ತೈವಾನ್ (ಏ.15) :  ಕೆಲಸದ ಒತ್ತಡಗಳ ಮಧ್ಯೆ ರಜೆ ಪಡೆಯಲು ಉದ್ಯೋಗಿಗಳು ನಾನಾ ಕಸರತ್ತುಗಳನ್ನು ಮಾಡಬೇಕಾಗುತ್ತದೆ. ಉದ್ಯೋಗಿಗಳು ತಮ್ಮ ಹಿರಿಯ ಅಧಿಕಾರಿಗಳಿಂದ ರಜೆ ಕೇಳಿ ಪಡೆದು ಕೊಳ್ಳುವುದು ಸಾಹಸದ ಕೆಲಸವೇ ಸರಿ. ಇಲ್ಲೊಬ್ಬ ಭೂಪ ಹೆಚ್ಚು ದಿನಗಳ ಕಾಲ ರಜೆ ಪಡೆಯಬೇಕೆಂದು, ನಾಲ್ಕು ಬಾರಿ ಮದುವೆಯಾಗಿದ್ದಾನೆ!

ಅಯ್ಯೋ ಕಥೆಯೇ...? ಅಂತ ಯೋಚಿಸುತ್ತಿದ್ದೀರಾ? ಹೌದು, ಇದು ಸತ್ಯ. ತೈವಾನ್‌ನಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದ್ದು, 37 ದಿನಗಳಲ್ಲಿ ಒಬ್ಬಳೇ ಮಹಿಳೆಗೆ ಮೂರು ಬಾರಿ ವಿಚ್ಛೇದನ ನೀಡಿ, ವ್ಯಕ್ತಿಯೊಬ್ಬ ನಾಲ್ಕು ಬಾರಿ ಮದುವೆಯಾಗಿದ್ದಾನೆ. 

ವೇಶ್ಯೆಯಾದ ಗಂಡ, ಡಿವೋರ್ಸ್ ಕೇಳಿದ್ಲು ಪತ್ನಿ

ತೈವಾನ್‌ನ ತೇಪಿ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಾಡುತ್ತಿರುವ ಈತ ಮೊದಲನೇ ಸಲ ಮದುವೆಗಾಗಿ ರಜೆ ಕೇಳಿದಾಗ ಬ್ಯಾಂಕ್ 8 ದಿನಗಳ ರಜೆ ನೀಡಿತ್ತು. ಕಳೆದ ವರ್ಷ ಏಪ್ರಿಲ 6 ರಂದು ಈತ ಮದುವೆಯಾಗಿದ್ದ. 8 ದಿನಗಳ ರಜೆ ಮುಗಿಯುತ್ತಿದ್ದಂತೆ, ತನ್ನ ಪತ್ನಿಗೆ ಡಿವೋರ್ಸ್ ನೀಡಿ ಮರು ಮದುವೆಯಾಗಿ ಮತ್ತೆ 8 ದಿನಗಳ ರಜೆ ಪಡೆದುಕೊಂಡಿದ್ದಾನೆ. ಹೀಗೆ ಅದೇ ಪತ್ನಿಗೆ ಮೂರು ಬಾರಿ ವಿಚ್ಛೇದನ ನೀಡಿ, ನಾಲ್ಕು ಬಾರಿ ಮದುವೆಯಾಗಿದ್ದಾನೆ.  ಹಾಗಾಗಿ ನಾಲ್ಕು ಮದುವೆಗಾಗಿ ಒಟ್ಟು 32 ದಿನ ರಜೆ ಪಡೆದುಕೊಂಡಿದ್ದಾನೆ. ಆದರೆ ಕೆಲವು ದಿನಗಳ ನಂತರ ಬ್ಯಾಂಕ್ ಇವನ ಮೋಸದಾಟವನ್ನು ಪತ್ತೆ ಹಚ್ಚಿ, ಹೆಚ್ಚಿಗೆ ರಜೆ ಕೊಡಲು ನಿರಾಕರಿಸಿದೆ.

ತೈವಾನಿನ ಕಾನೂನಿನಂತೆ ಉದ್ಯೋಗಿಗಳು 8 ದಿನಗಳ ಮದುವೆ ರಜೆಯನ್ನು ಪಡೆಯಬಹುದು. ಹಾಗಾಗಿ 4 ಬಾರಿ ಮದುವೆಯಾದ ಈ ವ್ಯಕ್ತಿಗೆ 32 ದಿನಗಳ ರಜೆ ಸಿಗಬೇಕಾಗಿರುವುದು ಕಾನೂನು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ವ್ಯಕ್ತಿ, ಇಂಥದ್ದೊಂದು ಮೋಸದಾಟಕ್ಕೆ ಮುಂದಾಗಿದ್ದ. ಬ್ಯಾಂಕ್ ರಜೆ ನೀಡಲು ನಿರಾಕರಿಸಿದ ಬ್ಯಾಂಕ್ ವಿರುದ್ದವೇ ಕೇಸ್ ಕೂಡ ದಾಖಲಿಸಿದ್ದಾನೆ. ನನಗೆ ರಜೆ ನಿರಾಕರಿಸುವುದರ ಮೂಲಕ ಬ್ಯಾಂಕ್ ತೈವಾನ್ ಕಾರ್ಮಿಕ ನಿಯಮದನ್ವಯ ಆರ್ಟಿಕಲ್ 2ರ ನಿಮಯವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾನೆ.

ನಟಿ ನಿಧಿ ಸುಬ್ಬಯ್ಯಗೆ ಡಿವೋರ್ಸ್ ಆಗಿದ್ಯಾ?

ತೈವಾನ್‌ನ ಜಿಲ್ಲಾ ಕಾರ್ಮಿಕ ಇಲಾಖೆ ಇದರ ವಿಚಾರಣೆ ನಡೆಸಿ, ಬ್ಯಾಂಕ್ಲ ವಿರುದ್ಧ ಕಾರ್ಮಿಕ ಕಾನೂನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿದೆ. ಜೊತೆಗೆ ಬ್ಯಾಂಕ್‌ಗೆ 20,000 ತೈವಾನ್ ಡಾಲರ್ ಡಂಡವನ್ನು ವಿಧಿಸಿದೆ. 'ಈ ವ್ಯಕ್ತಿ ಮೋಸದಿಂದ ಪಡೆದುಕೊಂಡ ರಜೆಗಳಿಗೆ ಕಾರ್ಮಿಕರ ನಿಯಮಗಳು ಅನ್ವಯವಾಗಿವುದಿಲ್ಲ, ಎಂದು ಬ್ಯಾಂಕ್ ಕೂಡ ಮೇಲ್ಮನವಿ ಸಲ್ಲಿಸಿತ್ತು. ಆದರೆ ಏಪ್ರಿಲ್ 10, 2020 ರಂದು ಪ್ರಕರಣದ ಮರು ವಿಚಾರಣೆ ಬಳಿಕ, ತನ್ನ ಹಳೆಯ ತೀರ್ಪನ್ನೇ ಕಾರ್ಮಿಕ ಇಲಾಖೆ ಎತ್ತಿ ಹಿಡಿದಿದೆ. 'ವ್ಯಕ್ತಿಯ ನಡೆ ಅನೈತಿಕವಾಗಿದ್ದರೂ, ಯಾವುದೇ ಕಾನೂನನ್ನು ಉಲ್ಲಂಘಿಸಿರಲಿಲ್ಲ. ಆದರೆ ಬ್ಯಾಂಕ್ ಮಾತ್ರ ಕಾರ್ಮಿಕ ನಿಯಮದ ಆರ್ಟಿಕಲ್ 2 ಅನ್ನು ಉಲ್ಲಂಘಿಸಿದೆ,ʼ ಎಂದು ಹೇಳಿದೆ. ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೈವಾನ್ ನ ಕಾನೂನಿನಲ್ಲಿ ಇಂತಹ ನ್ಯೂನ್ಯತೆಗಳಿವೆಯೇ ಎಂದು ಜನರು ಆಶ್ಚರ್ಯಪಡುತ್ತಿದ್ದಾರೆ.