Asianet Suvarna News Asianet Suvarna News

ಇಸ್ರೇಲ್ ಮೈಂಡ್‌ ಗೇಮ್‌: ಹಿಜ್ಬುಲ್ಲಾ ಉಗ್ರರಿಗೆ ಮೊಸಾದ್ ಮಣ್ಣು ಮುಕ್ಕಿಸಿದ್ದೇಗೆ?

ಬಳಕೆಯಲ್ಲಿಲ್ಲಾದ ಪೇಜರ್‌ ತಂತ್ರಜ್ಞಾನವನ್ನು ಬಳಸಿಕೊಂಡು ಇಸ್ರೇಲ್  ತನ್ನ ಶತ್ರುಗಳಿಗೆ ಮಣ್ಣು ಮುಕ್ಕಿಸುವ ಕೆಲಸ ಮಾಡಿದೆ. ಇಂತಹದೊಂದು ಯುದ್ಧಕಾರ್ಯತಂತ್ರವನ್ನು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಹೆಣೆದಿದ್ದು ಹೇಗೆ ಇಲ್ಲಿದೆ ಡಿಟೇಲ್.. 

Mossad Mindgame:established a fake shell company In taiwan and sold explosive pagers to Hezbollah
Author
First Published Sep 19, 2024, 10:10 PM IST | Last Updated Sep 19, 2024, 10:10 PM IST

ಪೇಜರ್‌ಗಳು ಹಾಗೂ ವಾಕಿ ಟಾಕಿಗಳನ್ನು ಹಳತಾದ ಬಳಕೆಯಲ್ಲಿಲ್ಲದ ಸಂವಹನ ಸಾಧನಗಳೆಂದೇ ಪರಿಗಣಿಸಲಾಗುತ್ತದೆ. ಆದರೆ ಈಗ ಬಳಕೆಯಲ್ಲಿಲ್ಲಾದ ತಂತ್ರಜ್ಞಾನವನ್ನು ಬಳಸಿಕೊಂಡು ಇಸ್ರೇಲ್  ತನ್ನ ಶತ್ರುಗಳಿಗೆ ಮಣ್ಣು ಮುಕ್ಕಿಸುವ ಕೆಲಸ ಮಾಡಿದ್ದು, ಆಧುನಿಕ ಯುದ್ಧಕ್ಕೆ ಹೊಸ ಪರಿಕಲ್ಪನೆ ನೀಡಿದೆ. ಇಸ್ರೇಲ್‌ನ ಈ ರಹಸ್ಯ ದಾಳಿಗೆ ಸಿರಿಯಾ ಹಾಗೂ ಲೆಬನಾನ್‌ನಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರೆ, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಂತಹದೊಂದು ಯುದ್ಧಕಾರ್ಯತಂತ್ರವನ್ನು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಹೆಣೆದಿದ್ದು ಹೇಗೆ ಇಲ್ಲಿದೆ ಡಿಟೇಲ್.. 

ಮೃತರಾದವರು ಹಾಗೂ ಗಾಯಾಳುಗಳಲ್ಲಿ ಹೆಚ್ಚಿನವರು ಇಸ್ರೇಲ್ ಬದ್ಧವೈರಿಗಳಾದ ಹೆಜ್ಬುಲ್ಲಾಗೆ ಸೇರಿದವರಾಗಿದ್ದಾರೆ. ಹೆಜ್ಬುಲ್ಲಾ ಲೆಬನಾನ್‌ ರಾಜಕೀಯ ವ್ಯವಹಾರಗಳಲ್ಲಿ ಪಾಲು ಹೊಂದಿರುವ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿರುವ ಲೆಬನಾನ್‌ನ ರಾಜಕೀಯ ಪಕ್ಷವಾಗಿದೆ. ಇಸ್ರೇಲ್ ಬೇಹಗಾರಿಕಾ ಸಂಸ್ಥೆ ಮೊಸಾದೇ ಈ ಎಲ್ಲಾ ದುಷ್ಕೃತ್ಯಗಳನ್ನು  ನಡೆಸಿದೆ ಎಂಬುದು ಲೆಬನಾನ್‌ ಸೇರಿದಂತೆ ಇಡೀ ಜಗತ್ತಿನ ಆರೋಪವಾಗಿದೆ. ಆದರೆ ಇಸ್ರೇಲ್ ಇದ್ಯಾವ ಆರೋಪಕ್ಕೂ ಪ್ರತಿಕ್ರಿಯೆ ನೀಡಿಲ್ಲ. 

ಲೆಬನಾನ್, ಸಿರಿಯಾ ದೇಶದಲ್ಲಿ ಹಿಜ್ಜುಲ್ಲಾ ಉಗ್ರರ ಪೇಜರ್‌ಗಳು ಏಕಕಾಲಕ್ಕೆ ಬ್ಲಾಸ್ಟ್: ಏನಿದು ಪೇಜರ್ ದಾಳಿ?

ಆದರೆ ಈ ರೀತಿಯ ದೊಡ್ಡ ಪ್ರಮಾಣದ ದಾಳಿ ಕಾರ್ಯರೂಪಕ್ಕೆ ಬಂದಿದ್ದು ಹೇಗೆ? 

ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್‌ ಮೂವರು ಇಸ್ರೇಲಿ ಇಂಟೆಲಿಜೆನ್ಸ್ ಅಧಿಕಾರಿಗಳ ಜೊತೆ ಮಾತನಾಡಿದ್ದು, ಅವರು ಹೇಳಿದ ಪ್ರಕಾರ, ಹಂಗೇರಿ ಮೂಲದ ಪೇಜರ್‌ ಉತ್ಪಾದಕ ಸಂಸ್ಥೆ ಬಿಎಸ್‌ ಕನ್ಸಲ್ಟಿಂಗ್‌ ಸಂಸ್ಥೆಯೂ ಮೋಸಾದ್‌ ನಿರ್ಮಿಸಿದ  ಶೆಲ್‌ (ಬ್ಯಾಟರಿ) ಕಂಪನಿಯಾಗಿದ್ದು, ಇದು ಈ ಈ ಪೇಜರ್‌ಗಳನ್ನು ಲೆಬನಾನ್‌ಗೆ ಕಳುಹಿಸುವ ಮೊದಲು ಅವುಗಳನ್ನು ಸಿದ್ಧಪಡಿಸಿತ್ತು.  ವರದಿಗಳ ಪ್ರಕಾರ ಬಿಎಸಿ ಕಲ್ಸಲ್ಟಿಂಗ್ ಸಂಸ್ಥೆಯೂ ಈ ಡಿವೈಸ್‌ಗಳನ್ನು ಉತ್ಪಾದನೆ ಮಾಡಲು  ಗೋಲ್ಡ್ ಅಪೊಲೋ ಪರವಾಗಿ ಗುತ್ತಿಗೆ ಪಡೆದಿತ್ತು.  ಗೋಲ್ಡ್ ಅಪೊಲೋ ತೈವಾನ್ ಮೂಲದ ಕಂಪನಿಯಾಗಿದ್ದು, ಅದು ನಿರ್ಮಿಸಿದ ಪೇಜರ್‌ಗಳೇ ಈಗ ಲೆಬನಾನ್ ಹಾಗೂ ಸಿರಿಯಾದಲ್ಲಿ ಸ್ಫೋಟಕ್ಕೆ ಕಾರಣವಾಗಿ 9 ಜನರನ್ನು ಬಲಿ ಪಡೆದಿರುವುದು.  ಇದರ ಜೊತೆಗೆ ಪೇಜರ್ ನಿರ್ಮಾಣ ಮಾಡುವ ವ್ಯಕ್ತಿಗಳ ನಿಜವಾದ ಗುರುತನ್ನು ಮರೆ ಮಾಚಲು ಇನ್ನೆರಡು ಸೆಲ್ ಕಂಪನಿಗಳನ್ನು ಸ್ಥಾಪಿಸಲಾಗಿತ್ತು ಎಂದು ವರದಿ ಆಗಿದೆ. 

ಇಸ್ರೇಲ್‌ನಿಂದ ಪೇಜರ್ ದಾಳಿ ಬಳಿಕ ಹಿಜ್ಬುಲ್ಲಾ ಉಗ್ರರಿಗೆ ತಿಂಡಿ ತಿನ್ನಲು, ಶೌಚಾಲಯಕ್ಕೆ ಹೋಗಲೂ ಭಯ!

ಈ ಬಿಎಸಿ ಕನ್ಸಲ್ಟಿಂಗ್ ಸಂಸ್ಥೆ ಸಾಮಾನ್ಯ ಗ್ರಾಹಕರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಹೆಜ್ಬೊಲ್ಲಾ ಸದಸ್ಯರನ್ನೇ ಗುರಿಯಾಗಿಸಿಕೊಂಡು ಅವರು ಈ  ಸ್ಫೋಟಕ ಪೆಂಟಾರಿಥ್ರಿಟಾಲ್ ಟೆಟ್ರಾನೈಟ್ರೇಟ್ ಬ್ಯಾಟರಿಯ ಜೊತೆ  (explosive Pentaerythritol Tetranitrate) ಮಿಶ್ರಣ ಮಾಡಿದ್ದರು.  ಇದೊಂದು ತುಂಬಾ ಪ್ರಭಾವಶಾಲಿ ಸ್ಫೋಟಕ ಸಾಧನವಾಗಿದೆ. ಹೊಸ ಪೇಜರ್‌ಗಳಲ್ಲಿ ಮೂರು ಗ್ರಾಂ ಸ್ಫೋಟಕಗಳನ್ನು ತುಂಬಲಾಗಿತ್ತು. ಹಲವು ತಿಂಗಳುಗಳಿಂದಲೂ ಇದನ್ನು ಹೆಜ್ಬುಲ್ಲಾದವರಿಗೆ ಪತ್ತೆ ಮಾಡಲಾಗಲಿಲ್ಲ ಆದರೆ ಮೊನ್ನೆಯ ಮಂಗಳವಾರ ಎಂದಿನಂತಿರಲಿಲ್ಲ ಹೆಜ್ಬುಲ್ಲಾ ಸದಸ್ಯರಿಗೆ ತಮ್ಮ ಪೇಜರ್‌ಗೆ ಸಂದೇಶ ಬಂದಿದ್ದು, ಅದನ್ನು ನೋಡುವಷ್ಟರಲ್ಲಿ ಅದು ಸ್ಫೋಟಗೊಂಡಿದೆ. 

ಇಸ್ರೇಲಿಗರು ಹಿಜ್ಬುಲ್ಲಾ ಅಪರೇಟರ್‌ಗಳನ್ನು ಅವರ ಡಿವೈಸ್‌ಗಳನ್ನು ಸೈಬರ್‌ ದಾಳಿ ಮಾಡಿ ಹ್ಯಾಕ್ ಮಾಡುವ ಮೂಲಕ ಫೋನ್‌ಗಳ ಕ್ಯಾಮರಾಗಳ ಮೂಲಕ ಅವರನ್ನು ಕಂಟ್ರೋಲ್ ಮಾಡುವ ಮೂಲಕ ಅವರ ಶತ್ರುಗಳ ಮೇಲೆ ನಿರಂತರ ಕಣ್ಣಿಟ್ಟಿದ್ದಾರೆ.  ಹೀಗಾಗಿ ಹೆಜ್ಬುಲ್ಲಾ ಮುಖ್ಯಸ್ಥ ಹಸ್ಸನ್ ನಸರುಲ್ಲ ಅವರು ಕಳೆದ ಫೆಬ್ರವರಿಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಇಸ್ರೇಲ್‌ ಏಜೆಂಟ್‌ಗಳು ತಮ್ಮ ಫೋನನ್ನು ಟ್ರ್ಯಾಕ್ ಮಾಡುತ್ತಿದ್ದು, ಹೀಗಾಗಿ ಕಡಿಮೆ ತಂತ್ರಜ್ಞಾನದ ತಂತ್ರಜ್ಞಾನದತ್ತ ತಿರುಗಬೇಕು ಎಂದು ಹೇಳಿದ್ದರು. ಆದರೆ ಇಸ್ರೇಲ್ ಮಾತ್ರ  ತನ್ನ ಶತ್ರುವಿನತ್ತ ಗುರಿಯಿಡಲು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಯ್ತು. ಒಬ್ಬ ಹಿರಿಯ ಕಮಾಂಡರ್ ಮತ್ತು ಬೈರುತ್‌ನ ಉನ್ನತ ಹಮಾಸ್ ಅಧಿಕಾರಿ ಸೇರಿದಂತೆ ಲೆಬನಾನ್‌ನಲ್ಲಿ ಇಸ್ರೇಲಿ ನಡೆಸಿದ ಉದ್ದೇಶಿತ ದಾಳಿಗಳಲ್ಲಿ ಈಗಾಗಲೇ 170 ಹೋರಾಟಗಾರರು ಕೊಲ್ಲಲ್ಪಟ್ಟಿದ್ದಾರೆ. 

ಒಟ್ಟಿನಲ್ಲಿ ಹಮಾಸ್‌ ಹಿಜ್ಬುಲ್ಲಾ ಉಗ್ರರು ಚಾಪೆ ಕೆಳಗೆ ನುಗ್ಗಲು ನೋಡಿದರೆ ಇಸ್ರೇಲ್ ತಂತ್ರಜ್ಞಾನದ ವಿಚಾರದಲ್ಲಿ ರಂಗೋಲಿ ಕೆಳಗೆ ನುಗ್ಗುತ್ತಿದೆ. 

Latest Videos
Follow Us:
Download App:
  • android
  • ios