ಅಮೆರಿಕದಲ್ಲಿ ಮಾರಾಟವಾಗುವ ಬಹುತೇಕ ಐಫೋನ್‌ಗಳು ಈಗ ಭಾರತದಲ್ಲಿ ತಯಾರಾಗುತ್ತಿವೆ. ೨೦೨೫ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾದ ಐಫೋನ್‌ಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ಭಾರತದಲ್ಲಿ ತಯಾರಾದವು. ಆಪಲ್‌ನ ಜಾಗತಿಕ ಉತ್ಪಾದನೆ ಭಾರತದತ್ತ ವಾಲುತ್ತಿದೆ. ಚೀನಾದಲ್ಲಿ ಉತ್ಪಾದನಾ ವೆಚ್ಚ ಹೆಚ್ಚಿರುವುದು ಇದಕ್ಕೆ ಕಾರಣ. ಭಾರತದಿಂದ ಈಗಾಗಲೇ ೧೫ ಲಕ್ಷ ಐಫೋನ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗಿದೆ.
ಇದೀಗ ಅಮೇರಿಕಾದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಬಹುತೇಕ ಐ-ಫೋನ್‌ಗಳು ಭಾರತದಲ್ಲಿ ತಯಾರು ಮಾಡಲಾಗಿರುವ ಮೊಬೈಲ್‌ಗಳಾಗಿವೆ. ಭಾರತದಲ್ಲಿ ತೆರೆಯಲಾಗಿರುವ ಆಪಲ್ ಕಂಪನಿಗಳಲ್ಲಿ ತಯಾರಾದ ಐಫೋನ್‌ಗಳಿಗೆ ಅಮೇರಿಕಾದಲ್ಲಿ ಭಾರೀ ಬೇಡಿಕೆ ಹೆಚ್ಚಾಗಿದೆ. ಇದಕ್ಕೇನು ಕಾರಣ ಎಂಬುದು ಇಲ್ಲಿದೆ ನೋಡಿ..
ಅಮೆರಿಕದಲ್ಲಿ ಈಗ ಹೆಚ್ಚು ಮಾರಾಟ ಆಗುತ್ತಿರುವ ಭಾರತದಲ್ಲಿ ತಯಾರಾದ ಐಫೋನ್‌ಗಳು 2025ರ ಮೊದಲ 3 ತಿಂಗಳಲ್ಲಿ ಅಮೆರಿಕದಲ್ಲಿ ಮಾರಾಟವಾದ ಶೇ.50ಕ್ಕಿಂತ ಹೆಚ್ಚು ಐಫೋನ್‌ಗಳು ಭಾರತದಲ್ಲಿ ತಯಾರಾದವು. 2025ರ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳು (iPhones) ಭಾರತದಲ್ಲಿ ತಯಾರಾದವುಗಳಾಗಿರುತ್ತವೆ ಎಂದು ಆಪಲ್ ಸಿಇಒ ಟಿಮ್ ಕುಕ್ ಹೇಳಿದ್ದಾರೆ. ಆಪಲ್‌ನ ಜಾಗತಿಕ ಉತ್ಪಾದನೆ ಭಾರತದತ್ತ ಹೆಚ್ಚು ಒಲವು ತೋರುತ್ತಿದೆ ಎಂಬುದಕ್ಕೆ ಇದು ಸೂಚನೆ ಎಂದು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಅಮೆರಿಕದಲ್ಲಿ ಮಾರಾಟವಾಗುವ ಐಪ್ಯಾಡ್, ಆಪಲ್ ವಾಚ್ ಮತ್ತು ಏರ್‌ಪಾಡ್ಸ್‌ಗಳ ಉತ್ಪಾದನೆಯು ವಿಯೆಟ್ನಾಂ ಕೇಂದ್ರಿತವಾಗಿರುತ್ತದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೊಸ ಸುಂಕ ನೀತಿಯ ನಂತರ, ಆಪಲ್ ಕಂಪನಿಯು ಚೀನಾದಿಂದ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸಲು ಯೋಚಿಸುತ್ತಿದೆ ಎಂದು ವರದಿಗಳು ಬಂದಿದ್ದವು. ಅಧಿಕಾರ ವಹಿಸಿಕೊಂಡ ನಂತರ, ಟ್ರಂಪ್ ಚೀನಾದಿಂದ ಆಮದುಗಳ ಮೇಲಿನ ಸುಂಕವನ್ನು ಹೆಚ್ಚಿಸಿದ್ದರು. ಆದಾಗ್ಯೂ, ಸ್ಮಾರ್ಟ್‌ಫೋನ್‌ಗಳು ಮತ್ತು ಸೆಮಿಕಂಡಕ್ಟರ್‌ಗಳಿಗೆ ಟ್ರಂಪ್ ಆಡಳಿತವು ತಾತ್ಕಾಲಿಕ ವಿನಾಯಿತಿ ನೀಡಿದೆ. ಚೀನಾದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ಗಳ ಸುಂಕವನ್ನು ಮರುಸ್ಥಾಪಿಸದಿದ್ದರೆ, ಆಪಲ್‌ನ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಟಿಮ್ ಕುಕ್ ಎಚ್ಚರಿಸಿದ್ದಾರೆ. ಸುಂಕ ಹೆಚ್ಚಳವು ಆಪಲ್ ಉತ್ಪನ್ನಗಳ ಮಾರುಕಟ್ಟೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಆಪಲ್ ಇನ್ನೂ ಲೆಕ್ಕ ಹಾಕಿಲ್ಲ.
15 ಲಕ್ಷ ಐಫೋನ್ ರವಾನೆ: ಅದೇ ಸಮಯದಲ್ಲಿ, ಭಾರತವು ಆಪಲ್ ಉತ್ಪನ್ನಗಳ ಪೂರೈಕೆ ಸರಪಳಿಯಂತೆ ಬೆಳೆಯುತ್ತಿದೆ ಎಂಬುದು ಸತ್ಯ. ಚೀನಾ ಮತ್ತು ವಿಯೆಟ್ನಾಂಗೆ ಹೋಲಿಸಿದರೆ, ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಅಮೆರಿಕದಲ್ಲಿ ಆಮದು ಸುಂಕ ಕಡಿಮೆ. ಟ್ರಂಪ್ ಸುಂಕ ದರಗಳನ್ನು ಹೆಚ್ಚಿಸುವುದನ್ನು ಮುಂಗಾಣುತ್ತಾ, ಮಾರ್ಚ್‌ನಿಂದ 600 ಟನ್ ಐಫೋನ್‌ಗಳನ್ನು ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡಲಾಗಿದೆ. ಈ ಎಲ್ಲ ಐಫೋನ್‌ಗಳನ್ನು ಸಮುದ್ರದ ಮಾರ್ಗದಲ್ಲಿಯೂ ಸಾಗಣೆ ಮಾಡದೆ, ದುಬಾರಿ ವೆಚ್ಚದ ಮಾರ್ಗವಾದ ವಿಮಾನದ ಮೂಲಕ ಅಮೇರಿಕಾಕ್ಕೆ ಸಾಗಣೆ ಮಾಡಲಾಗಿತ್ತು. ಈ ಸರಕುಗಳಲ್ಲಿ 15 ಲಕ್ಷ ಯೂನಿಟ್ ಐಫೋನ್‌ಗಳಿವೆ ಎಂದು ಅಂದಾಜಿಸಲಾಗಿತ್ತು.
ಐಫೋನ್ ಉತ್ಪಾದನೆಯು ಭಾರತದತ್ತ ಹೆಚ್ಚು ಗಮನಹರಿಸುತ್ತಿದ್ದರೂ, ಅಮೆರಿಕದ ಹೊರಗೆ ಮಾರಾಟವಾಗುವ ಆಪಲ್ ಉತ್ಪನ್ನಗಳ ಪ್ರಮುಖ ಜೋಡಣೆ ಕೇಂದ್ರವಾಗಿ ಚೀನಾ ಮುಂದುವರಿಯುತ್ತದೆ ಎಂದು ಟಿಮ್ ಕುಕ್ ಹೇಳಿದ್ದಾರೆ. ಜಾಗತಿಕ ಐಫೋನ್ ಉತ್ಪಾದನೆಯ 76.6% ಇನ್ನೂ ಚೀನಾದಲ್ಲಿದೆ. ವಿಯೆಟ್ನಾಂನಲ್ಲಿ 9.9%, ಭಾರತದಲ್ಲಿ 8.4%, ಮತ್ತು ದಕ್ಷಿಣ ಕೊರಿಯಾದಲ್ಲಿ 1.2% ಐಫೋನ್ ಜೋಡಣೆ ನಡೆಯುತ್ತಿದೆ. ಆದಾಗ್ಯೂ, ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳ ಪ್ರಮುಖ ತಯಾರಕರಾಗಿ ಭಾರತ ಹೊರಹೊಮ್ಮಲಿದೆ. ಅಮೇರಿಕಾದಲ್ಲಿ ಜನಸಂಖ್ಯೆಯೂ ಕಡಿಮೆ ಇರುವುದರಿಂದ ಇದೀಗ ಮಾರಾಟ ಆಗುತ್ತಿರುವ ಎಲ್ಲ ಐಫೋನ್‌ಗಳು ಭಾರತದಲ್ಲಿ ಉತ್ಪಾದಿಸಿ ಫೋನ್‌ಗಳಾಗಿವೆ ಎಂದು ತಿಳಿದುಬಂದಿದೆ.
2017ರಲ್ಲಿ ಭಾರತದಲ್ಲಿ ಆಪಲ್ ಐಫೋನ್ ಜೋಡಣೆ ಆರಂಭಿಸಿತು. ಆರಂಭದಲ್ಲಿ ಕಡಿಮೆ ಬೆಲೆಯ ಮಾದರಿಗಳಾಗಿದ್ದವು. ಆದರೆ 2022ರಿಂದ ಪ್ರೊ ಮಾದರಿಗಳ ಉತ್ಪಾದನೆಯೂ ಭಾರತದಲ್ಲಿ ಆರಂಭವಾಯಿತು. ಪ್ರಸ್ತುತ, ಜಾಗತಿಕವಾಗಿ ಉತ್ಪಾದಿಸಲಾಗುವ ಪ್ರತಿ 5 ಐಫೋನ್‌ಗಳಲ್ಲಿ ಒಂದು ಭಾರತದಲ್ಲಿ ಜೋಡಿಸಲ್ಪಡುತ್ತಿದೆ. ಇನ್ನು ಮುಂದಿನ ದಿನಗಳಲ್ಲಿಯೂ ಭಾರತದಲ್ಲಿ ಉತ್ಪಾದನೆ ಆಗಿವ ಆಪಲ್ ಕಂಪನಿ ಮೊಬೈಲ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಚೀನಾ ಉತ್ಪಾದಿಸುವ ವಸ್ತುಗಳಿಗಿಂತ ಭಾರತದಲ್ಲಿ ನಿರ್ಮಿತವಾದ ವಸ್ತುಗಳ ಗುಣಮಟ್ಟ ಚೆನ್ನಾಗಿದೆ ಎಂದು ಬೇಡಿಕೆಯೂ ಹೆಚ್ಚಾಗಿರುತ್ತದೆ.


