ಇಸ್ರೇಲ್‌ನಿಂದ ಪೇಜರ್ ದಾಳಿ ಬಳಿಕ ಹಿಜ್ಬುಲ್ಲಾ ಉಗ್ರರಿಗೆ ತಿಂಡಿ ತಿನ್ನಲು, ಶೌಚಾಲಯಕ್ಕೆ ಹೋಗಲೂ ಭಯ!

ಪೇಜರ್, ರಡಿಯೋ ಸೆಟ್, ಸೋಲಾರ್ ಸಿಸ್ಟಂ ಬಾಂಬ್ ಸ್ಫೋಟಗೊಂಡ ಬಳಿಕ ಹಿಜ್ಬುಲ್ಲಾ ಉಗ್ರರು ಊಟ ಏನಾದರೂ ತಿನ್ನಲೂ, ಶೌಚಾಲಯಕ್ಕೆ ಹೋಗಲು ಸಹ ಹೆದರುತ್ತಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಮುಖ್ಯಸ್ಥ ಹೇಳಿದ್ದಾರೆ.

israel hezbollah war live update new phase of war rav

ಜೇರುಸಲೆಂ (ಸೆ.19): ಪೇಜರ್, ರಡಿಯೋ ಸೆಟ್, ಸೋಲಾರ್ ಸಿಸ್ಟಂ ಬಾಂಬ್ ಸ್ಫೋಟಗೊಂಡ ಬಳಿಕ ಹಿಜ್ಬುಲ್ಲಾ ಉಗ್ರರು ಊಟ ಏನಾದರೂ ತಿನ್ನಲೂ, ಶೌಚಾಲಯಕ್ಕೆ ಹೋಗಲು ಸಹ ಹೆದರುತ್ತಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಮುಖ್ಯಸ್ಥ ಹೇಳಿದ್ದಾರೆ.

ಬುಧವಾರ ತಮ್ಮ ಯೋಧರನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಯಾವುದೇ ಹಂತದಲ್ಲೂ ನಾವು ಇನ್ನೂ ಅನೇಕ ರೀತಿಯಯಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಹಿಜ್ಬುಲ್ಲಾ, ಹಮಾಸ್ ಉಗ್ರರು ಭಾರಿ ಬೆಲೆ ತೆತ್ತಬೇಕಿದೆ. ನಿನ್ನೆ ಕೇವಲ ಹಿಜ್ಬುಲ್ಲಾ ಉಗ್ರರ ಮೇಲೆ ಮಾತ್ರ ದಾಳಿಯಾಗಿದೆ. ಹಮಾಸ್, ಪಾಕಿಸ್ತಾನ ಉಗ್ರರ ಮೇಲೂ ಹೊಸ ರೀತಿಯಲ್ಲಿ ದಾಳಿ ನಡೆಸಿ ಶಾಕ್ ಕೊಡುತ್ತೇವೆ ಎಂದಿದ್ದಾರೆ. 

ಲೆಬನಾನ್, ಸಿರಿಯಾ ದೇಶದಲ್ಲಿ ಹಿಜ್ಜುಲ್ಲಾ ಉಗ್ರರ ಪೇಜರ್‌ಗಳು ಏಕಕಾಲಕ್ಕೆ ಬ್ಲಾಸ್ಟ್: ಏನಿದು ಪೇಜರ್ ದಾಳಿ?

ಯುದ್ಧದ ಹೊಸ ಅಧ್ಯಾಯ: ಇಸ್ರೇಲ್‌ನ ರಕ್ಷಣಾ ಸಚಿವ 

ಗಾಜಾದಲ್ಲಿನ ಹಮಾಸ್‌ ಉಗ್ರರ ವಿರುದ್ಧದ ಯುದ್ಧದ ಬಳಿಕ ಪಡೆಗಳನ್ನು ಉತ್ತರದ ಕಡೆ ತಿರುಗಿಸಲಾಗುತ್ತಿದೆ. ಇದು ಯುದ್ಧದ ಹೊಸ ಹಂತವಾಗಿದ್ದು, ಧೈರ್ಯ, ಸಂಕಲ್ಪ ಮತ್ತು ಪರಿಶ್ರಮದ ಅಗತ್ಯವಿದೆ ಎಂದರು. ಈ ಮೂಲಕ ಹಿಜ್ಬುಲ್ಲಾ ಉಗ್ರರ ನೆಲೆವೀಡಾಗಿರುವ ಲೆಬನಾನ್‌ನತ್ತ ಹೆಚ್ಚಿನ ಸೇನೆಯನ್ನು ನಿಯೋಜಿಸಿರುವ ಸುಳಿವು ನೀಡಿದ್ದಾರೆ.

ಉಗ್ರರ ಬಾಂಬ್‌ ಪೇಜರ್‌ಗಳು ತಯಾರಾಗಿದ್ದು ಹಂಗೇರಿಯಲ್ಲಿ

ಲೆಬನಾನ್‌ ಹಾಗೂ ಸಿರಿಯಾದಲ್ಲಿರುವ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ, ಇಸ್ರೇಲ್‌ನಿಂದ ದಾಳಿಗೆ ತುತ್ತಾದ ಪೇಜರ್‌ಗಳು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ತಯಾರಾಗಿದ್ದವು ಎಂದು ತಿಳಿದುಬಂದಿದೆ. ತೈವಾನ್‌ ಮೂಲದ ಗೋಲ್ಡ್‌ ಅಪೋಲೋ ಕಂಪನಿಯ ಪೇಜರ್‌ಗಳನ್ನು ಉಗ್ರರು ಬಳಸುತ್ತಿದ್ದರು. ಆದರೆ ಆ ಬ್ರ್ಯಾಂಡ್‌ ಬಳಕೆ ಮಾಡಲು ತಾವು ಹಂಗೇರಿಯ ಬಿಎಸಿ ಕನ್ಸಲ್ಟಿಂಗ್‌ ಕೆಎಫ್‌ಟಿ ಕಂಪನಿಗೆ ಅನುಮತಿ ನೀಡಿದ್ದೆವು ಎಂದು ಗೋಲ್ಡ್‌ ಅಪೋಲೋ ಹೇಳಿಕೊಂಡಿದೆ.

ಅಮೆರಿಕಗೆ ಇಸ್ರೇಲ್‌ ಮಾಹಿತಿ: ಉಗ್ರರ ಮೇಲೆ ತಾನು ನಡೆಸಿದ ಪೇಜರ್‌ ಬಾಂಬ್‌ ದಾಳಿ ಕುರಿತು ಇಸ್ರೇಲ್‌ ಸರ್ಕಾರ ಅಮೆರಿಕದ ಅಧಿಕಾರಿಗಳಿಗೆ ಮಂಗಳವಾರವೇ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈಗಲೂ ಪೇಜರ್‌ ಬಳಸುವುದು ಏಕೆ?

ಪೇಜರ್‌ಗಳನ್ನು ಒಮ್ಮೆ ಚಾರ್ಜ್‌ ಮಾಡಿದರೆ 85 ದಿನ ಕೆಲಸ ಮಾಡುತ್ತವೆ. ವಿವಿಧ ವೈರ್‌ಲೆಸ್‌ ನೆಟ್‌ವರ್ಕ್‌ಗಳಲ್ಲೂ ಇವು ಕೆಲಸ ಮಾಡುತ್ತವೆ. ಹೀಗಾಗಿ ವಿಶ್ವಾದ್ಯಂತ ಹೆಚ್ಚಿನ ಆಸ್ಪತ್ರೆಗಳು ಪೇಜರ್‌ಗಳನ್ನು ಬಳಕೆ ಮಾಡುತ್ತವೆ. ಆರ್ಥಿಕ ದುಸ್ಥಿತಿ ಹೊಂದಿರುವ ಲೆಬನಾನ್‌ನಲ್ಲಿ ವಿದ್ಯುತ್‌ ಸಮಸ್ಯೆ ಇದೆ. ಹೀಗಾಗಿ ಒಮ್ಮೆ ಚಾರ್ಜ್‌ ಮಾಡಿದರೆ ದೀರ್ಘಾವಧಿಗೆ ಬಳಸಬಹುದಾದ ಕಾರಣ ಅಲ್ಲಿನ ಜನರು ಪೇಜರ್‌ ಬಳಸುತ್ತಾರೆ.

ಲಕ್ಷಗಟ್ಟಲೆ ಪೇಜರ್‌ಗಳು ಬಿಕರಿ

2022ರ ಆರಂಭದಿಂದ 2024ರ ಆಗಸ್ಟ್‌ವರೆಗೆ ಗೋಲ್ಡ್‌ ಅಪೋಲೋ ಕಂಪನಿ 2.60 ಲಕ್ಷ ಪೇಜರ್‌ಗಳನ್ನು ವಿಶ್ವದ ವಿವಿಧ ಭಾಗಳಿಗೆ ರಫ್ತು ಮಾಡಿದೆ. ಈ ವರ್ಷದ ಜನವರಿಯಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ 40 ಸಾವಿರ ಪೇಜರ್‌ಗಳನ್ನು ಕಳುಹಿಸಿಕೊಟ್ಟಿದೆ. ಐರೋಪ್ಯ, ಅಮೆರಿಕ ದೇಶಗಳಿಂದಲೇ ಬೇಡಿಕೆ ಹೆಚ್ಚಿದೆ.

ಇಸ್ರೇಲ್ ದಾಳಿಗೆ ನಡುಗಿದ ಹಿಜ್ಬುಲ್ಲಾ ಉಗ್ರರು;100 ವಿಮಾನ ಬಳಸಿ ಭಾರೀ ಪ್ರಮಾಣದ ಕ್ಷಿಪಣಿ ದಾಳಿ!

ಉಗ್ರರಿಗೇಕೆ ಪೇಜರ್‌ ಅಚ್ಚುಮೆಚ್ಚು?

ಲೆಬನಾನ್‌ನಲ್ಲಿರುವ ಮೊಬೈಲ್‌ ಫೋನ್‌ಗಳ ಮೇಲೆ ಇಸ್ರೇಲ್‌ ತೀವ್ರ ನಿಗಾ ಇಟ್ಟಿದೆ. ಹೀಗಾಗಿ ಉಗ್ರರಿಗೆ ಮೊಬೈಲ್‌ ಬಳಸದಂತೆ ಹಿಜ್ಬುಲ್ಲಾ ಸಂಘಟನೆ ತಾಕೀತು ಮಾಡಿದೆ. ‘ನಿಮ್ಮ ಕೈಯಲ್ಲಿರುವ, ನಿಮ್ಮ ಪತ್ನಿ ಬಳಸುತ್ತಿರುವ ಹಾಗೂ ನಿಮ್ಮ ಮಕ್ಕಳು ಉಪಯೋಗಿಸುತ್ತಿರುವ ಮೊಬೈಲ್‌ಗಳು ಅತ್ಯಂತ ಅಪಾಯಕಾರಿ ಏಜೆಂಟ್‌ ಇದ್ದಂತೆ. ಇಸ್ರೇಲಿ ಬೇಹುಗಾರರಿಗಿಂತ ಅಪಾಯಕಾರಿ. ಅತ್ಯಂತ ನಿರ್ದಿಷ್ಟ ಹಾಗೂ ನಿಖರ ಮಾಹಿತಿಯನ್ನು ಇವು ರವಾನಿಸುತ್ತವೆ. ಹೀಗಾಗಿ ಅವನ್ನು ಒಡೆದು ಹಾಕಿ, ಮಣ್ಣಿನಲ್ಲಿ ಹೂತುಬಿಡಿ ಅಥವಾ ಕಬ್ಬಿಣದ ಪೆಟ್ಟಿಗೆಯಲ್ಲಿ ಬೀಗ ಹಾಕಿಡಿ’ ಎಂದು ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಾಲ್ಲಾ ಫೆಬ್ರವರಿಯಲ್ಲಿ ಮಾಡಿದ ಬಹಿರಂಗ ಭಾಷಣದಲ್ಲೇ ಹೇಳಿದ್ದ. ಹಿಜ್ಬುಲ್ಲಾ ಸಂಘಟನೆಯೇ ತನ್ನ ಸದಸ್ಯರಿಗೆ ಪೇಜರ್‌ ಒದಗಿಸುತ್ತಿದೆ

Latest Videos
Follow Us:
Download App:
  • android
  • ios