Asianet Suvarna News Asianet Suvarna News

ಹಬ್ಬದ ಪ್ರಯುಕ್ತ ಟಾಟಾ ಮೋಟಾರ್ಸ್ ಕಾರಿಗೆ ಭರ್ಜರಿ ಡಿಸ್ಕೌಂಟ್!

ದಸರಾ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಪ್ರಯುಕ್ತ ಟಾಟಾ ಮೋಟಾರ್ಸ್ ತನ್ನ ಆಯ್ದ ಕಾರುಗಳಿಗೆ ಡಿಸ್ಕೌಂಟ್ ಆಫರ್ ನೀಡಿದೆ. ಟಾಟಾ ಕಾರುಗಳ ಆಫರ್ ಕುರಿತು ಮಾಹಿತಿ ಇಲ್ಲಿದೆ.

Tiago to Harrier Tata Motors announces discount offers on Festival season ckm
Author
First Published Sep 29, 2022, 8:12 PM IST

ಮುಂಬೈ(ಸೆ.29): ಹಬ್ಬದ ಸೀಸನ್‌ನಲ್ಲಿ ಕೆಲ ಆಟೋಮೊಬೈಲ್ ಕಂಪನಿಗಳು ತಮ್ಮ ತಮ್ಮ ಕಾರುಗಳಿಗೆ ಆಫರ್ ನೀಡಿದೆ. ಇದೀಗ ಟಾಟಾ ಮೋಟಾರ್ಸ್ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಘೋಷಿಸಿದೆ. ಟಾಟಾ ಟಿಯಾಗೋ, ಟಿಗೋರ್, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಕಾರಿನ ಮೇಲೆ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಕಾರುಗಳಿಗೆ 20,000 ರೂಪಾಯಿಯಿಂದ 40,000 ರೂಪಾಯಿ ವರೆಗೆ ಡಿಸ್ಕೌಂಟ್ ನೀಡಲಾಗಿದೆ.  ಟಾಟಾ ಮೋಟಾರ್ಸ್ ಕಾರು ಖರೀದಿಸು ಇದು ಸಕಾಲವಾಗಿದೆ. ಈ ಆಫರ್ ಜೊತೆಗೆ ಇತರ ಕೆಲ ಸೌಲಭ್ಯಗಳು ಸಿಗಲಿದೆ.

ಟಾಟಾ ಟಿಯಾಗೋ
ಟಾಟಾ ಟಿಯಾಗೋ ಕಾರಿಗೆ ಒಟ್ಟು 23,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ.  XZ ಟ್ರಿಮ್ ಕಾರಿಗೆ 10,000 ರೂಪಾಯಿ ನಗದು ಡಿಸ್ಕೌಂಟ್ ನೀಡಲಾಗಿದೆ. ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ ನೀಡಲಾಗಿದೆ. ಇನ್ನು ಕಾರ್ಪೋರೇಟ್ ಬೋನಸ್ 3,000 ರೂಪಾಯಿ ನೀಡಲಾಗಿದೆ. ಇನ್ನು XE ಹಾಗೂ XT ವೇರಿಯೆಂಟ್ ಕಾರಿಗೆ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಬೋನಸ್ ಘೋಷಿಸಲಾಗಿದೆ.

 

ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!

ಟಾಟಾ ಟಿಗೋರ್
ಟಾಟಾ ಟಿಗೋರ್ ಸೆಡಾನ್ ಕಾರಿಗೆ ಒಟ್ಟು 23,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.  XZ ಟ್ರಿಮ್ ಟಿಗೋರ್ ಕಾರಿಗೆ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 3,000ರೂಪಾಯಿ ಕಾರ್ಪೋರೇಟ್ ಬೋನಸ್ ಒಳಗೊಂಡಿದೆ. ಟಾಟಾ ಟಿಗೋರ್ XE ಹಾಗೂ XM ವೇರಿಯೆಂಟ್ ಕಾರಿಗೆ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಬೋನಸ್ ಘೋಷಿಸಲಾಗಿದೆ.

ಟಾಟಾ ನೆಕ್ಸಾನ್
ಟಾಟಾ ನೆಕ್ಸಾನ್ ಕಾರಿಗೆ ಓಟ್ಟು 20,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ನೆಕ್ಸಾನ್ ಡೀಸೆಲ್ ವೇರಿಯೆಂಟ್ ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಘೋಷಿಸಲಾಗಿದೆ. ಕಾರ್ಪೋರೇಟ್ ಬೋನಸ್ 5,000 ರೂಪಾಯಿ. ಇನ್ನು ಪೆಟ್ರೋಲ್ ವೇರಿಯೆಂಟ್ ಕಾರಿಗೆ 3,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ.

ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್ ಕಾರಿಗೆ ಒಟ್ಟು 40,000 ರೂಪಾಯಿ ಆಫರ್ ಘೋಷಿಸಲಾಗಿದೆ. ಟಾಟಾ ಹ್ಯಾರಿಯರ್ ಕಾರಿನ ಬೆಲೆ 14.69 ಲಕ್ಷ ರೂಪಾಯಿಯಿಂದ 22.04 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

 

ಹಬ್ಬದ ಋತುವಿಗೆ ಟಾಟಾದಿಂದ ಭರ್ಜರಿ ಕೊಡುಗೆ, JET ಎಡಿಶನ್ ಕಾರು ಬಿಡುಗಡೆ!

ಟಾಟಾ ಸಫಾರಿ
ಟಾಟಾ ಸಫಾರಿ ಕಾರಿಗೂ ಒಟ್ಟು 40,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಸಫಾರಿ ಕಾರಿನ ಬೆಲೆ 15.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ 23.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

Follow Us:
Download App:
  • android
  • ios