Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು

ಅಮೆರಿಕಾದ ಫ್ಲೋರಿಡಾದಲ್ಲಿ ಚಂಡ ಮಾರುತದ ಅಬ್ಬರ ಜೋರಾಗಿದ್ದು, ಎಡೆ ಬಿಡದೇ ಸುರಿಯುತ್ತಿರುವ ಗಾಳಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಂಡ ಮಾರುತದಿಂದ ತನ್ನ ದುಬಾರಿ ಮೌಲ್ಯದ ಐಷಾರಾಮಿ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿರುವ ದೃಶ್ಯದ ಫೋಟೋವೊಂದನ್ನು ಕಾರು ಮಾಲೀಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ. 

Mans laxuries McLaren car washed away in cyclone in Florida akb

ಫ್ಲೋರಿಡಾ: ಅಮೆರಿಕಾದ ಫ್ಲೋರಿಡಾದಲ್ಲಿ ಚಂಡ ಮಾರುತದ ಅಬ್ಬರ ಜೋರಾಗಿದ್ದು, ಎಡೆ ಬಿಡದೇ ಸುರಿಯುತ್ತಿರುವ ಗಾಳಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಂಡ ಮಾರುತದಿಂದ ತನ್ನ ದುಬಾರಿ ಮೌಲ್ಯದ ಐಷಾರಾಮಿ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿರುವ ದೃಶ್ಯದ ಫೋಟೋವೊಂದನ್ನು ಕಾರು ಮಾಲೀಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ. 

ಒಂದು ಮಿಲಿಯನ್ ಡಾಲರ್ ಎಂದರೆ ಭಾರತದ 81,467,800 ರೂಪಾಯಿಯ ಮೌಲ್ಯದ ಐಷಾರಾಮಿ ಮ್ಯಾಕ್‌ಲಾರೆನ್ ಪಿ ಸೂಪರ್ ಕಾರು(McLaren P1 supercar) ಹುರಿಕೇನ್ ಇಯನ್ ಚಂಡ ಮಾರುತದ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದೆ.  ಈ ಕಾರಿನ ಮಾಲೀಕ ಇರಿನ್ (Ernie) ಹೀಗೆ ಕೊಚ್ಚಿ ಹೋದ ತಮ್ಮ ಐಷಾರಾಮಿ ಕಾರಿನ ಹಲವು ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಾಪ್ಲೆಸ್ ಎಂಬಲ್ಲಿ ಇವರ ಹಳದಿ ಬಣ್ಣದ ಕಾರು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. 

 
 
 
 
 
 
 
 
 
 
 
 
 
 
 

A post shared by Ernie (@lambo9286)

ಕಾರನ್ನು ಈಗ ಗ್ಯಾರೇಜ್‌ಗೆ ಕಳುಹಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಮತ್ತೊಂದು ಫೋಟೋಗಳಲ್ಲಿ ಮ್ಯಾಕ್‌ಲಾರೆನ್ ಕಾರಿನ ಬಾಗಿಲುಗಳು ತೆರೆದಿರುವ ಫೋಟೋಗಳನ್ನು ಅವರು ಹಾಕಿಕೊಂಡಿದ್ದಾರೆ. ನನ್ನ ಹ್ಯುರಿಕೆನ್ ಸಪ್ಲೈ ಕಾರು ಎಂದು ಅವರು ಬರೆದುಕೊಂಡಿದ್ದಾರೆ. ಗ್ಯಾರೇಜ್‌ನಲ್ಲಿ ರೂಲ್ಸ್‌ ರಾಯ್ಸ್ (Rolls Roys) ಕಾರಿನ ಸಮೀಪದಲ್ಲಿ ಈ ಹಳದಿ ಬಣ್ಣದ ಮ್ಯಾಕ್ಲಾರೆನ್ ಕಾರನ್ನು ದುರಸ್ಥಿಗಾಗಿ ಪಾರ್ಕ್ ಮಾಡಲಾಗಿದೆ.  

ಹಬ್ಬದ ಪ್ರಯುಕ್ತ ಟಾಟಾ ಮೋಟಾರ್ಸ್ ಕಾರಿಗೆ ಭರ್ಜರಿ ಡಿಸ್ಕೌಂಟ್!

ಈ ವಿಡಿಯೋವನ್ನು ಸಾವಿರಾರು ಜನ ಲೈಕ್ ಮಾಡಿದ್ದು, ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ದೃಶ್ಯ ನೋಡಿ ನನ್ನ ಹೃದಯ ಒಡೆಯುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.  ಈ ಕಾರಿನ ಮಾಲೀಕನನ್ನು ನೋಡಲು ಬೇಸರವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.  ಮಳೆ ಹಾಗೂ ಚಂಡ ಮಾರುತದಿಂದಾಗಿ ಫ್ಲೋರಿಡಾದಲ್ಲಿ(Florida) ಭಾರಿ ಹಾನಿಯಾಗಿದ್ದು, ಬೋಟೊಂದು ಮಗುಚಿ 20 ವಲಸಿಗರು ನಾಪತ್ತೆಯಾಗಿದ್ದಾರೆ ಎಂದು ಅಮೆರಿಕಾದ ಗಡಿ ನಿಯಂತ್ರಣ ಸಿಬ್ಬಂದಿ ತಿಳಿಸಿದ್ದಾರೆ. ಇದೇ ಮುಳುಗಿದ ಬೋಟಿನಲ್ಲಿದ್ದ ನಾಲ್ವರು ಕ್ಯೂಬಾ ಜನರು ಈಜಿ ದ್ವೀಪವೊಂದನ್ನು ತಲುಪಿದ್ದು, ಬಳಿಕ ಅವರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

Vehicle Safety ಮುಂದಿನ ವರ್ಷದಿಂದ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ, ಗಡುವು ನೀಡಿದ ಗಡ್ಕರಿ!

ಅಮೆರಿಕದ ಫ್ಲೋರಿಡಾ ರಾಜ್ಯದ ನೈಋುತ್ಯ ಭಾಗದ ಮೇಲೆ ಗುರುವಾರ ಇಯಾನ್‌ ಚಂಡಮಾರುತ ಅಪ್ಪಳಿಸಿದ್ದು ಭಾರೀ ಅನಾಹುತ ಸೃಷ್ಟಿಸಿದೆ. ಚಂಡಮಾರುತದಿಂದ ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಾವಿರಾರು ಮನೆಗಳ ಚಾವಣಿ ಹಾರಿ ಹೋಗಿದೆ. ಜೊತೆಗೆ ಗಾಳಿಯ ಹೊಡೆತಕ್ಕೆ ಸಾವಿರಾರು ವಿದ್ಯುತ್‌ ಕಂಬಗಳು ನೆಲಸಮವಾಗಿದ್ದು, ಸುಮಾರು 25 ಲಕ್ಷ ಜನರಿಗೆ ವಿದ್ಯುತ್‌ ಪೂರೈಕೆ ಬಂದ್‌ ಮಾಡಲಾಗಿದೆ. ಭಾರೀ ಪ್ರವಾಹದಿಂದಾಗಿ ಸಾವಿರಾರು ಮನೆಗಳು, ಕಟ್ಟಡಗಳು ನೀರಿನಲ್ಲಿ ಮುಳುಗಿ ಹೋಗಿವೆ. ಹಲವು ಆಸ್ಪತ್ರೆಗಳ ಐಸಿಯು ಕೊಠಡಿಗೂ ನೀರು ನುಗ್ಗಿದ್ದು, ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇದು ಇತಿಹಾಸದಲ್ಲೇ ಅಮೆರಿಕಕ್ಕೆ ಅಪ್ಪಳಿಸಿದ ಅತ್ಯಂತ ಪ್ರಬಲ ಚಂಡಮಾರುಗಳ ಪೈಕಿ ಒಂದಾಗಿದೆ.
 

Latest Videos
Follow Us:
Download App:
  • android
  • ios