Asianet Suvarna News Asianet Suvarna News

ಹಾವಿಗೆ ಸ್ನಾನ ಮಾಡಿಸಿದ ಭೂಪ... ವೈರಲ್ ವಿಡಿಯೋ

ಹಾವು ಎಂದ ಕೂಡಲೇ ಬಹುತೇಕರು ಕಿರಿಚಿಕೊಂಡು ಸ್ಥಳದಿಂದ ಓಡಿ ಹೋಗೋದೇ ಹೆಚ್ಚು ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಹಾವಿಗೆ ಸ್ನಾನ ಮಾಡಿಸುತ್ತಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

man fearlessly bathing a snake video goes viral akb
Author
First Published Dec 5, 2022, 1:22 PM IST

ಪ್ರಪಂಚದಲ್ಲಿ ಎಂತೆಂಥಾ ವ್ಯಕ್ತಿಗಳಿರುತ್ತಾರೆ ನೋಡಿ. ಹಾವಿಗೆ ಯಾರಾದ್ರೂ ಸ್ನಾನ ಮಾಡಿಸ್ತಾರಾ?  ಹಾವು ಎಂದ ಕೂಡಲೇ ಬಹುತೇಕರು ಕಿರಿಚಿಕೊಂಡು ಸ್ಥಳದಿಂದ ಓಡಿ ಹೋಗೋದೇ ಹೆಚ್ಚು ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಹಾವಿಗೆ ಸ್ನಾನ ಮಾಡಿಸುತ್ತಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಾಮಾನ್ಯವಾಗಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಹಸುಗಳಂತಹ ಅಪಾಯಕಾರಿಯಲ್ಲದ ಪ್ರಾಣಿಗಳಿಗೆ ಜನ ಸ್ನಾನ ಮಾಡಿಸುವುದನ್ನು ನೀವು ನೋಡಿರುತ್ತೀರಿ ಆದರೆ ಅತ್ಯಂತ ವಿಷಕಾರಿ ನಾಗರಹಾವಿಗೆ ಸ್ನಾನ ಮಾಡಿಸುವುದನ್ನು ನೋಡೋದಿರಲಿ.. ಕೇಳಿರಲೂ ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಭೂಪ ತಾನು ಸಾಕಿರುವ ನಾಗರಕ್ಕೆ ಬಾತ್‌ರೂಮಲ್ಲಿ ಸ್ನಾನ ಮಾಡಿಸಿರುವ ವೀಡಿಯೋ ಟ್ವೀಟರ್‌ನಲ್ಲಿ ಸಖತ್‌ ವೈರಲ್‌ ಆಗಿದೆ. 10 ರಿಂದ 12 ಡಿ ಉದ್ದವಿರುವ ಹಾವಿನ ತಲೆ ಹಿಡಿದು ಆರಾಮವಾಗಿ ಯುವಕನೊಬ್ಬ ಹಾವಿಗೆ ಸ್ನಾನ ಮಾಡಿಸುತ್ತಿರುವ ವೀಡಿಯೋ ನೋಡಿದ ನೆಟ್ಟಿಗರು ಇದನ್ನು ಧೈರ್ಯ ಎನ್ನಬೇಕೊ ಹುಚ್ಚುತನ ಎನ್ನಬೇಕೊ ಎಂದು ಗೊಂದಲಕ್ಕೆ ಒಳಗಾಗಿದ್ದಾರೆ. 

 
 
 
 
 
 
 
 
 
 
 
 
 
 
 

A post shared by SAKHT LOGG 🔥 (@sakhtlogg)

 

ಸಾಮಾನ್ಯವಾಗಿ ನಾಗರಹಾವು (Cobra) ತನ್ನ ಒಂದೇ ಕಡಿತದಲ್ಲಿ 20 ಮಂದಿಯನ್ನು ಕೊಲ್ಲುವಷ್ಟು ವಿಷ ವನ್ನು ಹೊಂದಿರುತ್ತದೆ. ಹೀಗಿದ್ದು ಕೂಡ ಈತ ಹಾವಿಗೆ ಸ್ನಾನ ಮಾಡಿಸುವುದು ನೋಡಿದರೆ ಈ ಹಾವು ಬಹುಶಃ ಹಲ್ಲು ಕಿತ್ತ ಹಾವಿರಬೇಕು ಎಂದು ಜನ ಭಾವಿಸುತ್ತಿದ್ದಾರೆ. sakhtlogg ಎಂಬ ಇನ್ಸ್ಟಾ ಪೇಜ್‌ನಿಂದ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಥಂಡಾ ಥಂಡಾ ಪಾನಿಸೇ ನಹನಾ ಚಾಹಿಯೇ ಎಂದು ಕ್ಯಾಪ್ಸನ್ ನೀಡಲಾಗಿದೆ. ಅಂದರೆ ತಂಪು ತಂಪು ನೀರಲ್ಲಿ ಸ್ನಾನ (bath)  ಮಾಡಬೇಕಿದೆ ಎಂದು ಹಿಂದಿಯಲ್ಲಿ ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ರಾಯಚೂರು: ಶಾಲೆಯ ನೀರಿನ ಟ್ಯಾಂಕ್‌ನಲ್ಲಿ ನಾಗರ ಹಾವು ಪ್ರತ್ಯಕ್ಷ, ಕಕ್ಕಾಬಿಕ್ಕಿಯಾದ ವಿದ್ಯಾರ್ಥಿಗಳು..!

ವಿಡಿಯೋದಲ್ಲಿ ಕಾಣಿಸುವಂತೆ ಬಾತ್‌ರೂಮ್‌ನಲ್ಲಿ ಯುವಕ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಮಗ್‌ನಲ್ಲಿ ನೀರನ್ನು ಎತ್ತಿ ಒಂದೊಂದೇ ಮಗ್ ನೀರನ್ನು ಹಾವಿನ ತಲೆಗೆ ಹೊಯ್ದು ಸ್ನಾನ ಮಾಡಿಸುತ್ತಾನೆ. ವಿಡಿಯೋ ನೋಡಿದ ಜನ ಮಾತ್ರ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಕೆಲವರಿಗೆ ಈತನಿಗೆ ಪಕ್ಕಾ ಹುಚ್ಚು ಹಿಡಿದಿರಬೇಕು ಎಂದು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಇದು ತುಂಬಾ ಅಪಾಯಕಾರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹೀಗೆ ಸ್ನಾನ ಮಾಡಿಸಿ ಹಾವಿಗೆ ಚಿತ್ರಹಿಂಸೆ ನೀಡುತ್ತಿರುವುದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ನೀವು ಬದುಕಿ ಅದನ್ನು ಬದುಕಲು ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ. 

ಎಂಥಾ ಸೋಜಿಗವಿದು... ಹಾವಿನ ಮೇಲೆ ಕಪ್ಪೆಯ ಜಾರುಬಂಡಿ ಆಟ: ವೈರಲ್ ವಿಡಿಯೋ

Follow Us:
Download App:
  • android
  • ios