ತನ್ನ ಪುಟ್ಟ ಮರಿಯನ್ನು ಬೆಕ್ಕೊಂದು ನಾಗರಹಾವಿನಿಂದ ರಕ್ಷಣೆ ಮಾಡಿದೆ.  ಬಾಯಿಯಿಂದ ಹಾವನ್ನು ಕಚ್ಚಿಕೊಂಡು ಹೋಗಿ ದೂರದಲ್ಲಿ ಬಿಟ್ಟು ಬಂದ ಬೆಕ್ಕು ಮೈಸೂರಿನ ಎನ್‌.ಆರ್‌. ಮೊಹಲ್ಲಾದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಘಟನೆ

ಮೈಸೂರು (ಜೂ.03):  ಬೆಕ್ಕೊಂದು ತನ್ನ ಮರಿಯನ್ನು ರಕ್ಷಣೆ ಮಾಡಿಕೊಳ್ಳಲು ತನ್ನ ಪ್ರಾಣವನ್ನು ಲೆಕ್ಕಿಸದೇ ವಿಷಕಾರಿಯಾದ ನಾಗರಹಾವಿನ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ತನ್ನ ಮರಿಯನ್ನು ರಕ್ಷಣೆ ಮಾಡಿದೆ.

ಈ ಘಟನೆ ನಗರದ ಎನ್‌.ಆರ್‌. ಮೊಹಲ್ಲಾದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. 

ಮುದ್ದಿನ ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರಿಟ್ಟ ಖ್ಯಾತ ವೈದ್ಯ...! ..

ತನ್ನ ಮರಿಯತ್ತ ಹೋಗುತ್ತಿದ್ದ ನಾಗರಹಾವನ್ನು ತಾಯಿ ಬೆಕ್ಕು ಗಮನಿಸಿ ತನ್ನ ಬಾಯಿಯಿಂದ ಕಚ್ಚಿಕೊಂಡು ಹೋಗಿ ದೂರದಲ್ಲಿ ಬಿಟ್ಟಿತ್ತು. ಬಳಿಕ ಸ್ಥಳಕ್ಕೆ ಹಾವನ್ನು ಹಿಡಿಯಲು ತೆರಳಿದ್ದ ಸ್ನೇಕ್‌ ಶಿವು ಹಾವಿನ ಮರಿಯನ್ನು ರಕ್ಷಣೆ ಮಾಡಿದರು.

ವಾಷಿಂಗ್‌ ಮಷಿನ್ ಒಳಗೆ ಸಿಕ್ಕಾಕ್ಕೊಂಡ ಗರ್ಲ್‌ಫ್ರೆಂಡ್..! .

ಪ್ರಾಣಿಗಳು ಈ ರೀತಿ ಮಾತೃ ವಾತ್ಸಲ್ಯ ಮೆರೆಯುವ ಅನೇಕ ರೀತಿಯ ವಿಚಾರಗಳು ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಬೆಕ್ಕೊಂದು ತನ್ನ ಪ್ರಾಣ ಲೆಕ್ಕಿಸದೆ ಮರಿಯನ್ನು ರಕ್ಷಿಸಿದೆ.