ಒಂದೇ ಕಡೆ ಖರೀದಿಸಿದ 2 ಟಿಕೆಟ್‌ಗೂ ಒಲಿದ ಲಾಟರಿ: ಮಹಿಳೆಯಾದಳು ಕೋಟ್ಯಾಧಿಪತಿ
ಎರಡೆರಡು ಲಾಟರಿ ಹೊಡೆಸಿಕೊಂಡು ನಿರೀಕ್ಷಿಸದೇ ಬಂದ ಲಕ್ಷ್ಮಿಯನ್ನು ಕಂಡು ಕುಣಿಯುವ ಸಮಯ ಈಗ ಅಮೆರಿಕಾದ ಮಹಿಳೆಯೊಬ್ಬರಿಗೆ ಒಲಿದು ಬಂದಿದೆ. ಅಮೆರಿಕಾದ ಸೌತ್ ಕೆರೋಲಿನಾದ ಮಹಿಳೆಯೊಬ್ಬರಿಗೆ ಈ ಅದೃಷ್ಟ ಒಲಿದು ಬಂದಿದೆ.
ಅದೃಷ್ಟ ಹಾಗೂ ಹಣೆಬರಹ ಹೇಗೆ ನಮ್ಮ ಬದುಕಿನ ದಿಕ್ಕನ್ನು ಬದಲಾಯಿಸುತ್ತದೆ ಎಂದು ಹೇಳಲಾಗದು. ಲಾಟರಿ ಎಂಬುದು ಅದೃಷ್ಟದ ಮೇಲೆಯೇ ನಿಂತಿರುವ ಆಟ. ಅದೃಷ್ಟವಿದ್ದರೆ ನೀವು ಕೋಟ್ಯಾಧಿಪತಿಯೂ ಆಗಬಹುದು ಇಲ್ಲದೇ ಹೋದರೆ ಲಾಟರಿ ಟಿಕೆಟ್ ನಿರಂತರ ಖರೀದಿಸಿ ಖರೀದಿಸಿ ನೀವು ಭಿಕ್ಷೆ ಎತ್ತುವ ಸ್ಥಿತಿಗೂ ಬರಬಹುದು. ಖರೀದಿಸಿದ ನೂರು ಟಿಕೆಟ್‌ನಲ್ಲಿ ಒಂದಕ್ಕೂ ಅದೃಷ್ಟ ಖುಲಾಯಿಸದಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಖರೀದಿಸಿ ಒಂದು ಟಿಕೆಟ್‌ನಲ್ಲಿ ಕೋಟಿ ಗೆದ್ದವರು ನಮ್ಮ ನಡುವೆ ಇದ್ದಾರೆ. ಇವೆರಡು ಘಟನೆಗಳು ಈಗಾಗಲೇ ನಡೆದಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈಗ ಏನು ವಿಷ್ಯ ಅಂದ್ರೆ ಎರಡು ಟಿಕೆಟ್ ಖರೀದಿಸಿ ಎರಡೂ ಟಿಕೆಟ್‌ಗೂ ಲಾಟರಿ ಹೊಡೆದರೆ ನಿಮ್ಮ ಸ್ಥಿತಿ ಹೇಗಾಗಿರಬೇಡ. ಖುಷಿಗೆ ಆಕಾಶಕ್ಕೆ ಮೂರೇ ಗೇಣು ಅಂತ ತಕ ತಕ ಕುಣಿಯಲು ಶುರು ಮಾಡೋದಂತು ಗ್ಯಾರಂಟಿ.
ಹೌದು ಹೀಗೆ ಎರಡೆರಡು ಲಾಟರಿ ಹೊಡೆಸಿಕೊಂಡು ನಿರೀಕ್ಷಿಸದೇ ಬಂದ ಲಕ್ಷ್ಮಿಯನ್ನು ಕಂಡು ಕುಣಿಯುವ ಸಮಯ ಈಗ ಅಮೆರಿಕಾದ ಮಹಿಳೆಯೊಬ್ಬರಿಗೆ ಒಲಿದು ಬಂದಿದೆ. ಅಮೆರಿಕಾದ ಸೌತ್ ಕೆರೋಲಿನಾದ ಮಹಿಳೆಯೊಬ್ಬರಿಗೆ ಈ ಅದೃಷ್ಟ ಒಲಿದು ಬಂದಿದೆ. ಇವರು ಒಂದೇ ಅಂಗಡಿಯಿಂದ ಎರಡು ಬಾರಿ ಖರೀಸಿದ ಲಾಟರಿ ಟಿಕೆಟುಗಳಿಗೆ ಬರೊಬ್ಬರಿ 3.4 ಕೋಟಿ ರು.ಗಳನ್ನು ಗೆದ್ದಿದ್ದಾರೆ. 2020ರಲ್ಲಿ ಅವರು ಖರೀದಿಸಿದ್ದ ಸ್ಕ್ರಾಚ್ ಲಾಟರಿ ಟಿಕೆಟ್‌ನಿಂದ 1.9 ಕೋಟಿ ರೂಪಾಯಿ ಗೆದ್ದಿದ್ದರು. ಮತ್ತೊಮ್ಮೆ 2022ರಲ್ಲಿ ಹಾಲು ಖರೀದಿಸಲು ಅದೇ ಅಂಗಡಿಗೆ ಹೋದ ಮಹಿಳೆಗೆ ಸಿಕ್ಕ ಸ್ಕ್ರಾಚ್ ಲಾಟರಿ ಟಿಕೆಟ್‌ನಿಂದ 1.5 ಕೋಟಿ ರೂ. ಗೆದ್ದಿದ್ದಾರೆ. ಹೀಗಾಗಿ 2 ಲಾಟರಿ ಟಿಕೆಟ್‌ನಿಂದ ಆ ಮಹಿಳೆ ಕೋಟ್ಯಧಿಪತಿಯಾಗಿದ್ದಾರೆ. 2 ವರ್ಷದಲ್ಲಿ 2 ಬಾರಿ ಕೋಟಿ ರೂ.ಗಳನ್ನು ಲಾಟರಿಯಲ್ಲಿ ಗಳಿಸಿದ ಮಹಿಳೆಯನ್ನು ಭಾರಿ ಅದೃಷ್ಟವಂತೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಜೊತೆಗೆ ತಮ್ಮ ಅದೃಷ್ಟವನ್ನು ನೆನೆದು ಮುಲುಗುತ್ತಿದ್ದಾರೆ.
Lottery Ticket ಗಡಿ ಜಿಲ್ಲೆಯಲ್ಲಿ ಕದ್ದು ಮುಚ್ಚಿ ಲಾಟರಿ ದಂಧೆ, ಲಕ್ಷಾಂತರ ಮೌಲ್ಯದ ಕೇರಳ ಟಿಕೆಟ್ ವಶ!
ನಾನು ಮೊದಲ ಬಾರಿ ಲಾಟರಿ ಗೆದ್ದಾಗ ಗೆಲುವಿನ ಪ್ರತಿಯೊಂದು ಕ್ಷಣವನ್ನ ಬಹಳಷ್ಟು ಖುಷಿಯಿಂದ ಆನಂದಿಸಿದೆ ಎಂದು ಎರಡೆರಡು ಬಾರಿ ಅದೃಷ್ಟದಿಂದ ಹೊಡೆಸಿಕೊಂಡ ಮಹಿಳೆ SCEL ಗೆ ತಿಳಿಸಿದರು. ಈ ಬಾರಿ ನಾನು ಮನೆ ಖರೀದಿಸಲಿದ್ದೇನೆ ಎಂದು ಅವರ ಹೇಳಿದ್ದಾರೆ. ಕಳೆದ ತಿಂಗಳು ಅಮೆರಿಕಾದ ದಕ್ಷಿಣ ಕೆರೊಲಿನಾದಲ್ಲೇ ಕಿರಾಣಿ ಅಂಗಡಿಗೆ ಹೋದ ವ್ಯಕ್ತಿಯೊಬ್ಬ ಅಲ್ಲಿ ಖರೀದಿಸಿದ ಟಿಕೆಟ್ ಆತನ ಬದುಕಿನ ತಿರುವನ್ನೇ ಬದಲಾಯಿಸಿತು. ಆತನಿಗೆ 15 ಕೋಟಿಗಿಂತ ಹೆಚ್ಚು ಮೊತ್ತದ ಲಾಟರಿ ಒಲಿದು ಬಂದು ಆತನ ಬದುಕಿನ ದಿಕ್ಕನೇ ಬದಲಾಯಿಸಿತು. ನಾನು ಮನೆಯಲ್ಲಿ ಹಾಲು ಖಾಲಿಯಾದ ಕಾರಣ ಹಾಲು ಖರೀದಿಸಲು ಅಂಗಡಿಗೆ ತೆರಳಿದೆ. ಅಂಗಡಿಯಿಂದ ಹೊರ ಬರುತ್ತಿದ್ದಾಗ ಗ್ರಾಹಕ ಸೇವಾ ಕೌಂಟರ್‌ನಲ್ಲಿ ಪವರ್‌ಬಾಲ್ ಟಿಕೆಟ್ ಗಮನಿಸಿ ಅದನ್ನು ಖರೀದಿಸಲು ನಿರ್ಧರಿಸಿದೆ. ಮರುದಿನ ಅವರು ಆನ್‌ಲೈನ್‌ನಲ್ಲಿ ಅವರ ಟಿಕೆಟ್ ಸಂಖ್ಯೆಯನ್ನು ನೋಡಿದಾಗ 15 ಕೋಟಿಯ ಒಡೆಯರಾಗಿರುವುದು ಗಮನಕ್ಕೆ ಬಂದಿತ್ತು ಎಂದು ಅವರು ದಕ್ಷಿಣ ಕೆರೊಲಿನಾ ರಾಜ್ಯ ಲಾಟರಿ ಏಜೆನ್ಸಿಯೊಂದಿಗೆ ( South Carolina state lottery agency) ಆ ಕ್ಷಣವನ್ನು ವಿವರಿಸಿದ್ದರು.
ಅನಾಮಧೇಯ ವ್ಯಕ್ತಿ ನೀಡಿದ ಲಾಟರಿಯಿಂದ ಬದಲಾದ ಅದೃಷ್ಟ, ಒಂದೇ ಕ್ಷಣದಲ್ಲಿ ಮಹಿಳೆ ಗೆದ್ದಿದ್ದು 19 ಕೋಟಿ!