Asianet Suvarna News Asianet Suvarna News

ಯಹೂದಿ ಕಾರಣಕ್ಕೆ ದಂಪತಿಯನ್ನು ಹೊರಹಾಕಿದ ಅಮೇರಿಕನ್ ಏರ್‌ಲೈನ್ಸ್!

ಅಮೆರಿಕಾ ಅದೆಷ್ಟೇ ಮುಂದುವರಿದರೂ ಧರ್ಮ ನಿಂದನೆ, ಜಾತಿ ನಿಂದನೆಗಳು ನಡೆಯುತ್ತಲೇ ಇದೆ. ಹಲವು ಭಾರಿ ಭಾರತೀಯರು ಅನ್ನೋ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ಕಿರುಕುಳ ನೀಡಿದ ಘಟನೆಗಳು ಸಾಕಷ್ಟಿವೆ. ಇದೀಗ ಮಿಶಿಗನ್‌ನ ದಂಪತಿ ಹಾಗೂ 19 ತಿಂಗಳ ಮಗುವನ್ನು ಯಹೂದಿಗಳು ಅನ್ನೋ ಕಾರಣಕ್ಕೆ ವಿಮಾನದಿಂದ ಹೊರಹಾಕಲಾಗಿದೆ.

Michigan couple suing American Airlines for discrimination alleging in a lawsuit
Author
Bengaluru, First Published Feb 2, 2020, 6:29 PM IST

ಟೆಕ್ಸಾಸ್(ಫೆ.02): ಯಹೂದಿಗಳೆಂಬ ಕಾರಣದಿಂದ ಮಿಶಿಗನ್ ಮೂಲದ ದಂಪತಿಯನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಜೊಸೆಫ್ ಅಡ್ಲರ್ ಹಾಗೂ ಜೆನ್ನಿ ಅಡ್ಲರ್ ಮಿಯಾಮಿಯಿಂದ ಡಿಯೊಟ್ರೊಯಿಟ್‌ಗೆ ತೆರಳಲು ವಿಮಾನ ಹತ್ತಿದ್ದರು. ಆದರೆ ಧರ್ಮದ ಕಾರಣ ದಂಪತಿ ಹಾಗೂ ಮಗುವನ್ನು ವಿಮಾನದಿಂದ ಹೊರಕ್ಕೆ ಹಾಕಿದ್ದಾರೆ ಎಂದು ದಂಪತಿಗಳು ದೂರು ನೀಡಿದ್ದಾರೆ.

ಇದನ್ನೂ ಓದಿ: ಅಸಂಬದ್ಧ ಪ್ರಶ್ನೆ ಕೇಳಿದ್ದಕ್ಕೆ ಹೊಟೇಲ್‌ನಲ್ಲಿ 27ರು. ಚಾರ್ಜ್

ವಿಮಾನ ಹತ್ತಿ ಕುಳಿತ 5 ನಿಮಿಷಕ್ಕೆ ಎಜೆಂಟ್ ಆಗಮಿಸಿ ತಕ್ಷಣವೇ ವಿಮಾನದಿಂದ ಇಳಿಯಬೇಕು ಎಂದು ಸೂಚಿಸಿದ್ದಾನೆ. ತುರ್ತು ಕಾರಣ ನೀಡಿ ವಿಮಾನದಿಂದ ಇಳಿಯುವಂತೆ ಸೂಚಿಸಿದ್ದಾನೆ. ದಂಪತಿ ಹಾಗೂ 19 ತಿಂಗಳ ಮಗುವನ್ನು ವಿಮಾನದಿಂದ ಕೆಳಗಿಳಿದಾಗ, ಎಜೆಂಟ್ ಬೇರೆ ಕಾರಣ ನೀಡಿದ್ದಾನೆ.

ಇದನ್ನೂ ಓದಿ: ಅಪ್ಪನ ವಯಸ್ಸಿನ ಪುರುಷನೊಂದಿಗೆ ಕನ್ಯತ್ವ ಕಳೆದುಕೊಳ್ಳೋ ಬಯಕೆ ಈ ಚೆಲುವೆಗೆ.

ನಿಮ್ಮ ದೇಹ ದುರ್ವಾಸನೆ ಬೀರುತ್ತಿದೆ. ಹೀಗಾಗಿ ಪೈಲೆಟ್ ನಿಮ್ಮನ್ನು ಕೆಳೆಗಿಳಿಸುವಂತೆ ಸೂಚಿಸಿದ್ದಾರೆ ಎಂದು ಎಜೆಂಟ್ ಹೇಳಿದದಾನ. ಯಹೂದಿಗಳಾದ ಜೊಸೆಫ್ ಅಡ್ಲರ್,  ಜೆನ್ನಿ ಅಡ್ಲರ್ ಹಾಗೂ ಮಗುವನ್ನು ಬಿಟ್ಟು ವಿಮಾನ ಟೇಕ್ ಆಫ್ ಆಗಿದೆ. ಇದರಿಂದ ದಂಪತಿಗಳಿಗೆ ಆಘಾತವಾಗಿದೆ.  ಬೆಳಗೆ ಸ್ನಾನ ಮಾಡಿ ಬಂದಿರುವ ನಮ್ಮ ದೇಹ ದುರ್ವಾಸನೆ ಬೀರುತ್ತಿದೆ ಅನ್ನೋ ಸುಳ್ಳು ಕಾರಣ ನೀಡಿದ್ದಾರೆ. ಹಲವು ಬಾರಿ ನಮ್ಮನ್ನು ಯಹೂದಿ ಅನ್ನೋ ಕಾರಣಕ್ಕೆ ಅವಮಾನಿಸಲಾಗಿದೆ, ನಿಂದಿಸಲಾಗಿದೆ ಎಂದು ದಂಪತಿಗಳು ದೂರು ಸಲ್ಲಿಸಿದ್ದಾರೆ.

ವಿಮಾನ ನಮ್ಮನ್ನು ಇಳಿಸಿ ಪ್ರಯಾಣ ಆರಂಭಿಸಿದೆ. ನಮ್ಮ ಲಗೇಜ್, ಮಗುವಿನ ಕಾರ್ ಸೀಟ್, ಬಟ್ಟೆಗಳು ಸೇರಿದಂತೆ ಎಲ್ವಾ ವಸ್ತುಗಳು ವಿಮಾನದಲ್ಲಿತ್ತು. ಇದ್ಯಾವುದು ನಮಗೆ ಸಿಕ್ಕಿಲ್ಲ. ವಿಮಾನದಿಂದ ಇಳಿದ ದಿನ ನಮಗೆ ಮತ್ತೊಂದು ವಿಮಾನ ಇರಲಿಲ್ಲ. ಮಂದಿನ ದಿನದವರೆಗೆ ನಮ್ಮ 19 ತಿಂಗಳ ಮುಗುವಿನೊಂದಿಗೆ ನರಕ ಯಾತನೆ ಅನುಭವಿಸಬೇಕಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.
 

Follow Us:
Download App:
  • android
  • ios