'ಭಾರತ ನಮ್ಮ ಅತ್ಯಾಪ್ತ ಮಿತ್ರರಾಷ್ಟ್ರ' ಸಂಬಂಧಕ್ಕೆ ತೇಪೆ ಹಾಕಲು ಮಾಲ್ಡೀವ್ಸ್ ಯತ್ನ

ಇತ್ತೀಚಿನ ಬೆಳವಣಿಗೆಗಳಿಂದ ಹೆದರಿರುವ ಮಾಲ್ಡೀವ್ಸ್, ಸಧ್ಯ ಭಾರತದೊಂದಿಗಿನ ತನ್ನ ಕೆಡಿಸಿಕೊಂಡಿರುವ ಸಂಬಂಧಕ್ಕೆ ತೇಪೆ ಹಾಕಲು ಪ್ರಯತ್ನಿಸುತ್ತಿದೆ. ತನ್ನ ದೇಶದ ರಾಜಕಾರಣಿಗಳು ಭಾರತದ ವಿರುದ್ಧ ಕೊಟ್ಟಿರುವ ಹೇಳಿಕೆಗಳನ್ನು ಮಾಲ್ಡೀವ್ಸ್ ಅಸೋಸಿಯೇಷನ್ ​​ಆಫ್ ಟೂರಿಸಂ ಇಂಡಸ್ಟ್ರಿ ಬಲವಾಗಿ ಖಂಡಿಸಿದೆ. ಜೊತೆಗೆ, ವಿದೇಶಾಂಗ ಸಚಿವರು ಕೂಡಾ ಇದು ಸರ್ಕಾರದ ಅಧಿಕೃತ ಹೇಳಿಕೆಯಲ್ಲ ಎಂದಿದ್ದಾರೆ.

Maldives tourism body reacts to derogatory comments against PM Modi skr

'ಭಾರತವು ನಮ್ಮ ಹತ್ತಿರದ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತವು ನಮ್ಮ ಇತಿಹಾಸದುದ್ದಕ್ಕೂ ವಿವಿಧ ಬಿಕ್ಕಟ್ಟುಗಳಿಗೆ ಯಾವಾಗಲೂ ಸಹಾಯಕ್ಕೆ ನಿಲ್ಲುವ ಮೊದಲ ದೇಶವಾಗಿದೆ. ಭಾರತ ಸರ್ಕಾರ ಮತ್ತು ಭಾರತದ ಜನರು ನಮ್ಮೊಂದಿಗೆ ಇಟ್ಟುಕೊಂಡಿರುವ ನಿಕಟ ಸಂಬಂಧಕ್ಕೆ ನಾವು ಅಪಾರವಾಗಿ ಕೃತಜ್ಞರಾಗಿರುತ್ತೇವೆ' ಎಂದು ಮಾಲ್ಡೀವ್ಸ್ ಅಸೋಸಿಯೇಷನ್ ​​ಆಫ್ ಟೂರಿಸಂ ಇಂಡಸ್ಟ್ರಿ (MATI) ಹೇಳಿಕೆ ಬಿಡುಗಡೆ ಮಾಡಿದೆ.

ಭಾರತದ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗೆ ಭಾರತದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿ, ಬೈಕಾಟ್ ಮಾಲ್ಡೀವ್ಸ್ ಕೂಗು ಹೆಚ್ಚಿದ ಬೆನ್ನಲ್ಲೇ ಇದರ ಬಿಸಿ ಸರಿಯಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ತಟ್ಟಿದೆ. ಈಗಾಗಲೇ ಮಾಲ್ಡೀವ್ಸ್ ಟೂರ್ ಬುಕಿಂಗ್‌ಗಳನ್ನು ಭಾರತೀಯರು ಸರಣಿಯಲ್ಲಿ ಕ್ಯಾನ್ಸಲ್ ಮಾಡುತ್ತಿದ್ದಾರೆ. ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಮಾಲ್ಡೀವ್ಸ್‌ಗೆ ಇದು ಬಹಳ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. 

ಇದೀಗ ತನ್ನ ದೇಶದ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸುವ ಮೂಲಕ MATIಯು ಭಾರತದೊಂದಿಗೆ ಸಂಬಂಧವನ್ನು ಪುನರ್ ಸ್ಥಾಪಿಸಿಕೊಳ್ಳಲು ಪ್ರಯತ್ನ ನಡೆಸಿದೆ. 

ಸಾಗರದ ಗಜಾನನ ಶರ್ಮಾರ ಇನ್ನಷ್ಟು ಬೇಕೆನ್ನ ಹಾಡಿಗೆ ರಾಮ ಮಂದಿರ ಟ್ರಸ್ಟ್ ...

'ಭಾರತವು ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಸ್ಥಿರವಾದ ಮತ್ತು ಮಹತ್ವದ ಕೊಡುಗೆ ನೀಡಿದೆ' ಎಂದು ಒತ್ತಿ ಹೇಳಿರುವ ಅದು COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ಮಾಲ್ಡೀವ್ಸ್ ಚೇತರಿಕೆಯ ಪ್ರಯತ್ನಗಳಿಗೆ ಅತ್ಯಂತ ಸಹಾಯ ಮಾಡಿದೆ ಎಂದು ನೆನಪಿಸಿಕೊಂಡಿದೆ. 

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ MATI, 'ಭಾರತವು ಮಾಲ್ಡೀವ್ಸ್‌ನ ಉನ್ನತ ಮಾರುಕಟ್ಟೆಗಳಲ್ಲಿ ಒಂದಾಗಿ ಉಳಿದಿದೆ. ನಮ್ಮ ಎರಡು ರಾಷ್ಟ್ರಗಳ ನಡುವಿನ ನಿಕಟ ಸಂಬಂಧವು ತಲೆಮಾರುಗಳವರೆಗೆ ಉಳಿಯುತ್ತದೆ ಎಂಬುದು ನಮ್ಮ ಪ್ರಾಮಾಣಿಕ ಆಶಯವಾಗಿದೆ ಮತ್ತು ನಮ್ಮ ಉತ್ತಮ ಸಂಬಂಧದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವ ಕ್ರಿಯೆಗಳು ಅಥವಾ ಮಾತಿನಿಂದ ನಾವು ದೂರವಿರುತ್ತೇವೆ' ಎಂದಿದೆ. 

ಮಾಲ್ಡೀವ್ಸ್ ಸಚಿವರು, ಇತರ ಕ್ಯಾಬಿನೆಟ್ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಬಗ್ಗೆ ಅವಹೇಳನಕಾರಿ ಮತ್ತು ಅಸಹ್ಯಕರವಾದ ಉಲ್ಲೇಖಗಳನ್ನು ಮಾಡಿದ್ದರಿಂದ ಭಾರತದಲ್ಲಿ ಬೈಕಾಟ್ ಮಾಲ್ಡೀವ್ಸ್ ಅಲೆ ಜೋರಾಗಿ ಎದ್ದಿದೆ. ಭಾರತದ ಸೆಲೆಬ್ರಿಟಿಗಳು ಕೂಡಾ ಇದೀಗ ಮಾಲ್ಡೀವ್ಸ್ ಬಿಟ್ಟು ಭಾರತೀಯರು ಸ್ಥಳೀಯ ಬೀಚ್ ತಾಣಗಳು ಮತ್ತು ಇತರ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಕರೆ ನೀಡುತ್ತಿದ್ದಾರೆ. ಇದರಿಂದ ಮಾಲ್ಡೀವ್ಸ್ ಕಂಗೆಟ್ಟಿದೆ. 

ಜೋರಾಯ್ತು ಲಕ್ಷದ್ವೀಪ ಮಾಲ್ಡೀವ್ಸ್‌ ಜಟಾಪಟಿ: 'ಬಾಯ್ಕಾಟ್‌ ಮಾಲ್ಡೀವ್ಸ್‌'ಕ್ಯಾಂಪೇನ್‌ಗೆ ಸೆಲೆಬ್ರೆಟಿಗಳ ಸಾಥ್‌

ಮಾಲ್ಡೀವ್ಸ್ ಸರ್ಕಾರ ಕೂಡಾ ತನ್ನ ಮಂತ್ರಿಗಳ ಹೇಳಿಕೆಗಳಿಂದ ದೂರವಿದೆ. ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಮೂಸಾ ಜಮೀರ್ ಅವರು ವಿದೇಶಿ ನಾಯಕರ ವಿರುದ್ಧದ ಈ ಟೀಕೆಗಳು 'ಸ್ವೀಕಾರಾರ್ಹವಲ್ಲ', ಇದು ಮಾಲ್ಡೀವ್ಸ್ ಸರ್ಕಾರದ ಅಧಿಕೃತ ಹೇಳಿಕೆಯಲ್ಲ ಎಂದಿದ್ದಾರೆ.
 

Latest Videos
Follow Us:
Download App:
  • android
  • ios