ಕೊಲರೋಡೋ(ಜ.17):  ಪಾರ್ಟಿಗೆಂದು ಹೊಟೇಲ್‌ಗೆ ಹೋಗಿ ವೇಟರ್‌ ಜತೆ ಅಂಸಂಬದ್ದ ಪ್ರಶ್ನೆ ಕೇಳಿ ಆತನನ್ನು ಗಲಿಬಿಲಿಗೊಳಿಸುವ ಚಟ ನಿಮಗೆ ಇದ್ದರೆ ಇಂದಿಗೆ ಬಿಟ್ಟು ಬಿಡಿ. 
ಹಾಗಂತ ನಿಮಗೆ ನಾವು ಉಪದೇಶ ಕೊಡುತ್ತಿಲ್ಲ. ನಿಮ್ಮ ಹಣವನ್ನು ಉಳಿತಾಯ ಮಾಡಿ ಎಂದಷ್ಟೇ ಹೇಳುತ್ತಿದ್ದವೆ ಅಷ್ಟೇ. ಹೌದು! 

ಕೊಲರೋಡೋದ ಡೆನ್ವೆರ್‌ನಲ್ಲಿರುವ ರೆಸ್ಟೋರೆಂಟ್‌ ಒಂದು ಅಸಂಬದ್ದ ಪ್ರಶ್ನೆ ಕೇಳಿದ್ದಕ್ಕೆ 0.38 ಡಾಲರ್‌ (27 ರು.) ಚಾರ್ಜ್ ಮಾಡಿದೆ. ಹಾಗಂತ ಇದು ಮೊದಲನೇ ಬಾರಿ ಏನಲ್ಲ. ಕಳೆದ 20 ವರ್ಷಗಳಿಂದ ಹೊಟೇಲ್‌ ಈ ದಂಡ ಹಾಕುತ್ತಿದೆಯಂತೆ. 

ರೈಲು ನಿಲ್ದಾಣಗಳಲ್ಲಿ ರಾತ್ರಿ ಹೊತ್ತು ತಂಗಲು ಅಗ್ಗದ ದರಕ್ಕೆ 'ಪಾಡ್ ಹೋಟೆಲ್'!...

ಈ ಬಿಲ್‌ ಅನ್ನು ಗ್ರಾಹಕರೋರ್ವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಭಾರೀ ವೈರಲ್‌ ಆಗಿದೆ.

ಊಟದ ಬಿಲ್ ಜೊತೆಗೆ ಈ ರೆಸ್ಟೋರೆಂಟಿನಲ್ಲಿ ನೀವು ಹೆಚ್ಚಾಗಿ ಮಾತಾಡಿದ್ದಕ್ಕೂ ದಂಡ ಕೊಟ್ಟು ಹೋಗಬೇಕಾಗುತ್ತದೆ. ಆದ್ದರಿಂದ ಯಾವುದೇ ರೀತಿ ಪ್ರಶ್ನೆ ಕೇಳುವ ಮುನ್ನ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳಿತು.