ಕಸಕ್ಕೆ ಎಸೀಬೇಕಾಗಿದ್ದ ಪೇಂಟಿಂಗ್ ₹208 ಕೋಟಿಗೆ ಹರಾಜು!

ಒಂದು ಪೇಂಟಿಂಗ್ ಕೂಡ ಅದೃಷ್ಟ ಬದಲಿಸಬಹುದು. ಪ್ರಯೋಜನವಿಲ್ಲ ಅಂದ್ಕೊಂಡಿದ್ದ ವಸ್ತುವೇ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡ್ಬಹುದು. ಹಳೆ ವಸ್ತುವನ್ನು ಪರಿಶೀಲಿಸದೆ ಕಸಕ್ಕೆ ಹಾಕ್ಬೇಡಿ. ಫ್ರಾನ್ಸ್ ನಲ್ಲಿ ಕಸಕ್ಕೆ ಎಸೆಯಲ್ಪಡ್ತಿದ್ದ ಪೇಂಟಿಂಗ್ ಈಗ ಮ್ಯೂಜಿಯಂ ಸೇರಿದೆ.
 

Old Woman Planned To Throw Painting In Trash Auctions In Twenty Five Million Dollars roo

ನಮ್ಮ ಹಳೆ ಮನೆಗಳನ್ನು ಕ್ಲೀನ್ ಮಾಡುವಾಗ ಕೆಲವೊಂದು ಹಳೆ ವಸ್ತುಗಳು ಸಿಗುತ್ವೆ. ನಾವದನ್ನು ಪ್ರಯೋಜನಕ್ಕೆ ಬಾರದ್ದು ಎಂಬ ಕಾರಣಕ್ಕೆ ಎಸೆಯುತ್ತೇವೆ. ಆದ್ರೆ ಈ ಹಳೆ ವಸ್ತುಗಳು ಅನೇಕ ಬಾರಿ ನಮ್ಮ ಕಲ್ಪನೆಗೆ ಮೀರಿದ ಲಾಭ ತಂದುಕೊಡುತ್ತದೆ. ಈಗಾಗಲೇ ಅನೇಕರ ಅದೃಷ್ಟವನ್ನು ಈ ಹಳೆ ಪೇಂಟಿಂಗ್, ವಸ್ತುಗಳು ಬದಲಿಸಿವೆ. ಹಳೆ ನಾಣ್ಯ, ಹಳೆ ವಸ್ತು, ಹಳೆ ಪೇಟಿಂಗ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. 

ಈ ಅಜ್ಜಿಗೂ ಇದೇ ಆಗಿದೆ.  ಮನೆ ಕ್ಲೀನ್ (Clean) ಮಾಡುವ ಸಮಯದಲ್ಲಿ ಅಡುಗೆ ಮನೆ ಬಳಿ ಹಳೆ ಪೇಂಟಿಂಗ್ (Painting) ಒಂದು ಸಿಕ್ಕಿದೆ. ಮೊದಲು ಮಹಿಳೆ ಇದನ್ನು ಮಾಮೂಲಿ ಪೇಂಟಿಂಗ್ ಎಂದುಕೊಂಡಿದ್ದಾಳೆ. ಈ ಪೇಂಟಿಂಗ್ ನಲ್ಲಿ ರಷ್ಯಾಕ್ಕೆ ಸಂಬಂಧಿಸಿದ ಕೆಲವು ಅನುಪಯುಕ್ತ ವಿಷಯ ಇದೆ ಎಂದು ಭಾವಿಸಿದ್ದ ತೊಂಭತ್ತು ವರ್ಷದ ಮಹಿಳೆ ಇದನ್ನು ಕಸಕ್ಕೆ ಎಸೆಯಲು ಯೋಜಿಸಿದ್ದಾಳೆ. ನಂತ್ರ ಪೇಂಟಿಂಗ್ ಮಹತ್ವ ಗೊತ್ತಾಗಿದೆ. ಇದು ಸಾಮಾನ್ಯದಲ್ಲ ಎಂಬ ವಿಷ್ಯ ತಿಳಿದಿದೆ. ಆ ಪೇಂಟಿಂಗ್ ಯಾವುದು, ಅದರ ಬೆಲೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ಗೃಹಸಾಲ ವಿಮೆ ಕಡ್ಡಾಯವೇ? ಗೃಹಸಾಲ ಪಡೆಯೋ ಪ್ರತಿಯೊಬ್ಬರೂ ಈ ಮಾಹಿತಿ ಹೊಂದಿರೋದು ಅಗತ್ಯ

ಅಡುಗೆ ಮನೆಯಲ್ಲಿ ಸಿಕ್ಕ ಪೇಂಟಿಂಗ್ ವಿಶೇಷ ಏನು? : ಘಟನೆ ನಡೆದಿರೋದು ಫ್ರಾನ್ಸ್ (France) ನಲ್ಲಿ.  ವೃದ್ಧೆ ಮನೆಯಲ್ಲಿದ್ದ ಪೇಂಟಿಂಗನ್ನು ಆಗಾಗ ನೋಡ್ತಿದ್ದಳು.  ಆದ್ರೆ ಅದನ್ನು ಯಾರು ಬಿಡಿಸಿದ್ದು, ಅದರ ಬೆಲೆ ಎಷ್ಟು ಎಂಬುದು ಗೊತ್ತಿರಲಿಲ್ಲ. ಆಕೆ ಮನೆಯಲ್ಲಿ ಈ ಪೇಂಟಿಂಗ್ ಹೇಗೆ ಬಂತು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಪೇಟಿಂಗ್ 25 ಮಿಲಿಯನ್ ಡಾಲರ್ ಅಂದ್ರೆ  ಸುಮಾರು 208 ಕೋಟಿ ರೂಪಾಯಿಗಿಂತ ಹೆಚ್ಚು ಎಂಬ ಸಂಗತಿ ತಿಳಿದ ಮಹಿಳೆ ಅಚ್ಚರಿಗೊಳಗಾಗಿದ್ದಾಳೆ. ಈ ವರ್ಣಚಿತ್ರದ ಹೆಸರು ಕ್ರೈಸ್ಟ್ ಮೋಕ್ಡ್. ಇದನ್ನು ಇಟಾಲಿಯನ್ ವರ್ಣಚಿತ್ರಕಾರ ಸಿಮಾಬು ರಚಿಸಿದ್ದಾರೆ. ಇದು 13ನೇ ಶತಮಾನದ ಚಿತ್ರಕಲೆ. ಫ್ರೆಂಚ್ ಸರ್ಕಾರ ಇದನ್ನು ರಾಷ್ಟ್ರೀಯ ಪರಂಪರೆ ಎಂದು ಘೋಷಿಸಿದೆ. 

ಅಬ್ಬಬ್ಬಾ..ಭಾರತ VS ನ್ಯೂಜಿಲೆಂಡ್ ವಿಶ್ವಕಪ್ ಪಂದ್ಯಕ್ಕೆ ಅನುಷ್ಕಾ ಶರ್ಮಾ ಧರಿಸಿದ್ದ ಶರ್ಟ್ ಬೆಲೆ ಇಷ್ಟೊಂದಾ?

ಈಗ ಈ ಪೇಂಟಿಂಗ್ ಎಲ್ಲಿದೆ? : ಮಾಹಿತಿ ಒಂದರ ಪ್ರಕಾರ, ಈ ಪೇಂಟಿಂಗನ್ನು ಚಿಲಿಯ ಬಿಲಿಯನೇರ್ ಅಲ್ವಾರೊ ಸೈಹ್ ಬೆಂಡೆಕ್ ಮತ್ತು ಅವರ ಅರ್ಥಶಾಸ್ತ್ರಜ್ಞ ಪತ್ನಿ ಅನಾ ಗುಜ್ಮಾನ್ ಅಹ್ನ್‌ಫೆಲ್ಡ್ ಅವರು ತಮ್ಮ ವೈಯಕ್ತಿಕ ಸಂಗ್ರಹಕ್ಕಾಗಿ ಖರೀದಿಸಿದ್ದರು. ಫ್ರೆಂಚ್ ಸರ್ಕಾರವು ಪೇಂಟಿಂಗ್ ರಫ್ತು ಪರವಾನಗಿ ನೀಡಲು ನಿರಾಕರಿಸಿದಾಗ ತೊಂದರೆ ಉದ್ಭವಿಸಿತ್ತು. ಸದ್ಯ ಈ ಪೇಟಿಂಗನ್ನು ಮ್ಯೂಜಿಯಂನಲ್ಲಿ ಇಡಲಾಗಿದೆ.  ವರ್ಣಚಿತ್ರವನ್ನು ಫ್ರಾನ್ಸ್‌ನ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಇಡಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ.

ಪೇಂಟಿಂಗ್ ಇಡಲು ಮ್ಯೂಜಿಯಂ ನೀಡಬೇಕು ಹಣ : ಈ ಸುಂದರ ಪೇಂಟಿಂಗ್ ಸದಾ ಮ್ಯೂಜಿಯಂನಲ್ಲಿ ಇರಬೇಕೆಂದ್ರೆ ಮ್ಯೂಜಿಯಂ ಇದಕ್ಕೆ ಹಣ ಪಾವತಿ ಮಾಡಬೇಕು. ಆದ್ರೆ ಮ್ಯೂಜಿಯಂ ಎಷ್ಟು ಹಣ ನೀಡಬೇಕು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಹಣ ಹೊಂದಿಸಲು ಮ್ಯೂಜಿಯಂಗೆ ಮೂವತ್ತು ದಿನಗಳ ಅವಕಾಶ ನೀಡಲಾಗಿದೆ.

ಈ ದಿನ ನಡೆಯಲಿದೆ ಪೇಂಟಿಂಗ್ ಪ್ರದರ್ಶನ : 208 ಕೋಟಿ ರೂಪಾಯಿಗೆ ಹರಾಜಾಗಲಿರುವ ಅಜ್ಜಿ ಮನೆಯಲ್ಲಿದ್ದ ಈ ಕ್ರೈಸ್ಟ್ ಮಾಕ್ಡ್ ಪೇಂಟಿಂಗ್ ಅನ್ನು 2025ರ ವಸಂತ ಋತುವಿನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲು ತಯಾರಿ ನಡೆದಿದೆ. 

ಸಿಮಾಬು ಇನ್ನೊಂದು ಪೇಟಿಂಗ್ ಯಾವುದು? : ಇಟಾಲಿಯನ್ ವರ್ಣಚಿತ್ರಕಾರ ಸಿಮಾಬು ಅವರ ಮತ್ತೊಂದು ವರ್ಣಚಿತ್ರವನ್ನು ಮೇಸ್ತಾ ಎಂದು ಹೆಸರಿಸಲಾಗಿದೆ. ಇದನ್ನು ಈಗಾಗಲೇ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಸದ್ಯ ಅದರ ದುರಸ್ತಿ ಕಾರ್ಯ ನಡೆಯುತ್ತಿದೆ.
 

Latest Videos
Follow Us:
Download App:
  • android
  • ios