ಬರ್ನ್(ಆ.18): ದುಬಾರಿ ಕಾರುಗಳು ಎಂದ ಕೂಡಲೇ ಮರ್ಸಿಡಿಸ್‌, ಬುಗಾಟ್ಟಿಹಾಗೂ ಪೋರ್ಷೆ ಕಾರುಗಳ ಹೆಸರು ನೆನಪಾಗುತ್ತದೆ. ಈ ಕಾರುಗಳು ಎಷ್ಟು ದುಬಾರಿಯೋ ಅಪಘಾತಕ್ಕೀಡಾದರೂ ಅಷ್ಟೇ ಬೆಲೆ ತೆರಬೇಕು. ಇದಕ್ಕೆ ಪ್ರತ್ಯಕ್ಷ ನಿದರ್ಶನವೊಂದು ಸ್ವಿಜರ್ಲೆಂಡ್‌ನಲ್ಲಿ ನಡೆದಿದೆ.

ಬೆಳಗಾವಿ: ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಮೂಕ ಪ್ರಾಣಿಗಳು ಸಜೀವ ದಹನ

ಈ ಮೂರು ಕಾರುಗಳು ಸರಣಿ ಅಪಘಾತಕ್ಕೀಡಾಗಿದ್ದರಿಂದ ಸುಮಾರು 30 ಕೋಟಿ ರು. ನಷ್ಟಸಂಭವಿಸಿದೆಯಂತೆ. ಸ್ವಿಸ್‌ ಆಲ್‌್ಫ$್ಸನ ಗಾಟ್ಹಾರ್ಡ್‌ ಪಾಸ್‌ನಲ್ಲಿ ವಾಹನಗಳು ನಿಧಾನವಾಗಿ ಸಾಗುತ್ತಿದ್ದರಿಂದ ವೇಗವಾಗಿ ಬಂದ ಬುಗಾಟ್ಟಿಕಾರು ಮತ್ತು ಮರ್ಸಿಡಿಸ್‌ ಮಧ್ಯೆ ಡಿಕ್ಕಿ ಸಂಭವಿಸಿತ್ತು.

ಇದರಿಂದ ಟ್ರಾಫಿಕ್‌ ಜಾಮ್‌ ಆಗಿದ್ದರಿಂದ ಹಿಂದಿನಿಂದ ಬರುತ್ತಿದ್ದ ಪೋರ್ಷೆ ಕಾರು ಕೂಡ ಅಪಘಾತಿಕ್ಕೀಡಾಗಿದೆ. ಈ ಸರಣಿ ಅಪಘಾತದಲ್ಲಿ ಪ್ರಾಣಾಪಾಯ ಆಗದೇ ಇದ್ದರೂ ಕೋಟಿಗಟ್ಟೆಲೆ ನಷ್ಟಸಂಭವಿಸಿದೆ.