಗಾಗಿದೆ.

ಬಟ್ಟೆ ಬಿಚ್ಚಿ ಕ್ಯಾಮರಾಗೆ ಫೋಸ್ ಕೊಡೋ ಉರ್ಫಿ ಜಾವೇದ್, ವೈರಲ್ ಆಗಿ ಗಳಿಸಿರೋ ಆಸ್ತಿ ಅಷ್ಟಿಷ್ಟಲ್ಲ!

ಕ್ಯಾಸೊವರಿ (Cassowary) ಎಂಬ ಅಪಾಯಕಾರಿ ಪಕ್ಷಿ: ಈ ಕ್ಯಾಸೊವರಿ ಎಂಬ ದೈತ್ಯಾಕಾರದ ಪಕ್ಷಿ ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಂಡುಬರುತ್ತವೆ. ಹಾರಲಾಗದ ಈ ದೊಡ್ಡ ಪಕ್ಷಿ 6 ಅಡಿ ಆರು ಇಂಚು ಎತ್ತರ ಮತ್ತು ಸುಮಾರು 60 ಕೆಜಿ ತೂಕವಿರುತ್ತದೆ. ನೋಡುಗರ ಕಣ್ಣಿಗೆ ಇದು ಆಸ್ಟ್ರಿಚ್ ಮತ್ತು ಎಮುಗಳಂತೆಯೇ ಕಾಣುತ್ತವೆ. ಎಪ್ರಿಲ್ 12, 2019ರಂದು ಅಮೆರಿಕದ ಫ್ಲೋರಿಡಾದದಲ್ಲಿ 75 ವರ್ಷದ ವ್ಯಕ್ತಿಯೊಬ್ಬರು ಕ್ಯಾಸೊವರಿ ಪಕ್ಷಿಯ ದಾಳಿಗೆ ಒಳಗಾದ ನಂತರ ಈ ಪಕ್ಷಿ ಅಪಾಯಕಾರಿ ಎನ್ನುವುದು ಬೆಳಕಿಗೆ ಬಂತು. ಅನೇಕ ಸಾವಿರ ವರ್ಷಗಳ ಹಿಂದೆಯೇ ಮನುಷ್ಯರು ಕ್ಯಾಸೊವರಿಯ ಮೊಟ್ಟೆ, ಮಾಂಸ ಮತ್ತು ಗರಿಗಳಿಗಾಗಿ ಅವುಗಳನ್ನು ಪಂಜರದಲ್ಲಿಟ್ಟು ಸಾಕುತ್ತಿದ್ದರು ಎನ್ನುವುದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ. ಇಂದಿಗೂ ಪಪುಪಾ ನ್ಯೂಗಿನಿಯಾದಲ್ಲಿ ಕ್ಯಾಸೊವೆರಿಗಳನ್ನು ಸಾಕಲಾಗುತ್ತದೆ. 

ಕಸಕ್ಕೆ ಎಸೀಬೇಕಾಗಿದ್ದ ಪೇಂಟಿಂಗ್ ₹208 ಕೋಟಿಗೆ ಹರಾಜು!

ಪ್ರಾಣಾಂತಿಕ ಈ ಕ್ಯಾಸೊವರಿ ದಾಳಿ : ಈ ಅಪಾಯಕಾರಿ ದೈತ್ಯ ಪಕ್ಷಿ ಈಗ ಅಳಿವಿನಂಚಿನಲ್ಲಿದೆ. ಈ ಹಕ್ಕಿಯ ಕಾಲುಗಳು ಉಳಿದ ಹಕ್ಕಿಗಳಿಗಿಂತ ಭಿನ್ನವಾಗಿದೆ. ಹೆಚ್ಚು ನಾಚಿಕೆ ಸ್ವಭಾವದ ಪಕ್ಷಿ ಇದಾದರೂ,  ಇವು ಬೆದರಿಕೆ ಹಾಕುವಾಗ ಅಥವಾ ದಾಳಿ ಮಾಡುವಾಗ ತಮ್ಮ ಬಲಿಷ್ಠವಾದ ಉಗುರುಗಳನ್ನು ಬಳಸುತ್ತವೆ. ಈ ಪಕ್ಷಿಯ ಉಗುರು ಸಾಮಾನ್ಯವಾಗಿ 12 ಸೆಂ.ಮೀ ಉದ್ದವಿರುತ್ತದೆ. ಇದರಿಂದ ಗಂಭೀರವಾದ ಗಾಯಗಳು, ರಕ್ತಸ್ರಾವ ಉಂಟಾಗುತ್ತದೆ. ಕೆಲವೊಮ್ಮೆ ಇವುಗಳ ದಾಳಿ ಮಾರಣಾಂತಿಕವೂ ಆಗಬಹುದು. ಸಾಮಾನ್ಯವಾಗಿ ಹಕ್ಕಿಗಳು ಭೇಟೆಯಾಡುವಾಗ ತಮ್ಮ ಕಾಲುಗಳನ್ನೇ ಬಳಸುತ್ತಾರೆ. ಆದರೆ ಎಲ್ಲ ಹಕ್ಕಿಗಳೂ ಕ್ಯಾಸೊವರಿಗಳಂತೆ ಪ್ರಾಣಾಂತಿಕವಾಗಿರುವುದಿಲ್ಲ. ರಣಹದ್ದು,  ಹದ್ದು,  ಕ್ಯಾಸೊವರಿಗಳಂತಹ ದೈತ್ಯ ಪಕ್ಷಿಗಳು ಮಾತ್ರ ಹೀಗೆ ಜೀವಕ್ಕೆ ಗಂಭೀರ ಅಥವಾ ಮಾರಣಾಂತಿಕ ಗಾಯವನ್ನು ಉಂಟುಮಾಡಬಲ್ಲವು.

1926ರ ಏಪ್ರಿಲ್ ನಲ್ಲಿ 16 ವರ್ಷದ ಫಿಲಿಪ್ ಮೆಕ್ಲೀನ್ ಎನ್ನುವ ಬೇಟೆಗಾರನೊಬ್ಬ ಕ್ಯಾಸೊವರಿ ದಾಳಿಗೆ ಬಲಿಯಾಗಿದ್ದ. ಈ ದಾಳಿ ನಡೆದ 93 ವರ್ಷಗಳ ನಂತರ 2019ರಲ್ಲಿ ಮತ್ತೆ ಕ್ಯಾಸೊವರಿ ಪಕ್ಷಿ ದಾಳಿ ಮಾಡಿರುವುದು ಕಂಡುಬಂದಿದೆ. ಆಸ್ಟ್ರೇಲಿಯಾದ ಕಡಲತೀರದಲ್ಲಿ ಕಂಡುಬರುವ ಈ ಪಕ್ಷಿಯನ್ನು ನೋಡಿದರೇ ಜನರು ಹೆದರುತ್ತಾರೆ. ಇದು ಸರಳ, ಶಕ್ತಿಯುತ ಮತ್ತು ಅಪಾಯಕಾರಿ ಜೀವಿಗಳಲ್ಲಿ ಒಂದಾಗಿದೆ.
 

Follow Us:
Download App:
  • android
  • ios