ಬೆಳಗಾವಿ(ಆ.16): ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದು ಪರಿಣಾಮ ದನ, ಕರುಗಳ ಸಜೀವವಾಗಿ ದಹನವಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ತೇಗೂರು ಗ್ರಾಮದ ಹೊರವಲಯದಲ್ಲಿ ನಿನ್ನೆ ತಡರಾತ್ರಿ(ಶನಿವಾರ) ನಡೆದಿದೆ. 

ಘಟನೆಯಲ್ಲಿ ಎರಡು ಎತ್ತು, ಎರಡು ಆಕಳು, ಎರಡು ಕರುಗಳು, ಒಂದು ಕುರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಶಿವರಾಯ ಚಂದ್ರಪ್ಪ ಪಾಗದ ಎಂಬುವರಿಗೆ ಸೇರಿದ ಜಾನುವಾರುಗಳು ಎಂದು ತಿಳಿದು ಬಂದಿದೆ. 

1824ರಲ್ಲಿ ಬ್ರಟಿಷರ ವಿರುದ್ಧ ತೊಡೆತಟ್ಟಿ ನಿಂತ ಸಂಗೊಳ್ಳಿ ರಾಯಣ್ಣ; ಈಗಲೂ ಬದುಕ್ಕಿದ್ದಾನೆ ಕ್ರಾಂತಿವೀರ!

ಶಿವರಾಯ ಚಂದ್ರಪ್ಪ ಪಾಗದ ಅವರು ತಮ್ಮ ಹೊಲದಲ್ಲಿ ಗುಡಿಸಲು ನಿರ್ಮಿಸಿ ಅಲ್ಲಿಯೇ ದನ ಕರುಗಳನ್ನು ಕಟ್ಟಿದ್ದರು. ಶಿವರಾಯ ಚಂದ್ರಪ್ಪ ಪಾಗದ ರಾತ್ರಿ ಊಟಕ್ಕೆಂದು ಮನೆಗೆ ಬಂದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.