Asianet Suvarna News Asianet Suvarna News

ಬಾಂಗ್ಲಾ: 4 ಹಿಂದೂ ದೇಗುಲಗಳ ಮೇಲೆ ದುಷ್ಕರ್ಮಿಗಳ ದಾಳಿ!

* ನಾಲ್ಕು ಹಿಂದೂ ದೇವಾಲಯ ಸೇರಿದಂತೆ ಕೆಲವು ಅಂಗಡಿಗಳು ಮತ್ತು ಮನೆಗಳ ನಾಶ

* ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳ ಕುಕೃತ್ಯ

* ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನರ ಬಂಧನ

Miscreants attack Hindu temples in Bangladesh pod
Author
Bangalore, First Published Aug 10, 2021, 12:37 PM IST

ಢಾಕಾ(ಆ.10): ನಾಲ್ಕು ಹಿಂದೂ ದೇವಾಲಯ ಸೇರಿದಂತೆ ಕೆಲವು ಅಂಗಡಿಗಳು ಮತ್ತು ಮನೆಗಳನ್ನು ದುಷ್ಕರ್ಮಿಗಳು ಬಾಂಗ್ಲಾದೇಶದ ಕಹುಲ್ನಾ ಜಿಲ್ಲೆಯಲ್ಲಿ ನಾಶ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.

ಪಾಕ್‌ ಹಿಂದೂ ದೇಗುಲ ಧ್ವಂಸ: 50 ಜನ ಅರೆಸ್ಟ್‌, 150 ಮಂದಿ ಮೇಲೆ ಕೇಸ್‌

ಶಿಯಾಲಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದೆ. ಮೊದಲಿಗೆ ದುಷ್ಕರ್ಮಿಗಳು ಶಿಯಾಲಿ ಮಹಾಸಂಸ್ಥಾನ ದೇವಾಲಯಕ್ಕೆ ನುಗ್ಗಿ ಅಲ್ಲಿರುವ ವಿಗ್ರಹಗಳನ್ನು ಒಡೆದುಹಾಕಿ ಬೆಂಕಿ ಹಚ್ಚಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ದೇಗುಲ ಧ್ವಂಸ: ವಿಗ್ರಹಗಳು ನುಚ್ಚು ನೂರು!

ನಂತರ ಶಿಯಾಲಿ ಪುರ್‌ಬಪರದಲ್ಲಿರುವ ಹರಿ ದೇವಾಲಯದಲ್ಲಿರುವ ಮೂರ್ತಿಗಳನ್ನು ನಾಶಪಡಿಸಿದ್ದಾರೆ. ಸುಮಾರು ನಾಲ್ಕು ದೇವಸ್ಥಾನಗಳಿಂದ 10 ಮೂರ್ತಿಗಳನ್ನು ದುಷ್ಕರ್ಮಿಗಳು ನಾಶಗೊಳಿಸಿದ್ದಾರೆ. ಸ್ಥಳೀಯ ಆಡಳಿತ ಶಾಂತಿ ಕಾಪಾಡಲು ಪ್ರಯತ್ನಿಸುತ್ತಿದೆ.

Follow Us:
Download App:
  • android
  • ios