ಓನರ್ ಜೊತೆಗೆ ಕೂತು ತಾನೂ ನಗುತ್ತೆ ಈ ಕ್ಯೂಟ್ ಬೆಕ್ಕು ಹಹ್ಹ ಅನ್ನೋ ಸ್ಟೈಲ್‌ಗೆ ನೆಟ್ಟಿಗರು ಫಿದಾ, ವಿಡಿಯೋ ವೈರಲ್
ಅಮನ್ ತನ್ನ ಮುದ್ದಿನ ಬೆಕ್ಕಿಗೆ ಕಾಪಿ ಮಾಡೋದಕ್ಕೆ ಮತ್ತು ಮನುಷ್ಯನಂತೆ ನಗಲು ಕಲಿಸಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಇದನ್ನು ಸಾಕ್ಷಿ ಸಮೇತ ಪೋಸ್ಟ್ ಮಾಡಿದ್ದಾನೆ ಈ ವ್ಯಕ್ತಿ.
ಆನ್‌ಲೈನ್‌ನಲ್ಲಿ @maseplace ಎಂದು ಕರೆಯಲ್ಪಡುವ ಮೇಸನ್ ಗ್ಲಾಸೊ ಅವರ ವೀಡಿಯೊ ವೈರಲ್ ಆಗಿದೆ. ಇದರಲ್ಲಿ ಬೆಕ್ಕು ಅದರ ಮಾಲೀಕನನ್ನು ನಕಲು ಮಾಡುವುದನ್ನು ನೋಡಬಹುದು.
ನಾಗರಹಾವಿನ ಮರಿಯಿಂದ ತನ್ನ ಮರಿಯನ್ನು ರಕ್ಷಣೆ ಮಾಡಿದ ಬೆಕ್ಕು!..
ಗ್ಲಾಸೊ ವೀಕ್ಷಕರ ಜೊತೆ ಮಾತಾಡೋ ಮೂಲಕ ಕ್ಲಿಪ್ ಪ್ರಾರಂಭವಾಗುತ್ತದೆ: "ಗೈಸ್, ನಾನು ನನ್ನ ಬೆಕ್ಕಿಗೆ ನಗುವುದನ್ನು ಕಲಿಸಿದೆ. ಸರಿ ರೆಡಿ ಅಲ್ವಾ.. ಎಂದು ಕೇಳಿ ಹಹ್ಹ ಅನ್ನು ಅಂದಾಗ ಹಹ್ಹ ಅಂದು ನಗುತ್ತದೆ ಬೆಕ್ಕು. ನಂತರ ಅವನು "ಹಾ ಹಾ ಹಾ" ಎಂದು ಹೇಳುತ್ತಾನೆ ಮತ್ತು ಅಂತಿಮವಾಗಿ "ಹಾಹಾಹಾ" ಯನ್ನು ಪ್ರಯತ್ನಿಸುವ ಮೊದಲು ಬೆಕ್ಕು ಮತ್ತೆ ಅದನ್ನು ಕಾಪಿ ಮಾಡುತ್ತದೆ.
ಈ ವಿಡಿಯೋವನ್ನು ಮೇ 28 ರಂದು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ನಂತರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. 24.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 7.5 ಮಿಲಿಯನ್ ಲೈಕ್‌ಗಳನ್ನು ಪಡೆದಿದೆ. ಈ ವಿಡಿಯೋವನ್ನು ಜೂ.2ರಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು 37,225 ಲೈಕ್ಸ್ ಬಂದಿದೆ.
