ಆ್ಯಪಲ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಆ್ಯಪಲ್ ಫೋನ್ | ಇವನದ್ದೆಂಥಾ ಭಾಗ್ಯ ನೋಡಿ

ಲಂಡನ್(ಎ.16): ನಾವೆಲ್ಲರೂ ಆನ್‌ಲೈನ್ ಶಾಪಿಂಗ್‌ ಮಾಡುತ್ತೇವೆ. ಅದರಲ್ಲೂ ಲಾಕ್‌ಡೌನ್ ಆದಮೇಲಂತೂ ಅನಿವಾರ್ಯವಾಗಿ ಜನ ಆನ್‌ಲೈನ್ ಶಾಪಿಂಗ್ ಕಲಿತುಕೊಂಡಿದ್ದಾರೆ. ನಾವು ಆರ್ಡರ್ ಮಾಡಿದ್ದಕ್ಕಿಂತ ಭಿನ್ನ ವಸ್ತುಗಳನ್ನು ಸ್ವೀಕರಿಸುವ ಸಂದರ್ಭಗಳೂ ಬರುತ್ತವೆ. ಕೆಲವೊಮ್ಮೆ ಕ್ಯಾನ್ಸಲ್ ಆಗುತ್ತದೆ. ಹೀಗೇ ಆನ್‌ಲೈನ್ ಆರ್ಡರ್ ಅಂದಾಗ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಇವೆ.

ನಿಕ್ ಜೇಮ್ಸ್ ಎಂಬ ಯುಕೆ ಮೂಲದ ಈ ವ್ಯಾಪಾರಿಗೆ ಇದೇ ರೀತಿಯ ಅನುಭವ ಆಗಿದೆ. ಅವರ ಆರ್ಡರ್ ಸ್ಟೋರಿಯಲ್ಲಿ ಇದು ಆಶ್ಚರ್ಯಕರ ತಿರುವು ನೀಡಿದ್ದು ಈಗ ಜನರ ಗಮನವನ್ನು ಸೆಳೆದಿದೆ. ಜೇಮ್ಸ್ ಅವರು ಆರ್ಡರ್ ಮಾಡಿದ್ದು ತಿನ್ನುವ ಆ್ಯಪಲ್. ಸಿಕ್ಕಿದ್ದು ಆ್ಯಪಲ್ ಫೋನ್. ಇವರೆಂಥಾ ಅದೃಷ್ಟಶಾಲಿ ಅಲ್ವಾ ?

3 ಸಾರಿ ಡಿವೋರ್ಸ್ ಮಾಡಿ, ಅದೇ ಹೆಣ್ಣನ್ನು 4 ಸಾರಿ ವರಿಸಿದ ಭೂಪ! ರೀಸನ್ ಇದು

ಫೋನ್‌ ಫೋಟೋಗಳ ಜೊತೆಗೆ ಇಡೀ ಘಟನೆಯನ್ನು ವಿವರಿಸಿದ್ದಾರೆ ಜೇಮ್ಸ್. ಇದು ತಪ್ಪಿ ಬಂದಿದ್ದಲ್ಲ, ಹಾಗಾಗಿ ಕಳ್ಕೊಳ್ಳೋ ಭಯ ಇಲ್ಲ. ಸೂಪರ್ ಮಾರ್ಕೆಟ್‌ನ ಟೆಸ್ಕೋ ಅಭಿಯಾನದ ಪರವಾಗಿ ಮೊಬೈಲ್ ನೀಡಲಾಗಿದೆ.

Scroll to load tweet…

ಟೆಸ್ಕೊ ಮತ್ತು ಟೆಸ್ಕೊಮೊಬೈಲ್‌ಗೆ ಧನ್ಯವಾದಗಳು. ಬುಧವಾರ ಸಂಜೆ ನಾವು ನಮ್ಮ ಕ್ಲಿಕ್ & ಆರ್ಡರ್ ಸಂಗ್ರಹಿಸಲು ಹೋದೆವು. ಅಲ್ಲಿ ನಮಗೆ ಆಶ್ಚರ್ಯ ಕಾದಿತ್ತು - ಆಪಲ್ ಐಫೋನ್ ಎಸ್ಇ. ನಾವು ಸೇಬು ಹಣ್ಣುಗಳನ್ನು ಆರ್ಡರ್ ಮಾಡಿದ್ದೆವು. ಆದರೆ ಆಪಲ್ ಐಫೋನ್ ಸಿಕ್ಕಿದೆ! ನನ್ನ ಮಗನಿಗೆ ಖುಷಿಯಾಗಿದೆ ಎಂದು ಅವರು ಬರೆದಿದ್ದಾರೆ.

ಸೂಯೆಜ್‌ನಲ್ಲಿ ಸಿಕ್ಕಿಬಿದ್ದ ಹಡಗು ಜಪ್ತಿ: 6750 ಕೋಟಿ ದಂಡ!

ಈ ಸುದ್ದಿ ಶೇರ್ ಮಾಡಿದಾಗಿನಿಂದ ಅವರ ಪೋಸ್ಟ್‌ಗೆ ಜನರಿಂದ ಹಲವಾರು ಕಾಮೆಂಟ್‌ ಬರುತ್ತಿದೆ. ಅವರಲ್ಲಿ ಕೆಲವರು ಸೂಪರ್ಮಾರ್ಕೆಟ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಉತ್ತರವನ್ನು ಸಹ ಪಡೆದಿದ್ದಾರೆ.

Scroll to load tweet…