Asianet Suvarna News Asianet Suvarna News

ಸ್ಮಗ್ಲರ್‌ ಪ್ಯಾಂಟ್‌ನೊಳಗಿತ್ತು 60 ಹಾವು, ಹಲ್ಲಿ ಮತ್ತು ಸರಿಸೃಪಗಳು!

Snake smuggling racket: ಅಮೆರಿಕಾದಲ್ಲಿ ಹಾವು, ಮೊಸಳೆ, ಆಮೆ ಮತ್ತಿತರ ಸರಸೃಪಗಳನ್ನು ಸ್ಮಗಲ್‌ ಮಾಡಲು ಯತ್ನಿಸಿದ ವ್ಯಕ್ತಿಗೆ ದಶಕಗಳ ಕಾಲ ಶಿಕ್ಷೆಯಾಗಿದೆ. ಆತ ತನ್ನ ಪ್ಯಾಂಟ್‌ ಒಳಗೆ ಅರವತ್ತಕ್ಕೂ ಹೆಚ್ಚು ಪ್ರಾಣಿಗಳನ್ನು ಸಾಗಿಸುತ್ತಿದ್ದನಂತೆ. 

man tries to smuggle 60 snakes, reptiles in his pant gets decade long jail
Author
First Published Aug 25, 2022, 12:00 PM IST

ಲಾಸ್‌ ಏಂಜಲೀಸ್‌: ಇದು ನಂಬಲು ಅಸಾಧ್ಯವಾಗುವಂತಹ ಸುದ್ದಿ. ಕೋಟ್ಯಂತರ ರೂ ಮೌಲ್ಯದ ಹಾವು ಮತ್ತು ಸರಿಸೃಪಗಳನ್ನು ಸ್ಮಗಲ್‌ ಮಾಡಲು ಪ್ಯಾಂಟಿನೊಳಗೇ ಅವುಗಳನ್ನು ಇಟ್ಟುಕೊಂಡು ಅಮೆರಿಕಾದೊಳಕ್ಕೆ ಬರಲು ವ್ಯಕ್ತಿಯೊಬ್ಬ ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ. 60 ಬಗೆಯ ಹಾವು, ಹಲ್ಲಿ ಮತ್ತು ಸರಿಸೃಪಗಳನ್ನು ತನ್ನ ಪ್ಯಾಂಟಿನಲ್ಲಿ ಮುಚ್ಚಿಟ್ಟುಕೊಂಡು ದಕ್ಷಿಣ ಕ್ಯಾಲಿಫೋರ್ನಿಯಾದಿಂದ ಲಾಸ್‌ ಏಂಜಲೀಸ್‌ಗೆ ತರಲು ಯತ್ನಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ ಇವುಗಳ ಮೌಲ್ಯ ಬರೋಬ್ಬರಿ 6 ಕೋಟಿಗಳು ಅಂದರೆ 7,50,000 ಡಾಲರ್ಸ್‌. ಇದೇ ಕಾರಣಕ್ಕಾಗಿ ಸ್ಮಗಲ್‌ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಪ್ರಕರಣದಲ್ಲಿ ಇಪ್ಪು ವರ್ಷಗಳಿಗೂ ಹೆಚ್ಚು ವರ್ಷಗಳ ಕಾಲ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.

ಆರೋಪಿಯನ್ನು ಜೋಸ್‌ ಮಾನ್ಯುಯೆಲ್‌ ಪೆರೆಜ್‌ ಎಂದು ಗುರುತಿಸಲಾಗಿದೆ. ಆರು ವರ್ಷಗಳಿಂದ ಒಟ್ಟೂ 1,700 ಪ್ರಾಣಿಗಳನ್ನು ಮೆಕ್ಸಿಕೊ ಮತ್ತು ಹಾಂಕಾಂಗ್‌ನಿಂದ ಅಮೆರಿಕಾಗೆ ತರಲು ಪ್ಲಾನ್‌ ಸಿದ್ಧಪಡಿಸಿದ್ದನಂತೆ ಪೆರೆಜ್‌. ಆದರೆ ಅದೃಷ್ಟ ಫಲಿಸದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹಲವು ಬಾರಿ ಇದೇ ರೀತಿ ಬಾರ್ಡರ್‌ ಪೊಲೀಸರಿಗೆ ಹಣ ನೀಡಿ ಕಂಟೈನರ್‌ಗಳನ್ನು ಸಾಗಿಸಿದ್ದೇನೆ ಮತ್ತು ಪ್ಯಾಂಟಿನೊಳಗೆ ಇಟ್ಟುಕೊಂಡೂ ದಾಟಿದ್ದೇನೆ ಎಂದು ಪೆರೆಜ್‌ ಜಸ್ಟಿಸ್‌ ಇಲಾಖೆಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. 

ಯುಕಾಟಾನ್‌ ಬಾಕ್ಸ್‌ ಆಮೆಗಳು, ಮೆಕ್ಸಿಕನ್‌ ಬಾಕ್ಸ್‌ ಆಮೆಗಳು, ಮರಿ ಮೊಸಳೆಗಳು ಮತ್ತು ಮೆಕ್ಸಿಕನ್‌ ಲಿಜರ್ಡ್‌ಗಳನ್ನು ಅಮೆರಿಕಾದ ತುಂಬೆಲ್ಲಾ ಈತ ಮಾರುತ್ತಿದ್ದನಂತೆ. ಆರೋಪಿ ಪೆರೆಜ್‌ ಬಳಿ ಸಿಕ್ಕಿರುವ ದಾಖಲೆಗಳ ಪ್ರಕಾರ ಸುಮಾರು ಆರು ಕೋಟಿಗಳಿಗೆ ಪ್ರಾಣಿಗಳನ್ನು ಪೆರೆಜ್‌ ಮಾರಿದ್ದಾನೆ. ಕಳೆದ ಮಾರ್ಚ್ರ್ ತಿಂಗಳಲ್ಲಿ ಅರವತ್ತು ಹಾವುಗಳನ್ನು ಪ್ಯಾಂಟಿನೊಳಗೆ ಸಾಗಿಸಲು ಯತ್ನಿಸುತ್ತಿದ್ದಾಗ ಈತನ ಕೃತ್ಯ ಬೆಳಕಿಗೆ ಬಂದಿದೆ. ನಂತರ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ನಂತರ ನ್ಯಾಯಾಲಯ ಒಂದು ದಶಕದ ಜೈಲು ಶಿಕ್ಷೆ ನೀಡಿ ಆದೇಶಿಸಿದೆ. ಬಾರ್ಡರ್‌ ಸಿಬ್ಬಂದಿಗೆ ಅನುಮಾನ ಬಂದು ಕೇಳಿದಾಗ ತಾನು ಸಾಕಿದ ಪ್ರಾಣಿಯನ್ನು ಸಾಗಿಸುತ್ತಿರುವುದಾಗಿ ಹೇಳಿದ್ದ. ಆದರೆ ಬಟ್ಟೆ ಬಿಚ್ಚಿ ನೋಡಿದಾಗ ಪೊಲೀಸರು ಶಾಕ್‌ ಆಗಿದ್ದರು. ಬರೋಬ್ಬರಿ ಅರವತ್ತು ವಿವಿಧ ಪ್ರಾಣಿಗಳು ಆತನ ಬಟ್ಟೆಯಲ್ಲಿ ಅಡಗಿಸಿಡಲಾಗಿತ್ತು. 

ಇದನ್ನೂ ಓದಿ: Bengaluru; ಖಾಸಗಿ ಟ್ರಾನ್ಸ್‌ಪೋರ್ಟ್‌ನಿಂದ ರಕ್ತಚಂದನ ಸ್ಮಗ್ಲಿಂಗ್‌

ತುಂಬಾ ಅಪರೂಪದ ಪ್ರಾಣಿಗಳಾದ ಅರ್ಬೊರಿಯಲ್‌ ಮೊಸಳೆ ಮರಿಗಳು, ಇಸ್ತಿಮಾನ್‌ ಕುಬ್ಜ ಹಾವು (ತನ್ನ ಬಣ್ಣವನ್ನು ಬದಲಿಸಬಲ್ಲದು, ಕಣ್ಣಿನಿಂದ ರಕ್ತ ಚಿಮ್ಮಿಸಬಲ್ಲದು) ಗಳನ್ನು ಆತ ತನ್ನ ಬಳಿ ಹೊಂದಿದ್ದ. ಕಾಳು ಮಾರುಕಟ್ಟೆಯಲ್ಲಿ ಈ ಪ್ರಾಣಿಗಳಿಗೆ ಭಾರೀ ಬೇಡಿಕೆಯಿದೆ. ವಾಸ್ತು ಮತ್ತು ಗೌರವಕ್ಕಾಗಿ ಜನರು ಹೆಚ್ಚು ದುಡ್ಡು ಕೊಟ್ಟು ಈ ಪ್ರಾಣಿಗಳನ್ನು ಖರೀದಿಸುತ್ತಾರೆ. ಈ ವೇಳೆಗಾಗಲೇ ಮೂರು ಸರಿಸೃಪಗಳು ಉಸಿರುಗಟ್ಟು ಸಾವನ್ನಪ್ಪಿದ್ದವು ಎಂದೂ ಪೊಲೀಸರು ತಿಳಿಸಿದ್ದಾರೆ. ಮಾಡಿದ ಎಲ್ಲಾ ಗತಪ್ಪುಗಳನ್ನೂ ಪೆರೆಜ್‌ ಒಪ್ಪಿಕೊಂಡಿರುವ ಪರಿಣಾಮ ಆರೋಪಿಗೆ ಎರಡು ದಶಕಕ್ಕೂ ಹೆಚ್ಚು ಕಾಲ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಜತೆಗೆ ಆತನ ಬಳಿಯಿದ್ದ ಹಾವುಗಳನ್ನು ಸುರಕ್ಷಿತ ಜಾಗಕ್ಕೆ ಕಳಿಸಲಾಗಿದೆ. 

ಇದನ್ನೂ ಓದಿ: ಕೇರಳ ಚಿನ್ನ ಸ್ಮಗ್ಲಿಂಗ್‌ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌, ಸ್ವಪ್ನಾ ಸುರೇಶ್‌ ಶಾಕಿಂಗ್ ಆರೋಪ: ಸಿಎಂ, ಪತ್ನಿ, ಪುತ್ರಿಗೆ ಕುತ್ತು!

ಜನರು ಎಷ್ಟೇ ನಂಬಿಕೆಗಳಿಂದಾಗಿ ಈ ರೀತಿಯ ಪ್ರಾಣಿಗಳನ್ನು ಸಾಕಲು ಇಚ್ಚೆಪಡುತ್ತಾರೆ. ಆರೋಗ್ಯ, ಆಯುಷ್ಯ, ಐಶ್ವರ್ಯ ವೃದ್ಧಿ, ಮೋಜಿಗಾಗಿ ಹೀಗೇ ನಾನಾ ಕಾರಣಗಳಿಗೆ ಇವುಗಳಿಗೆ ದೊಡ್ಡ ಬೇಡಿಕೆಯಿದೆ. ಆದಷ್ಟು ಬೇಗ ಹಣ ಗಳಿಸಲು ಮುಂದಾಗುವ ಪೆರೆಜ್‌ನಂತವರು ಕಡೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಪ್ರಾಣಿಗಳನ್ನು ಮಾರುವುದು ಮತ್ತು ಸಾಕುವುದು ಅಮೆರಿಕಾದಲ್ಲಿ ನಿಷೇಧಿತವಾಗಿದೆ. ಇದೇ ಕಾರಣಕ್ಕಾಗಿ ವಾಮ ಮಾರ್ಗದಲ್ಲಿ ಇವುಗಳನ್ನು ದೇಶದೊಳಗೆ ಆಮದು ಮಾಡಿ ಮಾರಲಾಗುತ್ತದೆ.

Follow Us:
Download App:
  • android
  • ios