Asianet Suvarna News Asianet Suvarna News

ಉಗ್ರ ಹಫೀಜ್ ಸಯೀದ್ ಮನೆ ಬಳಿ ಸ್ಫೋಟ: 2 ಸಾವು, 16 ಮಂದಿಗೆ ಗಾಯ!

* ಮುಂಬೈ ದಾಳಿಯ ರೂವಾರಿ, ಲಷ್ಕರ್ ಕಮಾಂಡರ್‌ ಹಫೀಜ್ ಸಯೀದ್

* ಹಫೀಜ್ ಸಯೀದ್ ಮನೆ ಬಳಿ ಬಾಂಬ್ ಸ್ಫೋಟ 

* ಹಫೀಜ್​ ಸಯೀದ್​ ನಿವಾಸದಿಂದ 120 ಮೀಟರ್ ದೂರದ, ಲಾಹೋರ್​ನ ಜೋಹರ್​ ಪಟ್ಟಣದ ಬಳ ಸ್ಪೋಟ

Major blast in Lahore near Hafiz Saeed house 2 killed 16 injured pod
Author
Bangalore, First Published Jun 23, 2021, 5:01 PM IST

ಮುಂಬೈ(ಜೂ.23): ಮುಂಬೈ ದಾಳಿಯ ರೂವಾರಿ, ಲಷ್ಕರ್ ಕಮಾಂಡರ್‌ ಹಫೀಜ್ ಸಯೀದ್ ಮನೆ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಲಾಹೋರ್​ನಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, 16ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಆಗಿದ್ದ ಜಮಾತ್​-ಉದ್​-ದಾವಾ ಮುಖ್ಯಸ್ಥ ಹಫೀಜ್​ ಸಯೀದ್​ ನಿವಾಸದಿಂದ 120 ಮೀಟರ್ ದೂರದಲ್ಲಿ, ಲಾಹೋರ್​ನ ಜೋಹರ್​ ಪಟ್ಟಣದ ಬಳಿ ಈ ಸ್ಪೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಬೆನ್ನಲ್ಲೇ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡರವನ್ನು ಲಾಹೋರ್​ನ ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಗಳ ಅನ್ವಯ ಇದೊಂದು ಗ್ಯಾಸ್ ಪೈಪ್ ಲೈನ್ ಸ್ಫೋಟದಂತಿದೆ ಎಂದು ಹೆಳಲಾಗಿದೆ. ಬೆಳಗ್ಗೆ ಸುಮಾರು 11ಗಂಟೆಗೆ ಈ ಸ್ಫೋಟ ಸಂಭವಿಸಿರುವುದಾಗಿ ಹೇಳಿದೆ. ಮತ್ತೊಂದು ವರದಿಯ ಪ್ರಕಾರ, ಈ ಸ್ಫೋಟ ಲಾಹೋರ್ ನ ಜೋಹಾರ್ ನಗರದ ಆಸ್ಪತ್ರೆ ಸಮೀಪ ಸಂಭವಿಸಿದೆ ಎಂದು ಹೇಳಲಾಗಿದೆ. ಹೀಗಿದ್ದರೂ ಈ ಸ್ಫೋಟ ಸಂಭವಿಸಲು ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. 
ಇನ್ನು ಸ್ಫೋಟದಿಂದ ಇಲ್ಲಿನ ಮನೆಗಳ ಕಿಟಕಿ ಗಾಜುಗಳು ಪುಡಿ, ಪುಡಿಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ಸದ್ದು ಭೀಕರವಾಗಿದ್ದು, ಇದು ಹಲವು ಕಿಲೋ ಮೀಟರ್‌ವರೆಗೆ ಕೇಳಿಸಿರುವುದಾಗಿ ವರದಿ ವಿವರಿಸಿದೆ.

Follow Us:
Download App:
  • android
  • ios