Asianet Suvarna News Asianet Suvarna News

ಸೇನಾ ಸಮವಸ್ತ್ರದಲ್ಲಿ ಬಂದು ಐಸಿಸ್ ಉಗ್ರರ ದಾಳಿ: 143 ಜನರ ಸಾವು, ಎಲ್ಲಾ 11 ಶಂಕಿತರ ಬಂಧನ!

ರಷ್ಯಾ ರಾಜಧಾನಿಯಲ್ಲಿನ ‘ಕ್ರೋಕಸ್ ಸಿಟಿ ಹಾಲ್’ ಸಭಾಂಗಣದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಈವರೆಗೂ 143 ಮಂದಿ ಸಾವು ಕಂಡಿದ್ದು, ದಾಳಿ ನಡೆಸಿದ ನಾಲ್ವರು ಗನ್‌ಮ್ಯಾನ್‌ಗಳೊಂದಿಗೆ 11 ಮಂದಿಯನ್ನು ಈವರೆಗೂ ಬಂಧಿಸಲಾಗಿದೆ ಎಂದು ರಷ್ಯಾ ತಿಳಿಸಿದೆ.

Moscow Concert Hall Attack Attacked by ISIS militants in military uniform gvd
Author
First Published Mar 24, 2024, 6:48 AM IST

ಮಾಸ್ಕೋ (ಮಾ.24): ರಷ್ಯಾ ರಾಜಧಾನಿಯಲ್ಲಿನ ‘ಕ್ರೋಕಸ್ ಸಿಟಿ ಹಾಲ್’ ಸಭಾಂಗಣದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ವಿಶ್ವ ಬೆಚ್ಚಿಬಿದ್ದಿದೆ. ‘ಸೇನಾ ಸಮವಸ್ತ್ರದಲ್ಲಿ ಬಂದಿದ್ದ ಐಸಿಸ್‌ ಉಗ್ರರು ಸಿಟಿ ಹಾಲ್‌ಅನ್ನು ರಣಾಂಗಣ ಮಾಡಿದ್ದಾರೆ. ಅವರು ಸಿಡಿಸಿದ ಗುಂಡಿಗೆ ಬೆಚ್ಚಿ ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದಾಗ ಕಾಲ್ತುಳಿತ ಸಂಭವಿಸಿತು’ ಎಂದಿದ್ದಾರೆ. ಸಿಟಿ ಹಾಲ್‌ನಲ್ಲಿ ಸಂಗೀತ ಸಮಾರಂಭ ಆಯೋಜನೆ ಆಗಿತ್ತು. ಸುಮಾರು 6 ಸಾವಿರ ಜನ ಸೇರಿದ್ದರು. ಸಂಗೀತ ಕಚೇರಿ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮೊದಲು ಗುಂಡಿನ ಮೊರೆತ ಕೇಳಿಸಿದೆ.

'ಇದು ಸ್ವಯಂಚಾಲಿತ ಗುಂಡಿನ ದಾಳಿ ಎಂದು ನಾನು ತಕ್ಷಣವೇ ಅರಿತುಕೊಂಡೆ ಮತ್ತು ಇದು ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿ’ ಎಂದು ಪ್ರತ್ಯಕ್ಷದರ್ಶಿ ಅಲೆಕ್ಸಿ ಹೇಳಿದ್ದಾರೆ. ‘ದಾಳಿಕೋರರು ಸೇನಾ ಸಮವಸ್ತ್ರವನ್ನು ಧರಿಸಿದ್ದರು. ಮುಖ ಮುಚ್ಚಿಕೊಂಡಿದ್ದರು. ಯಾರೆಂದು ಗೊತ್ತಾಗುತ್ತಿರಲಿಲ್ಲ. ಅವರು ಕಟ್ಟಡಕ್ಕೆ ಪ್ರವೇಶಿಸಿ ಗುಂಡು ಹಾರಿಸಿದರಷ್ಟೇ ಅಲ್ಲ, ಗ್ರೆನೇಡ್ಬಾಂ ಹಾಗೂ ಬಾಂಬ್ ಎಸೆದರು’ ಎಂದು ಪತ್ರಕರ್ತರೊಬ್ಬರು ಹೇಳಿದರು.

Neuralink: ಮೆದುಳಿಗೆ ಚಿಪ್‌ ಹಾಕಿದ ಬಳಿಕ ತಲೇಲಿ ಯೋಚಿಸಿ ಕಂಪ್ಯೂಟರಲ್ಲಿ ಚೆಸ್‌ ಆಡಿದ!

ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿ ಒಬ್ಬರು ಘಟನೆಯ ವಿವರ ನೀಡಿ, ‘ಇದ್ದಕ್ಕಿದ್ದಂತೆ ನಮ್ಮ ಹಿಂದೆ ಭಾರಿ ಪ್ರಮಾಣದ ಶಬ್ದ ಕೇಳಿಸಿತು. ಗುಂಡುಗಳು ಸಿಡಿದವು. ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ. ತಕ್ಷಣವೇ ಕಾಲ್ತುಳಿತ ಪ್ರಾರಂಭವಾಯಿತು. ಎಲ್ಲರೂ ಎಸ್ಕಲೇಟರ್‌ಗೆ ಓಡಿದರು. ಎಲ್ಲರೂ ಕಿರುಚುತ್ತಿದ್ದರು’ ಎಂದರು. ‘ಘಟನೆಯ ಕೆಲವೇ ಹೊತ್ತಿನಲ್ಲಿ ಹಾಲ್‌ನ ಮೇಲ್ಛಾವಣಿಯಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಬರುತ್ತಿರುವುದನ್ನು ಕಂಡೆ. ಮೇಲ್ಛಾವಣಿಯ ಒಂದು ಭಾಗ ಕುಸಿಯಿತು’ ಎಂದು ಬೇಸರಿಸಿದರು.

143 ಮಂದಿ ದಾರುಣ ಹತ್ಯೆ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸಭೆ-ಸಮಾರಂಭಗಳು ನಡೆಯುವ ಸಿಟಿ ಕ್ರಾಕಸ್‌ ಹಾಲ್‌ಗೆ ಹಲವು ಬಂದೂಕುಧಾರಿಗಳು ನುಗ್ಗಿ ಅಂಧಾದುಂಧಿ ದಾಳಿ ನಡೆಸಿ ಬೆಂಕಿ ಹಚ್ಚಿದ್ದು, ಸುಮಾರು 143 ಜನರು ಸಾವನ್ನಪ್ಪಿರುವ ಭೀಕರ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಹಾಲ್‌ನಲ್ಲಿ ಸಮಾರಂಭವೊಂದು ನಡೆಯುತ್ತಿತ್ತು. ಆಗ ಅಲ್ಲಿಗೆ ಸುಮಾರು 4 ಬಂದೂಕುಧಾರಿಗಳು ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿದ್ದಾರೆ. ಇಲ್ಲಿಯವರೆಗೂ ನಾಲ್ವರು ಗನ್‌ಮ್ಯಾನ್‌ ಸೇರಿ 11 ಮಂದಿಯನ್ನು ಬಂಧಿಸಲಾಗಿದೆ.

ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಇಟಲಿ ಪ್ರಧಾನಿ ಮೆಲೋನಿ ಸೆಕ್ಸ್‌ ವಿಡಿಯೋ: ಪ್ರಕರಣ ದಾಖಲು

ದಾಳಿ ಹೊಣೆ ಹೊತ್ತುಕೊಂಡ ಇಸ್ಲಾಮಿಕ್‌ ಸ್ಟೇಟ್‌: ಐಸಿಸ್‌ ಅಥವಾ ಇಸ್ಲಾಮಿಕ್‌ ಸ್ಟೇಟ್‌ ಈ ದಾಳಿಯ ಹೊಣೆ ಹೊತತುಕೊಂಡಿದೆ. ಮಾಸ್ಕೋದ ಸಭಾಂಗಣದಲ್ಲಿ ನಮ್ ಫೈಟರ್‌ಗಳು ದಾಳಿ ಮಾಡಿದ್ದು ಮಾತ್ರಲ್ಲದೆ, ತಮ್ಮ ಬೇಸ್‌ಗೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ ಎಂದು ಹೇಳಿಕೆ ನೀಡಿದೆ. ಇನ್ನೊಂದೆಡೆ ರಷ್ಯಾದ ಭದ್ರತಾ ಏಜೆನ್ಸಿ, ದಾಳಿಕೋರರಿಗೆ ಉಕ್ರೇನ್‌ನ ಸಂಪರ್ಕವಿದ್ದು, ದಾಳಿ ನಡೆಸಿದ ಬಳಿಕ ಉಕ್ರೇನ್‌ ಗಡಿಯತ್ತ ಸಾಗುತ್ತಿದ್ದರು ಎಂದಿದ್ದಾರೆ. ಅತ್ಯಂತ ಭೀಕರ ದಾಳಿ ನಡೆಸಿದ ಬಳಿಕ ಎಲ್ಲಾ ಕ್ರಿಮಿನಲ್‌ಗಳು ರಷ್ಯಾ-ಉಕ್ರೇನ್‌ ಗಡಿ ದಾಟಲು ಪ್ರಯತ್ನ ಮಾಡಿದ್ದರು. ಉಕ್ರೇನ್‌ನಲ್ಲಿ ಅವರು ಪ್ರಮುಖ ಸಂಪರ್ಕವಿದೆ ಎನ್ನುವುದು ಗೊತ್ತಾಗಿದೆ ಎಂದು ಎಫ್‌ಎಸ್‌ಬಿ ತಿಳಿಸಿದೆ. ಇನ್ನೊಂದೆಡೆ ಉಕ್ರೇನ್‌ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.

Follow Us:
Download App:
  • android
  • ios