ಭಾರತದಲ್ಲಿ ಹೆಣ್ಣಮಕ್ಕಳ ಪಾಲನೆ, ಶಿಕ್ಷಣ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಆದರೆ ಇರಾನ್ ಪರಿಸ್ಥಿತಿ ಹಾಗಿಲ್ಲ. ಇಲ್ಲಿ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು ಮೂಲಭೂತವಾದಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಹೆಣ್ಣುಮಕ್ಕಳ ಶಿಕ್ಷಣ ತಪ್ಪಿಸಲು 100ಕ್ಕೂ ಹೆಚ್ಚು ಮಕ್ಕಳಿಗೆ ವಿಷವುಣಿಸಿದ ಘಟನೆ ನಡೆದಿದೆ.
ಕೋಮ್(ಫೆ.28): ಇರಾನ್‌ನಲ್ಲಿ ಹೆಣ್ಣು ಮಕ್ಕಳು ಸುರಕ್ಷಿವಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಇತ್ತೀಚೆಗೆ ಹಿಜಾಬ್ ಕುರಿತು ಪ್ರತಿಭಟನೆ, ಗದ್ದಲಕ್ಕೆ ಹಲವು ಮಹಿಳಾ ಹೋರಾಟಗಾರರು ಬಲಿಯಾಗಿದ್ದಾರೆ. ಹೆಣ್ಣುಮಕ್ಕಳು ಹಿಜಾಬ್ ಧರಿಸದೆ ಏನೂ ಮಾಡುವಂತಿಲ್ಲ. ಸಂಪ್ರದಾಯ, ಕಟ್ಟುಪಾಡು ಮುರಿದರೆ ಮತ್ತೆ ಸಮಾಜದಲ್ಲಿ ಓಡಾಡುವುದೇ ಕಷ್ಟ. ಹಿಜಾಬ್ ಗಲಾಟೆ ಬೆನ್ನಲ್ಲೇ ಇದೀಗ ಇರಾನ್ ಕೊಮ್ ನಗರದಲ್ಲಿ ಬಾಲಕಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಈ ಕುರಿತು ಇರಾನ್ ಸಚಿವರೇ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಬಾಲಕಿಯನ್ನು ಶಾಲೆಗೆ ಬರುವುದನ್ನು ತಪ್ಪಿಸಲು ಹೆಣ್ಣುಮಕ್ಕಳಿಗೆ ವಿಷವುಣಿಸಲಾಗಿದೆ. 100ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ವಿಷವುಣಿಸಲಾಗಿದೆ. ಹಲವರು ಆಸ್ವಸ್ಥರಾಗಿ ಆಸ್ಪತ್ರೆ ಸೇರಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ.
ಕೋಮ್ ನಗರದಲ್ಲಿನ ಶಾಲೆಗಳಲ್ಲಿ ಈ ವ್ಯವಸ್ಥಿತಿ ಷಡ್ಯಂತ್ರ ಬಯಲಾಗಿದೆ. ಶಾಲೆಗಳಲ್ಲೇ ಮಕ್ಕಳಿಗೆ ವಿಷವುಣಿಸಲಾಗಿದೆ. ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಇದೇ ವೇಳೆ ಬಾಲಕಿಯರ ಶಾಲೆ ಮುಚ್ಚುವಂತೆ ಆಗ್ರಹಗಳು ಕೇಳಿಬಂದಿದೆ. ಈ ಘಟನೆ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ. ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ. ಇದು ಸರ್ಕಾರವೇ ವ್ಯವಸ್ಥಿತವಾಗಿ ಈ ಷಡ್ಯಂತ್ರ ನಡೆಸುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಉಚಿತ ಶಿಕ್ಷಣ ಜವಾಬ್ದಾರಿ ಹೊತ್ತ ಗೌತಮ್ ಗಂಭೀರ್!
ಕಳೆದ ನವೆಂಬರ್ ತಿಂಗಳಿನಿಂದ ಈ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ದಕ್ಷಿಣ ತೆಹ್ರಾನ್‌ನಲ್ಲಿ ಅತೀ ಹೆಚ್ಚು ಘಟನೆಗಳು ನಡೆದಿದೆ. ಕೆಲ ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ. ಫೆಬ್ರವರಿ 14 ರಂದು ಬಾಲಕಿಯರನ್ನು ಶಾಲೆಯಿಂದ ಬಿಡಿಸಲು, ಶಾಲೆಗೆ ಬರುವುದನ್ನು ತಪ್ಪಿಸಲು ವಿಷವುಣಿಸುತ್ತಿರುವ ಕುರಿತು ಬಹಿರಂಗವಾಗಿದೆ. ಮಕ್ಕಳು ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಬೆನ್ನಲ್ಲೇ ಪೋಷಕರು ಶಾಲಾ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.ಈ ವೇಳೆ ಪದೇ ಪದೇ ಅಸ್ವಸ್ಥರಾಗುತ್ತಿರುವ ಕುರಿತು ಸ್ಪಷ್ಟ ಉತ್ತರ ನೀಡಲು ವಿಫಲರಾಗಿದ್ದಾರೆ. ಇಷ್ಟೇ ಅಲ್ಲ ಮಕ್ಕಳ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿರುವುದನ್ನು ವೈದ್ಯರು ಧೃಢಪಡಿಸಿದ್ದಾರೆ. ಈ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ.
ಇದೀಗ ಬಾಲಕಿಯರಿಗೆ ವಿಷವುಣಿಸಿದ ಪ್ರಕರಣವನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಲಾಗಿದೆ.ಇದು ಮೂಲಭೂತವಾದಿಗಳ ಕೃತ್ಯ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಸರ್ಕಾರ ದಿವ್ಯ ಮೌನವಹಿಸಿದೆ. ಯಾವುದೇ ಪ್ರಕರಣ ದಾಖಲಿಸಿಲ್ಲ. ಇದರ ವಿರುದ್ದ ತನಿಖೆ ಮಾಡುವ ಗೋಜಿಗೆ ಹೋಗಿಲ್ಲ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹೆಣ್ಣಮಕ್ಕಳ ವಿಚಾರದಲ್ಲಿ ಇದುವರೆಗೆ ಇರಾನ್ ಸರ್ಕಾರ ತೆಗೆದುಕೊಂಡಿರುವ ನಡೆ ವಿರುದ್ಧಾಗಿದೆ. ಹಿಜಾಬ್ ವಿಚಾರದಲ್ಲಿ ಸರ್ಕಾರ ತನ್ನ ಕಟ್ಟುಪಾಡುಗಳಿಂದ ಹಿಂದೆ ಸರಿಯುತ್ತಿಲ್ಲ.
ತಮ್ಮನನ್ನು ಮಡಿಲಲ್ಲಿಟ್ಟುಕೊಂಡು ಪಾಠ ಕೇಳುತ್ತಿದ್ದ ಮಣಿಪುರ ಬಾಲೆಗೆ ನೆರವಾದ ಸಚಿವ
ಇತ್ತೀಚೆಗೆ ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆಗೆ ಬೆಂಬಲಿಸಿದ್ದಕ್ಕಾಗಿ ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ನಟಿ ತರನೆಹ್ ಅಲಿದೋಸ್ತಿ (38) ಯನ್ನು ಬಂಧಿಸಲಾಗಿತ್ತು. ಸುಳ್ಳು ಹಾಗೂ ತಿರುಚಿದ ವಿಷಯ ಹರಡಿದ ಅಶಾಂತಿ ಸೃಷ್ಟಿಸಿದ ಆರೋಪ ಹೊರಿಸಿ ಅವರನ್ನು ಬಂಧಿಸಲಾಗಿದೆ.ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸ್ ಘಟಕದಿಂದ ಬಂಧಿಸಲ್ಪಟ್ಟು ಬಳಿಕ ಸಾವನ್ನಪ್ಪಿದ್ದ ಮಹ್ಸಾ ಅಮಿನಿ ಎಂಬ ಯುವತಿ ಸಾವಿನ ಬಳಿಕ ದೇಶದ ಕಡ್ಡಾಯ ಹಿಜಾಬ್ ನಿಯಮದ ವಿರುದ್ಧ ಸಾವಿರಾರು ಜನರು ಉಗ್ರ ಹೋರಾಟ ನಡೆಸಿದ್ದರು. ಇದೇ ವೇಳೆ, ತರನೆಹ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್ ಮಾಡುವ ಮೂಲಕ ಪರೋಕ್ಷವಾಗಿ ಇರಾನಿಗಳನ್ನು ಹಿಜಾಬ್ ವಿರುದ್ಧದ ಪ್ರತಿಭಟನೆಗೆ ಭಾಯಿಯಾಗುವಂತೆ ಕರೆ ನೀಡಿದ್ದರು.
