Asianet Suvarna News Asianet Suvarna News

ಕೊರೋನಾ ಆತಂಕದ ನಡುವೆಯೇ ಗುಡ್‌ ನ್ಯೂಸ್: 3 ಲಕ್ಷಕ್ಕೂ ಅಧಿಕ ಮಂದಿ ಗುಣಮುಖ!

ಕೊರೋನಾ ಆತಂಕದ ನಡುವೆಯೂ ಗುಡ್‌ ನ್ಯೂಸ್| 15 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಗಮನಕ್ಕೆ ಬರಲೇ ಇಲ್ಲ ಈ ಸಮಾಧಾನಕರ ವಿಚಾರ| ಏನಿದು? ಇಲ್ಲಿದೆ ವಿವರ

More than 300000 people around the world have recovered from coronavirus
Author
Bangalore, First Published Apr 9, 2020, 1:12 PM IST

ವಾಷಿಂಗ್ಟನ್(ಏ.09): ವಿಶ್ವದಾದ್ಯಂತ ಕೊರೋನಾ ಅಬ್ಬರಕ್ಕೆ ಅಪಾರ ಸಾವು ನೋವು ಸಂಭವಿಸಿದೆ. ಚೀನಾದ ವುಹಾನ್‌ ಎಂಬ ನಗರದಿಂದ ಉಟ್ಟಿಕೊಂಡ ಈ ಡೆಡ್ಲಿ ವೈರಸ್ ಯಾರನ್ನೂ ಬಿಟ್ಟಿಲ್ಲ. ಪುಟ್ಟ ರಾಷ್ಟ್ರ ಇಟಲಿಯನ್ನು ನಲುಗಿಸಿದ ಈ ಕೊರೋನಾ ವಿಶ್ವದ ದೊಡ್ಡಣ್ಣ ಅಮೆರಿಕನ್ನೂ ಕಂಗೆಡಿಸಿದೆ. ಪ್ರತಿ ದಿನ ಸಾವಿರಕ್ಕೂ ಅಧಿಕ ಮಂದಿ ಈ ಕೊರೋನಾಗೆ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರಲಾರಂಭಿಸಿದೆ. ಹೀಗಿರುವಾಗ ಕೊರೋನಾ ಅಬ್ಬರದ ನಡುವೆ ಸಮಾಧಾನಕರ ವಿಚಾರವೂ ಬಂದೆರಗಿದೆ. ಕೊರೋನಾ ಸಾವಿನ ನಡುವೆ ಅನೇಕ ಮಂದಿ ಈ ವಿಚಾರವನ್ನೇ ಗಮನಿಸಲು ಮರೆತಿದ್ದಾರೆ.

ಹೌದು ವಿಶ್ವದಾದ್ಯಂತ ಬರೋಬ್ಬರಿ 1,519,571 ಮಂದಿಗೆ ಈ ಸೋಂಕು ತಗುಲಿದ್ದು, 88,550 ಮಂದಿ ಮೃತಪಟ್ಟಿದ್ದಾರೆ. ಹೀಗಿದ್ದರೂ ಈ ಸೋಂಕು ತಗುಲಿ ಗುಣಮುಖರಾದವರ ಸಂಖ್ಯೆ 331,011 ಇದೆ ಎಂಬುವುದದು ಅನೇಕರ ಗಮಗನಕ್ಕೆ ಬಂದಿಲ್ಲ. ಮೂರು ಲಕ್ಷಕ್ಕೂ ಅಧಿಕ ಮಂದಿ ಸಮರ್ಥವಾಗಿ ಕೊರೋನಾವನ್ನು ಎದುರಿಸಿ, ಅದನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. 

ಲಾಕ್‌ಡೌನ್‌ ಮಧ್ಯೆ ಕಾಲ್‌ಗರ್ಲ್ಸ್‌ ಜೊತೆ ಸೆಕ್ಸ್ ಪಾರ್ಟಿ: ಬಯಲಾಯ್ತು 'ಸ್ಟಾರ್‌' ಬಂಡವಾಳ!

ಭಾರತದಲ್ಲಿ ಗುಣಮುಖರಾದವರೆಷ್ಟು?

ಇನ್ನು ಭಾರತದ ಪರಿಸ್ಥಿತಿ ಹೇಗಿದೆ ಎಂಬುವುದನ್ನು ಗಮನಿಸುವುದಾದರೆ, ಇಲ್ಲಿ 5734 ಪ್ರಕರಣಗಳು ದಾಖಲಾಗಿದ್ದು, 166 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ 472 ಮಂದಿ ಗುಣಮುಖರಾಗಿದ್ದಾರೆಂಬುವುದು ಗಮನಾರ್ಹ.

ಭಾರತ ಸೇರಿದಂತೆ ವಿಶ್ವದಾದ್ಯಂತ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ದೇಶ ವಾಸಿಗಳು ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದ ಬೆನ್ನಲ್ಲೇ ದೇಶದಾದ್ಯಂತ ಲಾಕ್‌ಡೌನ್ ಹೇರಿವೆ. ಈ ಮೂಲಕ ಜನರು ಓಡಾಡದಂತೆ ನಿಗಾ ವಹಿಸಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಖಡಕ್ ಆದೇಶ ನೀಡಲಾಗಿದೆ.

ಹಸಿವು ತಾಳಲಾರದೆ ಪಿಎಂ ಮೋದಿಗೆ ಫೋನ್ ಮಾಡಿದ ಅನಾಥರು: ಓಡೋಡಿ ಬಂದ ಅಧಿಕಾರಿಗಳು!

ಇಷ್ಟೇ ಅಲ್ಲದೇ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ವೈದ್ಯರು ಹಾಗೂ ದಾದಿಯರು ಹಗಲಿರುಳೆಂಬಂತೆ ಸೇವೆ ಸಲ್ಲಿಸುತ್ತಿದ್ದು, ಸೋಂಕಿತರು ಶೀಘ್ರ ಗುಣಮುಖರಾಗುವಲ್ಲಿ ಗಮನವಹಿಸುತ್ತಿದ್ದಾರೆ.

"

Follow Us:
Download App:
  • android
  • ios