Murder: 50 ವರ್ಷವಾದ್ರೂ ಶೀಲ ಶಂಕೆ, ದಾರುಣವಾಗಿತ್ತು ಹೆಂಡತಿಯನ್ನು ಕೊಂದವನ ಸಾವು
- ಹೆಂಡತಿ(Wife) ಶೀಲ ಶಂಕಿಸಿದವನ ದಾರುಣ ಅಂತ್ಯ
- ಹೆಂಡ್ತಿಯನ್ನು ಕೊಂದಾತ ಹೆಚ್ಚು ದಿನ ಉಳಿಯಲಿಲ್ಲ
- ಅನ್ಯರಾಜ್ಯದಲ್ಲಿ ಅನಾಥ ಶವವಾಗಿ ಬಿದ್ದಿದ್ದ ಪಾಪಿ ಗಂಡ(Husband)
ದಾಂಪತ್ಯದಲ್ಲಿ ಪರಸ್ಪರ ವಿಶ್ವಾಸ, ಭರವಸೆ ಮುಖ್ಯವಾಗಿರುತ್ತದೆ. ಇಬ್ಬರಲ್ಲಿ ಒಬ್ಬರು ವಿಶ್ವಾಸ ಕಳೆದುಕೊಂಡರೂ ಅನಾಹುತವಾಗುತ್ತದೆ. ಇಲ್ಲೊಬ್ಬ ವ್ಯಕ್ತಿ 50 ವರ್ಷವಾದರೂ ಪತ್ನಿಯ ಶೀಲ ಶಂಕಿಸೋ ಚಾಳಿ ಬಿಟ್ಟಿಲ್ಲ. ಪತ್ನಿಯ ಶೀಲದ ಕುರಿತು ಯಾವಾಗಲೂ ಶಂಕಿತನಾಗಿದ್ದ ಪತಿ ಮಾಸ್ಟರ್ ಪ್ಲಾನ್ ಮಾಡಿ ಹೆಂಡತಿಯನ್ನೇನೋ ಸಾಯಿಸಿದ ಆದರೆ ಆತನ ಸಾವು ಅದಕ್ಕಿಂತಲೂ ಕ್ರೂರವಾಗಿತ್ತು. ಹೆಂಡತಿಯನ್ನು ಕೊಂದು ತಪ್ಪಿಸಿಕೊಂಡು ಹೋಗಿ ಅನ್ಯರಾಜ್ಯದಲ್ಲಿ ಅನಾಥ ಶವವಾಗಿ ಕಂಡು ಬಂದ ಈತನದ್ದು ದಾರುಣ ಅಂತ್ಯ.
50 ವರ್ಷವಾದ್ರೂ ಪತ್ನಿ ಶೀಲ ಶಂಕಿಸಿದವನ ಅಂತ್ಯ ದಾರುಣವಾಗಿತ್ತು. ಹೆಂಡತಿಯನ್ನು ಕೊಂದವನ ಸಾವು ಪಾಠ ಎಂಬಂತಾಗಿದೆ.
ವಯಸ್ಸು ಐವತ್ತಾದರು ಪತ್ನಿ ಶೀಲ ಶಂಕಿಸುತ್ತಿದ್ದ ಪಾಪಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಪತ್ನಿಯ ಹತ್ಯೆಗೆ ಆತ ಮಾಡಿಕೊಂಡಿದ್ದ ಪ್ಲಾನ್ ಚಿಕ್ಕದ್ದೇನು ಅಲ್ಲ, ನವೆಂಬರ್ 19 ರಂದು ನಡೆದ ಒಂದು ಕೊಲೆಯ ಸ್ಟೋರಿ ಬೆಚ್ಚಿಬೀಳಿಸುವಂತಿದೆ.
Cheating: ಪ್ರೀತಿಸಿ ಮದುವೆಯಾಗಿ 9 ವರ್ಷ ಸಂಸಾರ ಮಾಡಿ ಬೇರೊಬ್ಬಳ ಜೊತೆ ಎಂಗೇಜ್ಮೆಂಟ್
ಪತ್ನಿಯನ್ನು ಪೆಟ್ರೋಲ್ ಸುರಿದು ಕೊಂದ ಪಾಪಿ ಪತಿಯೂ ಕೆಲವೇ ದಿನದಲ್ಲಿ ಹೆಣವಾಗಿದ್ದ. ಬೆಂಗಳೂರು ನಗರದ ಆಡುಗೋಡಿಯ ರಾಜೇಂದ್ರನಗರದಲ್ಲಿ ಪತಿಯಿಂದ ಪತ್ನಿಯ ಕೊಲೆ ನಡೆದಿದೆ. ರಾಜೇಂದ್ರನಗರದಲ್ಲಿ ವಾಸವಿದ್ದ ನಿಸಾರ್(50) ಮತ್ತು ಆಯೇಶಾ(45) ದಂಪತಿ ಕುಟುಂಬದಲ್ಲಿ ಈ ಘಟನೆ ನಡೆದಿದೆ. ಹೆಂಡತಿ ಕೊಲೆ ಬಳಿಕ ಪೊಲೀಸರಿಗೆ ಶರಣಾಗಿದ್ರೂ ಪಾಪಿ ಗಂಡ ಬದುಕಿ ಉಳಿಯುತ್ತಿದ್ದ. ಆದರೆ ಪೊಲೀಸರ ಭಯಕ್ಕೆ ಆತನ ನಾಪತ್ತೆಯಾಗಲು ಹೋಗಿ ಹೊರರಾಜ್ಯದಲ್ಲಿ ಸಾವನ್ನಪ್ಪಿದ್ದಾನೆ.
ನ.19 ರಂದು ವ್ಯಕ್ತಿ ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದ. ಪತ್ನಿಗೆ ಬೆಂಕಿ ಹಚ್ಚಿದ್ದು ಅದೇ ಬೆಂಕಿಯಿಂದಾಗಿ ಮನೆಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಸಿಲಿಂಡರ ಬ್ಲಾಸ್ಟ್ ವೇಳೆ ನಿಸಾರ್ ಕೈ ಹಾಗೂ ಮೈ ಭಾಗಕ್ಕೆ ಗಾಯಗಳಾಗಿದ್ದವು. ಘಟನೆಯಲ್ಲಿ ಹೆಂಡತಿ ಸತ್ತಿದ್ದೇ ತಡ ಗಂಡ ನಿಸಾರ್ ಮನೆಯಿಂದ ಎಸ್ಕೇಪ್ ಆಗಿದ್ದ. ಘಟನೆ ಬಳಿಕ ನಿಸಾರ್ ಗಾಗಿ ಎಲ್ಲಾ ಕಡೆಗಳಲ್ಲೂ ಪೊಲೀಸರು ಹುಡುಕಾಟ ನಡೆಸಿದ್ದರು.
ಹುಬ್ಬಳ್ಳಿ: ಶೀಲ ಶಂಕಿಸಿ ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಬಸ್ ಹತ್ತಿ ಆಂಧ್ರಪ್ರದೇಶಕ್ಕೆ ಹೋಗಿ ಮೊಬೈಲ್ ಸ್ವಚ್ ಆಪ್ ಮಾಡಿಕೊಂಡಿದ್ದ ನಿಸಾರ್ ಬರೀ ಮೊಬೈಲ್ ಸ್ವಿಚ್ ಆನ್ ಮಾಡೋದು ಆಫ್ ಮಾಡೋದು ಮಾಡಿಕೊಂಡಿದ್ದ. ಲೊಕೇಶನ್ ಟ್ರೇಸ್ ಮಾಡಿದ ಖಾಕಿಗೆ ಆತ ಮದನಪಲ್ಲಿಯಲ್ಲಿ ಇರೋದು ಗೊತ್ತಾಗಿತ್ತು. ಮೈ ಕೈ ಗಾಯವಾಗಿದ್ರೂ ನಿಸಾರ್ ಆಸ್ಪತ್ರೆಗೆ ಮಾತ್ರ ಹೋಗಿರಲಿಲ್ಲ. ಗಾಯದ ನೋವಿನಲ್ಲಿಯೇ ಆಂಧ್ರಗೆ ಹೋಗಿ ತಲೆಮರಿಸಿಕೊಳ್ಳಲು ಪ್ರಯತ್ನಿಸಿದ್ದ.
ಶೀಲ ಶಂಕಿಸಿ ಪತ್ನಿ ಕೊಂದು ಪತಿ ಪರಾರಿ
ಕೊನೆಗೆ ಗಾಯದ ನೋವು ಹೆಚ್ಚಾದಾಗ ಮಗನಿಗೆ ಕಾಲ್ ಮಾಡಲು ಪ್ರಯತ್ನಿಸಿದ್ದಾನೆ. ಮೂರು ದಿನಗಳ ಹಿಂದೆ ಮಗನಿಗೆ ಕಾಲ್ ಮಾಡಿದಾಗ ಪೆನುಗೊಂಡ ಬಳಿ ಲೊಕೇಷನ್ ಟ್ರೇಸ್ ಆಗಿತ್ತು. ಲೊಕೇಷನ್ ಟ್ರೇಸ್ ಮಾಡಿದ್ದೇ ಸ್ಥಳಕ್ಕೆ ಹೋಗಿದ್ದ ಆಡುಗೋಡಿ ಪೊಲೀಸರು ಅಲ್ಲಿ ಹೋಗಿ ಹುಡುಕಾಡಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ನಿಸಾರ್ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ವೇಳೆ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದಾಗಿ ರಿಪೋರ್ಟ್ ಬಂದಿದೆ. ಸದ್ಯ ಯಾರನ್ನ ತನಿಖೆ ಮಾಡಬೇಕು ಅನ್ನೋ ಗೊಂದಲದಲ್ಲಿ ಆಡುಗೋಡಿ ಪೊಲೀಸರು ಗೊಂದಲದಲ್ಲಿದ್ದದಾರೆ.