ಶ್ವೇತಭವನದಲ್ಲಿ ಮೋದಿ ಟ್ರಂಪ್ ಭೇಟಿ: ಪ್ರಧಾನಿಗೆ 'ಅವರ್ ಜರ್ನಿ ಟುಗೆದರ್ ಪುಸ್ತಕ' ಉಡುಗೊರೆ ನೀಡಿದ ಟ್ರಂಪ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ ಡಿಸಿಯ ವೈಟ್ ಹೌಸ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಅಧ್ಯಕ್ಷ ಟ್ರಂಪ್ ಅವರ ಪದಗ್ರಹಣದ ನಂತರ ಇಬ್ಬರು ನಾಯಕರ ಮೊದಲ ಔಪಚಾರಿಕ ಭೇಟಿ ಇದಾಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ ಡಿಸಿಯ ವೈಟ್ ಹೌಸ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಅಧ್ಯಕ್ಷ ಟ್ರಂಪ್ ಅವರ ಪದಗ್ರಹಣದ ನಂತರ ಇಬ್ಬರು ನಾಯಕರ ಮೊದಲ ಔಪಚಾರಿಕ ಭೇಟಿ ಇದಾಗಿತ್ತು.
ಪ್ರಧಾನಿ ಮೋದಿಗೆ ಟ್ರಂಪ್ ವಿಶೇಷ ಉಡುಗೊರೆ
ಈ ಸಂದರ್ಭದಲ್ಲಿ, ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿ ಅವರಿಗೆ 'ಅವರ್ ಜರ್ನಿ ಟುಗೆದರ್' ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಇದೇ ವೇಳೆ ಭಾರತ-ಅಮೆರಿಕ ನಡುವಿನ ವಿವಿಧ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು.
ವೈಟ್ ಹೌಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಭೇಟಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೈಟ್ ಹೌಸ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಅಪ್ಪಿಕೊಂಡು, 'ನೀವು ನನ್ನ ಆತ್ಮೀಯ ಗೆಳೆಯರಲ್ಲಿ ಒಬ್ಬರು' ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದೇನು?
ಪ್ರಧಾನಿ ಮೋದಿ, 'ಅಧ್ಯಕ್ಷ ಟ್ರಂಪ್ ಅವರ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ನಾನು ಅನುಭವಿಸಿದ ಉತ್ಸಾಹ ಮತ್ತು ವಿಶ್ವಾಸದೊಂದಿಗೆ ನಾವು ಮತ್ತೊಮ್ಮೆ ಒಟ್ಟಾಗಿ ಮುನ್ನಡೆಯುತ್ತೇವೆ' ಎಂದು ಹೇಳಿದರು.
ವ್ಯಾಪಾರ ನೀತಿ ಕುರಿತು ಚರ್ಚೆ
ಭೇಟಿಯ ಸಂದರ್ಭದಲ್ಲಿ, ಅಧ್ಯಕ್ಷ ಟ್ರಂಪ್ ತಮ್ಮ ಆಡಳಿತದ ವ್ಯಾಪಾರ ನೀತಿಯ ಕುರಿತು ಚರ್ಚಿಸುತ್ತಾ, 'ನಾವು ಹಲವು ದೊಡ್ಡ ವ್ಯಾಪಾರ ಒಪ್ಪಂದಗಳನ್ನು ಶೀಘ್ರದಲ್ಲೇ ಘೋಷಿಸಲಿದ್ದೇವೆ. ಭಾರತ ಮತ್ತು ಅಮೆರಿಕ ನಡುವೆ ಕೆಲವು ಅದ್ಭುತ ವ್ಯಾಪಾರ ಒಪ್ಪಂದಗಳು ನಡೆಯಲಿವೆ ಎಂದು ಹೇಳಿದರು. ಟ್ರಂಪ್ ಹಾಗೂ ಮೋದಿಯವರ ಈ ಭೇಟಿಯನ್ನು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮತ್ತು ವ್ಯಾಪಾರ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.