Neuralink: ಮೆದುಳಿಗೆ ಚಿಪ್ ಹಾಕಿದ ಬಳಿಕ ತಲೇಲಿ ಯೋಚಿಸಿ ಕಂಪ್ಯೂಟರಲ್ಲಿ ಚೆಸ್ ಆಡಿದ!
ವಿವಿಧ ನರರೋಗಗಳಿಂದ ಬಳಲುತ್ತಿರುವವರ ಮೆದುಳಿಗೆ ಚಿಪ್ ಅಳವಡಿಸುವ ಎಲಾನ್ ಮಸ್ಕ್‌ರ ನ್ಯೂರಾಲಿಂಕ್ ಯೋಜನೆಗೆ ಮತ್ತೊಂದು ಯಶಸ್ಸು ಸಿಕ್ಕಿದೆ.
ವಾಷಿಂಗ್ಟನ್ (ಮಾ.22): ವಿವಿಧ ನರರೋಗಗಳಿಂದ ಬಳಲುತ್ತಿರುವವರ ಮೆದುಳಿಗೆ ಚಿಪ್ ಅಳವಡಿಸುವ ಎಲಾನ್ ಮಸ್ಕ್‌ರ ನ್ಯೂರಾಲಿಂಕ್ ಯೋಜನೆಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮೂಲಕ ಮೆದುಳಿಗೆ ಚಿಪ್ ಅಳವಡಿಸಿಕೊಂಡಿದ್ದ ನೋಲ್ಯಾಂಡ್ ತನ್ನ ಮೆದುಳಿನಲ್ಲಿ ಯೋಚಿಸುವ ಮೂಲಕವೇ ಎದುರಿಗಿದ್ದ ಕಂಪ್ಯೂಟರ್‌ನೊಂದಿಗೆ ಚೆಸ್ ಆಡಿದ್ದಾನೆ. ಅಪಘಾತವೊಂದರ ಬಳಿಕ ನೋಲ್ಯಾಂಡ್‌ನ ಭುಜದ ಕೆಳಗಿನ ಪೂರ್ಣ ಭಾಗ ಸ್ವಾಧೀನ ಕಳೆದುಕೊಂಡಿತ್ತು.
ಹೀಗಾಗಿ ಆತ ಸ್ವಯಂ ಯಾವುದೇ ಕೆಲಸ ಮಾಡುವಂತಿರಲಿಲ್ಲ. ಹೀಗಾಗಿ ಪ್ರಾಯೋಗಿಕ ಯೋಜನೆಯಡಿ ಆತನ ಮೆದುಳಿನಲ್ಲಿ ಚಿಪ್ ಅಳವಡಿಸಲಾಗಿತ್ತು. ನೋಲ್ಯಾಂಡ್ ತಾನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದಂತೆ ಆ ವಿಷಯ ಮೆದುಳಿನಲ್ಲಿರುವ ಚಿಪ್ ಮೂಲಕ ಕಂಪ್ಯೂಟರ್‌ನ ಮೌಸ್‌ಗೆ ಸಂದೇಶ ರವಾನಿಸಿತ್ತು. ಅದರಂತೆ ಮೌಸ್‌ನ ಕರ್ಸರ್ ಅತ್ತಿಂದಿತ್ತ ಓಡಾಡಿ ಕಂಪ್ಯೂಟರ್‌ನಲ್ಲಿನ ಚೆಸ್ ಕಾಯಿನ್‌ಗಳ ಸ್ಥಾನ ಬದಲಾವಣೆ ಮಾಡಿದೆ.
ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಮುಂದೆ ಬೇಷರತ್ ಕ್ಷಮೆ ಯಾಚಿಸಿದ ಬಾಬಾ ರಾಮ್‌ದೇವ್‌ರ ಪತಂಜಲಿ!
3 ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕಕ್ಕೆ ಸಂಪುಟ ಸಮ್ಮತಿ: ಎಲೆಕ್ಟ್ರಾನಿಕ್ ಚಿಪ್ ಉತ್ಪಾದಿಸುವ ಮೂರು ಘಟಕಗಳ ಆರಂಭಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ಮೂರು ಯೋಜನೆಗಳು ಒಟ್ಟು 1.26 ಲಕ್ಷ ಕೋಟಿ ರು.ನಷ್ಟು ಬಂಡವಾಳ ಹೂಡಿಕೆಯೊಂದಿಗೆ ಆರಂಭವಾಗಲಿದ್ದು, 20000 ನೇರ ಉದ್ಯೋಗ, 60000 ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿವೆ.
ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್, ‘ರಕ್ಷಣೆ, ಆಟೋಮೊಬೈಲ್, ದೂರಸಂಪರ್ಕ ಸೇರಿ ವಿವಿಧ ವಲಯಗಳಿಗೆ ಅಗತ್ಯವಾದ ಎಲೆಕ್ಟ್ರಾನಿಕ್ ಚಿಪ್‌ಗಳಿಗೆ ವಿದೇಶಗಳ ಮೇಲಿನ ಅವಲಂಬನೆ ಕಡಿತಕ್ಕೆ ‘ಡೆವಲಪ್‌ಮೆಂಟ್ ಆಫ್ ಸೆಮಿಕಂಡಕ್ಟರ್ಸ್ ಆ್ಯಂಡ್ ಡಿಸ್‌ಪ್ಲೇ ಮ್ಯಾನುಫ್ಯಾಕ್ಚರಿಂಗ್ ಎಕೋಸಿಸ್ಟಮ್ ಪ್ರೋಗ್ರಾಮ್’ ಯೋಜನೆಯಡಿ ಈ ಮೂರು ಘಟಕ ಆರಂಭಿಸಲಾಗುತ್ತಿದೆ. ಇವುಗಳಿಗೆ ಕೇಂದ್ರ ಸರ್ಕಾರ 76000 ಕೋಟಿ ರು. ನೆರವು ನೀಡಲಿದೆ’ ಎಂದು ಹೇಳಿದರು.
Lok Sabha Election 2024: ಬಿಜೆಪಿಗೆ ರಿಲಯನ್ಸ್ ನಂಟಿನ ಕಂಪನಿ 385 ಕೋಟಿ ಚುನಾವಣಾ ದೇಣಿಗೆ!
ಟಾಟಾ ಎಲೆಕ್ಟ್ರಾನಿಕ್ಸ್, ತೈವಾನ್‌ನ ಪವರ್‌ಚಿಪ್ ಸಂಸ್ಥೆಯೊಂದಿಗೆ ಗುಜರಾತ್‌ನ ಧೊಲೇರಾದಲ್ಲಿ 91000 ಕೋಟಿ ರು. ವೆಚ್ಚದಲ್ಲಿ ಒಂದು ಘಟಕ, ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಆ್ಯಂಡ್ ಟೆಸ್ಟ್ ಸಂಸ್ಥೆ ಅಸ್ಸಾಂನ ಮೋರೆಗಾಂವ್‌ನಲ್ಲಿ 27000 ಕೋಟಿ ರು. ಹೂಡಿಕೆಯೊಂದಿಗೆ ಒಂದು ಘಟಕ ಮತ್ತು ಸಿ.ಜಿ. ಪವರ್ ಕಂಪನಿಯು ಜಪಾನ್‌ನ ರೆನೆಸಾಸ್ ಕಂಪನಿ ಸಹಯೋದಲ್ಲಿ ಗುಜರಾತ್‌ನಲ್ಲಿ 7600 ಕೋಟಿ ರು. ವೆಚ್ಚದಲ್ಲಿ ಮೂರನೇ ಘಟಕ ಸ್ಥಾಪಿಸಲಿದೆ.