Asianet Suvarna News Asianet Suvarna News

ಭೂಕಂಪ, ಯುದ್ಧ, ದುರಂತ, 2023ರಲ್ಲಿ ನಡೆದ ಜಗತ್ತಿನ ಪ್ರಮುಖ ವಿದ್ಯಮಾನಗಳು!

2023 ಕೊನೆಗೊಳ್ಳುತ್ತಿದ್ದಂತೆ, ವಿವಿಧ ಮಹತ್ವದ ಘಟನೆಗಳು ವರ್ಷದಲ್ಲಿ ನಡೆದಿದೆ.   ಗಮನಾರ್ಹ ಘಟನೆಗಳಲ್ಲಿ ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಮತ್ತು ಹಮಾಸ್-ಇಸ್ರೇಲ್ ಸಂಘರ್ಷವನ್ನು ಒಳಗೊಂಡಿದೆ. ಇಲ್ಲಿಯವರೆಗೆ 2023 ರಲ್ಲಿ ಜಾಗತಿಕವಾಗಿ ಗಮನಸೆಳೆದ ಪ್ರಮುಖ ವಿಚಾರಗಳು ಇಲ್ಲಿವೆ.

lookback 2023 Turkey and Syria Earthquake Israel Hamas War Titan Submersible Incident around the globe News san
Author
First Published Dec 12, 2023, 8:01 PM IST


ಬೆಂಗಳೂರು (ಡಿ.12): ಭೂಕಂಪ, ಯುದ್ಧ, ದುರಂತ..ಇದು ವಿಶ್ವದಲ್ಲಿ ಈ ಬಾರಿ ನಡೆದಿರುವ ವಿಚಾರಗಳು. ಟರ್ಕಿ ಸಿರಿಯಾದಲ್ಲಿ ನಡೆದ ಭೂಕಂಪದಲ್ಲಿ 50 ಸಾವಿರಕ್ಕೂ ಅಧಿಕ ಜನರು ಸಾವು ಕಂಡರೆ, ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿ ಹಾನಿ ಉಂಟಾದವು. ಅದಾಗಲೇ ರಷ್ಯಾ-ಉಕ್ರೇನ್‌ ನಡುವಿನ ಯುದ್ಧದಿಂದ ಬೇಯುತ್ತಿದ್ದ ವಿಶ್ವಕ್ಕೆ ಈ ಬಾರಿ ಮತ್ತೊಂದು ಯುದ್ಧದ ಪರಿಣಾಮ ಎದುರಿಸುವಂತಾಯಿತು. ಹಮಾಸ್‌ ಇಸ್ರೇಲ್‌ ಮೇಲೆ ದಾಳಿ ಮಾಡಿದ ಬೆನ್ನಲ್ಲಿಯೇ ಇಸ್ರೇಲ್‌ ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಣೆ ಮಾಡಿಬಿಟ್ಟಿತು. ಅದರೊಂದಿಗೆ ಟೈಟಾನ್‌ ಸಬ್‌ಮರ್ಸಿಬಲ್‌ ದುರಂತ ಈ 2023ರಲ್ಲಿ ಕಣ್ಣಿಗೆ ಕಟ್ಟಿದಂತಿದೆ. ಟೈಟಾನಿಕ್‌ ಹಡಗನ್ನು ನೋಡುವ ನಿಟ್ಟಿನಲ್ಲಿ ಇಳಿದಿದ್ದ ಟೈಟಾನ್‌ ಸಬ್‌ಮರ್ಸಿಬಲ್‌ ಕೆಳಗೆ ಇಳಿಯುವ ವೇಳೆಗೆ ಪುಡಿಪುಡಿಯಾಗಿ ಅದರಲ್ಲಿ ಇದ್ದವರೆಲ್ಲಾ ಸಾವು ಕಂಡಿದ್ದರು.

ಟರ್ಕಿ-ಸಿರಿಯಾ ಭೂಕಂಪ: ಫೆಬ್ರವರಿಯಲ್ಲಿ, ಟರ್ಕಿ ಮತ್ತು ಸಿರಿಯಾ ಪ್ರಬಲ ಭೂಕಂಪಗಳನ್ನು ಎದುರಿಸಿದ್ದರು.. 7.8 ತೀವ್ರತೆಯ ಆರಂಭಿಕ ಭೂಕಂಪವು ಮುಂಜಾನೆ 4:15 ಕ್ಕೆ ಅಪ್ಪಳಿಸಿತು, ನಂತರ 1:24 ಕ್ಕೆ 7.5 ರ ತೀವ್ರತೆಯ ಎರಡನೇ ಭೂಕಂಪನವು ಕಟ್ಟಡದ ಕುಸಿತಗಳಿಗೆ ಕಾರಣವಾಗಿದ್ದು ಮಾತ್ರವಲ್ಲದೆ ಪ್ರಾಣಹಾನಿ ಕೂಡ ಸಂಭವಿಸಿದವು.  ಈ ಭೂಕಂಪದಿಂದಾಗಿ ಟರ್ಕಿಯಲ್ಲಿ 59,000 ಮತ್ತು ಸಿರಿಯಾದಲ್ಲಿ 8,000 ಜನರು ಸಾವು ಕಂಡರು. ಭಾರತ ಕೂಡ ಟರ್ಕಿ ಹಾಗೂ ಸಿರಿಯಾಗೆ ಭೂಕಂಪ ಸಂದರ್ಭದಲ್ಲಿ ಸಹಾಯ ಮಾಡಿತು.

ಕ್ಯಾಲಿಫೋರ್ನಿಯಾ ಮಾಂಟೆರಿ ಪಾರ್ಕ್ ಶೂಟಿಂಗ್: 2023ರ ಜನವರಿ 21 ರಂದು, ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಅಲ್ಲಿ 72 ವರ್ಷದ ಬಂದೂಕುಧಾರಿ ಹನ್ನೊಂದು ಜನರನ್ನು ಸಾಯಿಸಿದರೆ, ಒಂಬತ್ತು ಮಂದಿ ಗಾಯಗೊಂಡರು. ಮರುದಿನ ಟೊರೆನ್ಸ್‌ನಲ್ಲಿ ಪೋಲೀಸರೊಂದಿಗಿನ ಘರ್ಷಣೆಯ ಸಮಯದಲ್ಲಿ ಅವರು ತಾವು ಗುಂಡಿ ಹಾರಿಸಿಕೊಂಡು ಮೃತಪಟ್ಟಿದ್ದರು.

ಎಕ್ಸ್‌ ಆಗಿ ಬದಲಾದ ಟ್ವಿಟ್ಟರ್‌: ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಕಳೆದ ವರ್ಷ ಟ್ವಿಟರ್ ಅನ್ನು ಖರೀದಿಸಿದರು ಮತ್ತು ಅದರ ಹೆಸರನ್ನು 'ಎಕ್ಸ್‌' ಎಂದು ಬದಲಾಯಿಸಿದರು. ಅವರು ಆರಂಭದಲ್ಲಿ 2022 ರ ಏಪ್ರಿಲ್‌ನಲ್ಲಿ ಪ್ರತಿ ಷೇರಿಗೆ ನಿರ್ದಿಷ್ಟ ಬೆಲೆಗೆ ಖರೀದಿಸುವುದಾಗಿ ಹೇಳಿದರು, ಆದರೆ ಜುಲೈ ವೇಳೆಗೆ ಅವರು ಹಿಂದೆ ಸರಿಯಲು ಬಯಸಿದ್ದರು. ಕೆಲವು ಏರಿಳಿತಗಳ ನಂತರ, ಅವರು ಅಕ್ಟೋಬರ್ 27, 2022 ರಂದು ಅಧಿಕೃತವಾಗಿ ಟ್ವಿಟರ್‌ನ ಮಾಲೀಕರಾದರು. ಜುಲೈ 2023 ರಲ್ಲಿ, ಮಸ್ಕ್ ಟ್ವಿಟರ್‌ಅನ್ನು ಎಕ್ಸ್‌ ಆಗಿ ಬದಲಾಯಿಸಲು ಪ್ರಾರಂಭಿಸಿದರು ಮತ್ತು ಫೋನ್‌ಗಳಲ್ಲಿ ಅದರ ಲೋಗೋವನ್ನು ಬದಲಾಯಿಸಿದರು. 

ಇಸ್ರೇಲ್ ಮೇಲೆ ಹಮಾಸ್  ದಾಳಿ: ಅಕ್ಟೋಬರ್ 7 ರ ಬೆಳಿಗ್ಗೆ, ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಮೇಲೆ ದೊಡ್ಡ ದಾಳಿಯನ್ನು ನಡೆಸಿತು. ಇದರ ಬೆನ್ನಲ್ಲಿಯೇ ಇಸ್ರೇಲ್‌, ಹಮಾಸ್‌ಅನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿ ಪಣ ತೊಟ್ಟು ವಾಯು ದಾಳಿ ಆರಂಭ ಮಾಡಿತು.

ಭಾರತ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆಯ ದೇಶ: 2023 ರಲ್ಲಿ, ಭಾರತವು ಚೀನಾವನ್ನು ಮೀರಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಯಿತು, ಅಂದಾಜು 1.43 ಶತಕೋಟಿ ಜನಸಂಖ್ಯೆಯನ್ನು ಹೊಂದಿದೆ. ಮುಂಬರುವ ದಶಕಗಳಲ್ಲಿ ಭಾರತವು ಈ ಸ್ಥಾನಮಾನವನ್ನು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.

ಫ್ರೆಡ್ಡಿ ಸೈಕ್ಲೋನ್‌ ಅವಾಂತರ: ಇದು ಇತಿಹಾಸದಲ್ಲಿ ದೀರ್ಘಕಾಲ ದಾಖಲಾದ ಉಷ್ಣವಲಯದ ಚಂಡಮಾರುತವಾಗಿದೆ, ಇದು ಮಲಾವಿ, ಮೊಜಾಂಬಿಕ್ ಮತ್ತು ನೈಋತ್ಯ ಆಫ್ರಿಕಾದ ಕೆಲವು ಭಾಗಗಳಲ್ಲಿ 1,400 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿತ್ತು.

ಟೈಟಾನ್ ಸಬ್‌ಮರ್ಸಿಬಲ್ ದುರಂತ:  ಜೂನ್ 18ರಂದು, ಐದು ಜನರನ್ನು ಹೊತ್ತ ಟೈಟಾನ್ ಎಂಬ ಸಬ್‌ಮರ್ಸಿಬಲ್ ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕರಾವಳಿಯ ಬಳಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಸಮುದ್ರದ ಆಳದಲ್ಲಿ ಕಣ್ಮರೆಯಾಯಿತು. ಧ್ವಂಸಗೊಂಡ ಸ್ಥಳಕ್ಕೆ ಧುಮುಕಿದ 1 ಗಂಟೆ 45 ನಿಮಿಷಗಳ ಸಂವಹನ ಕಳೆದುಕೊಂಡಿತು. ಸಾಕಷ್ಟು ಹುಡುಕಾಟದ ಬಳಿಕ ಇದರಲ್ಲಿದ್ದ ಎಲ್ಲರೂ ಸಾವು ಕಂಡಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

ಜಿ20 ಆಯೋಜಿಸಿದ ಭಾರತ: ಭಾರತವು ತನ್ನ ಚೊಚ್ಚಲ G20 ನಾಯಕರ ಶೃಂಗಸಭೆಯನ್ನು ಸೆಪ್ಟೆಂಬರ್ 9-10 ರಂದು ಆಯೋಜಿಸಿತು. ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಬಿಡೆನ್, ಕೆನಡಾದ ಟ್ರುಡೊ ಮತ್ತು ಬ್ರಿಟಿಷ್ ಪಿಎಂ ರಿಷಿ ಸುನಕ್ ಸೇರಿದಂತೆ ವಿವಿಧ ಸರ್ಕಾರಗಳ 43 ಮುಖ್ಯಸ್ಥರು ಭಾಗವಹಿಸಿದ್ದರು. ಆದಾಗ್ಯೂ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!

ಚುರುಕಾದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್: ವಿಶ್ವದ ಹಲವು ದೇಶಗಳಲ್ಲಿ ಆರ್ಟಫಿಶಿಯಲ್‌ ಇಂಟಲಿಜೆನ್ಸ್‌ ಸುದ್ದಿ ಮಾಡಿತು. ಓಪನ್‌ಐಯ ಚಾಟ್‌ ಜಿಪಿ, ಗೂಗಲ್‌ನ ಬಾರ್ಡ್‌ ಸೇರಿದಂತೆ ಹಲವು ಕಂಪನಿಗಳ ಎಐ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ತಮ್ಮ ಕ್ರೇಜ್‌ ಸೃಷ್ಟಿಸುವ ಸಾಧ್ಯತೆ ಇದೆ.

2023ರಲ್ಲಿ ಭಾರತೀಯರು ಗರಿಷ್ಠ ಬಾರಿ ಹುಡುಕಿದ 'ನ್ಯೂಸ್‌' ವಿಚಾರಗಳು ಯಾವುದು? ಇಲ್ಲಿದೆ ಲಿಸ್ಟ್‌

ದಾಖಲೆ ಪ್ರಮಾಣಕ್ಕೆ ಏರಿದ ಜಾಗತಿಕ ತಾಪಮಾನ: ಹವಮಾನ ಬದಲಾವಣೆಯು ಭವಿಷ್ಯದಲ್ಲಿ ಎದುರಾಗುವ ಆತಂಕ ಎನ್ನುವ ಹಾಗಿಲ್ಲ. ಅದು ಈಗಿನ ವಾಸ್ತವವಾಗಿದೆ. 2023 ಬಹುಶಃ ದಾಖಲೆಯ ಅತ್ಯಂತ ಬಿಸಿಯಾದ ವರ್ಷವಾಗಿದೆ. ಜಾಗತಿಕ ತಾಪಮಾನವು 125,000 ವರ್ಷಗಳಲ್ಲಿ ಈ ಮಟ್ಟಕ್ಕಿಂತ ಹೆಚ್ಚಾಗಿರಲಿಲ್ಲ. ಮತ್ತು 2015 ರ ಪ್ಯಾರಿಸ್ ಒಪ್ಪಂದದಲ್ಲಿ ಪ್ರತಿಪಾದಿಸಲಾದ 2 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರಲು ಅವು ಸಿದ್ಧವಾಗಿವೆ. 
 

Follow Us:
Download App:
  • android
  • ios