Asianet Suvarna News Asianet Suvarna News

1955ರಲ್ಲಿ ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆ, ಮೇಲಿತ್ತು ಮಹತ್ವದ ಸಂದೇಶ!

ಹಳೇ ಮನೆ ನವೀಕರಣ ಕೆಲಸ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಗೊಡೆ ಹಿಂಭಾಗದಲ್ಲಿ ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಾಗಿದೆ. ಇದು 1955ರಲ್ಲಿ ಅಡಗಿಸಿಟ್ಟ ಬಿಯರ್. ಇಷ್ಟೇ ಅಲ್ಲ ಈ ಬಿಯರ್ ಮೇಲೆ ಸಂದೇಶವೊಂದನ್ನು ಬರೆಯಲಾಗಿತ್ತು. ಇದೀಗ  ಈ ಸಂದೇಶ ಬಯಲಾಗಿದೆ.
 

Man Found 1955 hidden American beer bottle with special message ckm
Author
First Published Oct 23, 2023, 5:55 PM IST

ಮೆರಿಲೆಂಡ್(ಅ.23) ಮನೆ ನವೀಕರಣ ವೇಳೆ ಗತಕಾಲದ ವಸ್ತು ಪತ್ತೆ, ಹಳೇ ವೈನ್ ಬಾಟಲ್ ಪತ್ತೆ ಸೇರಿದಂತೆ ಹಲವು ರೋಚಕ ಕತೆಗಳು ಈಗಾಲೇ ಕೇಳಿದ್ದೇವೆ.ಸಾಮಾನ್ಯವಾಗಿ ವೈನ್ ಬಾಟಲಿ, ವಿಸ್ಕಿ ಬಾಟಲಿಯನ್ನು ತೆಗದಿಡುತ್ತಾರೆ. ವರ್ಷ ಕಳೆದಂತೆ ಕಿಕ್ ಹೆಚ್ಚಾಗುತ್ತೆ ಅನ್ನೋ ಕಾರಣವೂ ಇದರ ಹಿಂದಿದೆ. ಹಲವು ಬಾರಿ ತೆಗೆದಿದ್ದ ಪೀಳಿಗೆ ಮರೆತು ಹೋಗಿ ಮುಂದಿನ ಪೀಳಿಗೆ ಪತ್ತೆ ಹಚ್ಚಿ ಸಂಭ್ರಮಿಸಿದ ಹಲವು ಘಟನೆಗಳು ನಡೆದಿದೆ. ಆದರೆ ಇಲ್ಲಿ ಬಿಯರ್ ಬಾಟಲ್.  ಇದೀಗ ಮನೆ ನವೀಕರಣ ವೇಳೆ 1955ರಲ್ಲಿ ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಾಗಿದೆ. ಅಡಗಿಸಿಟ್ಟ ಬಿಯರ್ ಬಾಟಲ್ ಪತ್ತೆಯಲ್ಲಿ ಹೆಚ್ಚಿನ ವಿಶೇಷಗಳಿಲ್ಲ. ಆದರೆ ಅಡಗಿಸಿಟ್ಟ ಕತೆ ರೋಚಕವಾಗಿದೆ. 

ಒಂದೇ ಒಂದು ಬಿಯರ್ ಬಾಟಲನ್ನು ಮನೆಯ ಗೋಡೆ ನಡುವೆ ಸಣ್ಮ ರಂದ್ರ ಮಾಡಿ ಸುರಕ್ಷಿತವಾಗಿ ಇಡಲಾಗಿದೆ. ನವೀಕರಣ ವೇಳೆ ಬಿಯರ್ ತುಂಬಿದ ಬಾಟಲ್ ಪತ್ತೆಯಾಗಿದೆ. ನಾಜೂಕಾಗಿ ತೆಗೆದು ನೋಡಿದರೆ ಈ ಬಿಯರ್ ಬಾಟಲ್ ಮೇಲೆ ಸಂದೇಶ ಒಂದನ್ನು ಬರೆಯಲಾಗಿದೆ. ಈ ಬಿಯರ್ ಬಾಟಲನ್ನು ಪ್ಲಂಬರ್ ಆದ ನಾನು ಅಡಗಿಸಿಟ್ಟಿದ್ದೇನೆ ಅನ್ನೋ ಸಂದೇಶ ಇದಾಗಿತ್ತು. 

ಕಿಡ್ನಿ ಸ್ಟೋನ್‌ಗೆ ಬಿಯರ್ ಮದ್ದು, ಏನೀದರ ಅಸಲೀಯತ್ತು?

ಪ್ಲಂಬರ್ ಯಾವ ಕಾರಣಕ್ಕೆ ಅಡಗಿಸಿಟ್ಟ ಅನ್ನೋ ಮಾಹಿತಿ ಲಭ್ಯವಿಲ್ಲ. ಆದರೆ ಬಿಯರ್ ಬಾಟಲಿಗೆ ಸೀಮಿತ ಅವಧಿವರೆಗೆ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಹೀಗಾಗಿ ಮಂದಿನ ಪೀಳಿಗೆ ಇದನ್ನು ಪತ್ತೆ ಹಚ್ಚಿ ಸಂಭ್ರಮಿಸಲಿ ಅನ್ನೋ ಕಾರಣ ಇದರ ಹಿಂದೆ ಇಲ್ಲ. ಇನ್ನು ಬಿಯರ್ ಬಾಟಲ್‌ನ್ನು ಮನೆಯಲ್ಲಿನ ಸಂಭ್ರಮದ ಕ್ಷಣಕ್ಕಾಗಿ ತೆಗಿದಿಟ್ಟ ಕಾರಣವೂ ಇಲ್ಲಿಲ್ಲ. ಪ್ಲಂಬರ್ ತನ್ನ ಕೆಲಸ ಮಾಡುವಾಗ ಅಥವಾ ಬಳಿಕ ತೆಗೆದಿಟ್ಟ ಬಿಯರ್ ಬಾಟಲ್. 

ಇಲ್ಲಿ ಪ್ಲಂಬರ್ ಬಿಯರ್ ಕುಡಿದು ಕೆಲಸ ಮಾಡಿದ್ದಾನೋ? ಅಥವಾ ಸುಮ್ಮನೆ ಅಡಿಗಿಸಿಟ್ಟನೋ ಅನ್ನೋದು ಸ್ಪಷ್ಟವಾಗಿಲ್ಲ. ಈ ಕತೆಯನ್ನು ಸಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದು ಗಂಥರ್ ಬಿಯರ್ ಬಾಟಲ್. 1900ರಲ್ಲಿ ಗಂಥರ್ ಬಿಯರ್ ಬ್ರಿವರೇಜ್ ಕಂಪನಿ ಆರಂಭಗೊಂಡಿತು. ಇದು ಅಮೆರಿಕದ ಎರಡನೇ ಅತೀ ದೊಡ್ಡ ಬ್ರಿವರರೇಜ್ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬೆನ್ನಲ್ಲೇ ಹಲವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. 

ಯಾವಾಗಲೂ ನಿಮಗೇ ಸೊಳ್ಳೆ ಕಚ್ಚುತ್ತಾ? ಯಾರ ಕಂಡ್ರೆ ಇದಕ್ಕೆ ಹೆಚ್ಚು ಇಷ್ಟ?
 

Follow Us:
Download App:
  • android
  • ios