Asianet Suvarna News Asianet Suvarna News

ಸುಯ್ ಅಂತ ಜಾರಿ ಬಂದು ಮೊಸಳೆ ಬಾಯಿಗೆ ತಲೆ ಕೊಟ್ಟೇ ಬಿಟ್ಟ..!

ವ್ಯಕ್ತಿಯೊಬ್ಬ ಏನೋ ಮಾಡಲು ಹೋಗಿ ಬಾಯ್ತೆರೆದು ಮಲಗಿದ್ದ ಮೊಸಳೆ ಬಾಯೊಳಗೆ ತಲೆ ಇಟ್ಟಿದದು ಕೂಡಲೇ ಮೊಸಳೆ ತಲೆಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದಿದೆ. 

ಕೆಲವರಿರ್ತಾರೆ ಏನೋ ಮಾಡಲು ಹೋಗಿ ತಮ್ಮ ಜೀವವನ್ನೇ ಅಪಾಯಕ್ಕೊಡುತ್ತಾರೆ. ಕೆಲ ದಿನಗಳ ಹಿಂದೆ ಮೃಗಾಲಯವೊಂದರಲ್ಲಿ ಯುವಕನೋರ್ವ ಸುಮ್ಮನಿದ್ದ ಸಿಂಹವನ್ನು ಕೆರಳಿಸಲು ಹೋಗಿ ಕೈ ಬೆರಳನ್ನೇ ಕಳೆದುಕೊಂಡಿದ್ದ ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ನೋಡು ನೋಡುತ್ತಲೇ ಮೊಸಳೆ ಬಾಯಿಗೆ ತನ್ನ ತಲೆಯನ್ನು ನೀಡಿದ್ದು, ಈ ಭಯಾನಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಮೊಸಳೆ ಆತನನ್ನು ಕಚ್ಚಿ ಹಿಡಿದಿದೆ. ಬಾಯ್ತೆರೆದು ಮಲಗಿದ್ದ ಮೊಸಳೆಯ ಬಾಯಿಗೆ ತಲೆಕೊಟ್ಟು ಈತ ಅಪಾಯವನ್ನು ತಾನೇ ಆಹ್ವಾನಿಸಿಕೊಂಡಿದ್ದಾನೆ. 
 

Video Top Stories