ಭಾರತದಲ್ಲಿ ಸಾಕಷ್ಟು ವಂಚನೆ ಮಾಡಿ ಈಗ ಆ್ಯಂಟಿಗುವಾದಲ್ಲಿ ಅಡಗಿರುವ ಶ್ರೀಮಂತ ಉದ್ಯಮಿ ಮೇಹುಲ್‌ ಚೋಕ್ಸಿ, ಈಗ ಭಾರತಕ್ಕೆ ಗಡೀಪಾರಿನಿಂದ ಪಾರಾಗಲು ಆ್ಯಂಟಿಗುವಾದಲ್ಲಿನ ಪೊಲೀಸ್‌ ಅಧಿಕಾರಿಗಳು ಹಾಗೂ ಜಡ್ಜ್‌ಗಳಿಗೇ ಲಂಚ ನೀಡಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.  

ಸೇಂಟ್‌ ಜಾನ್ಸ್‌ (ಆ್ಯಂಟಿಗುವಾ): ಭಾರತದಲ್ಲಿ ಸಾಕಷ್ಟು ವಂಚನೆ ಮಾಡಿ ಈಗ ಆ್ಯಂಟಿಗುವಾದಲ್ಲಿ ಅಡಗಿರುವ ಶ್ರೀಮಂತ ಉದ್ಯಮಿ ಮೇಹುಲ್‌ ಚೋಕ್ಸಿ, ಈಗ ಭಾರತಕ್ಕೆ ಗಡೀಪಾರಿನಿಂದ ಪಾರಾಗಲು ಆ್ಯಂಟಿಗುವಾದಲ್ಲಿನ ಪೊಲೀಸ್‌ ಅಧಿಕಾರಿಗಳು ಹಾಗೂ ಜಡ್ಜ್‌ಗಳಿಗೇ ಲಂಚ ನೀಡಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಚೋಕ್ಸಿಯಿಂದ ಲಂಚ ಪಡೆದಿರುವ ಆ್ಯಂಟಿಗುವಾದ (Antigua) ಪೊಲೀಸ್‌ ಅಧಿಕಾರಿಯೊಬ್ಬರು (Police Officer) ಹಾಗೂ ಜಡ್ಜ್‌ (Judge) ಒಬ್ಬರು, ಆತನನ್ನು ತನ್ನ ವಶಕ್ಕೆ ತೆಗೆದುಕೊಂಡು ಭಾರತಕ್ಕೆ ಗಡೀಪಾರು ಮಾಡುವ ಇಂಟರ್‌ಪೋಲ್‌ ಪ್ರಕ್ರಿಯೆಗಳಿಗೆ ಅಡ್ಡಿ ಮಾಡುತ್ತಿದ್ದಾರೆ. ತನಿಖೆ ಹಾಗೂ ವಿಚಾರಣೆಯನ್ನು ವಿಳಂಬ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಖ್ಯಾತ ಆರ್ಥಿಕ ಅಪರಾಧಗಳ ತನಿಖಾ ಪತ್ರಕರ್ತ ಕೆನೆತ್‌ ರಿಜಾಕ್‌ (Kenneth Rizak) ಅವರು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತದ ಜತೆ ಗಡೀಪಾರು ಒಪ್ಪಂದ ಇರದ ಕ್ಯೂಬಾಗೆ (Cuba) ಪರಾರಿಯಾಗಲು ಚೋಕ್ಸಿ ಯತ್ನಿಸಿದ್ದ. ಆದರೆ ಆತನನ್ನು ಕ್ಯೂಬಾಗೆ ಕರೆದೊಯ್ಯಲು ಸಿದ್ಧರಿದ್ದ ಕಳ್ಳಸಾಗಣೆದಾರರಿಗೆ ಸಾಕಷ್ಟು ಹಣ ಕೊಡಲು ನಿರಾಕರಿಸಿದ. ಹೀಗಾಗಿ ಆ್ಯಂಟಿಗುವಾದಲ್ಲೇ ಆತ ಉಳಿದುಕೊಂಡಿದ್ದಾನೆ ಎಂದು ರಿಜಾಕ್‌ ಹೇಳಿದ್ದಾರೆ.

ಆ್ಯಂಟಿಗುವಾದಲ್ಲೂ ಅಲ್‌ ಪೋರ್ಟೊ ಹೆಸರಿನ ರೆಸ್ಟೋರೆಂಟ್‌ ಅನ್ನು ಚೋಕ್ಸಿ ಹೊಂದಿದ್ದಾನೆ. ಅಲ್ಲಿಯೇ ಆತ ಆ್ಯಂಟಿಗುವಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಹೆನ್ರಿ ಅವರನ್ನು ದಿನಕ್ಕೆ ಕನಿಷ್ಠ 3 ಬಾರಿಯಾದರೂ ಭೇಟಿ ಮಾಡುತ್ತಾನೆ. ಇನ್ನು ಹನ್ರಿ ಜತೆಗೆ ನ್ಯಾಯಾಧೀಶ ಕಾನ್ಲಿಫ್‌ ಕ್ಲಾರ್ಕ್ ಅವರಿಗೂ ಆತ ಲಂಚ ನೀಡಿದ್ದಾನೆ. ಈಗಾಗಲೇ ಆ್ಯಂಟಿಗುವಾ ಕೋರ್ಟು, ಚೋಕ್ಸಿ ಗಡೀಪಾರಿಗೆ ಆದೇಶ ಹೊರಡಿಸಿದೆ. ಆದರೂ ಕೆಲವು ಕಾನೂನು ಪ್ರಕ್ರಿಯೆಗಳು ಬಾಕಿ ಇವೆ. ಈ ಪ್ರಕ್ರಿಯೆಗಳೇ ಚೋಕ್ಸಿಗೆ ಬಂಡವಾಳವಾಗಿವೆ. ಚೋಕ್ಸಿಯಿಂದ ಲಂಚ ಪಡೆದ ಹೆನ್ರಿ ಮತ್ತು ಕ್ಲಾರ್ಕ್ ಅವರು ಗಡೀಪಾರಿಗೆ ಉತ್ಸುಕವಾಗಿರುವ ಇಂಟರ್‌ಪೋಲ್‌ಗೆ ನಾನಾ ನೆಪಗಳನ್ನು ಹೇಳಿ ಅಡ್ಡಿ ಮಾಡುತ್ತಿದ್ದಾರೆ ಎಂದು ರಿಜಾಗ್‌ ಬ್ಲಾಗ್‌ನಲ್ಲಿ ವಿವರಿಸಿದ್ದಾರೆ.

ಮೇಹುಲ್‌ ಚೋಕ್ಸಿ ವಿರುದ್ಧದ ಪ್ರಕರಣ ಕೈ ಬಿಟ್ಟ ಡೊಮಿನಿಕಾ ಸರ್ಕಾರ; ಭಾರತಕ್ಕೆ ಹಿನ್ನಡೆ

PNB Scam: ಅನಾರೋಗ್ಯ ಕಾಡುತ್ತಿದೆ ನನ್ನನ್ನು ಮತ್ತೆ ಕಿಡ್ನಾಪ್ ಮಾಡಬಹುದು, ಚೋಕ್ಸಿ ವಿಡಿಯೋ ವೈರಲ್