MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • 2023ರಲ್ಲಿ ಭಾರತೀಯರು ಗರಿಷ್ಠ ಬಾರಿ ಹುಡುಕಿದ 'ನ್ಯೂಸ್‌' ವಿಚಾರಗಳು ಯಾವುದು? ಇಲ್ಲಿದೆ ಲಿಸ್ಟ್‌

2023ರಲ್ಲಿ ಭಾರತೀಯರು ಗರಿಷ್ಠ ಬಾರಿ ಹುಡುಕಿದ 'ನ್ಯೂಸ್‌' ವಿಚಾರಗಳು ಯಾವುದು? ಇಲ್ಲಿದೆ ಲಿಸ್ಟ್‌

ಗೂಗಲ್ ಹಂಚಿಕೊಂಡ ಡೇಟಾವು ದೇಶದಲ್ಲಿ ಹೆಚ್ಚು ಹುಡುಕಲ್ಪಟ್ಟ ಸುದ್ದಿ ವಿಷಯವೆಂದರೆ ಚಂದ್ರಯಾನ -3 ಮೂನ್‌ ಮಿಷನ್ ಎಂದು ತಿಳಿಸಿದೆ. ಅದರೊಂದಿಗೆ G20 ಶೃಂಗಸಭೆ, ಇಸ್ರೇಲ್-ಗಾಜಾ ಯುದ್ಧ ಮತ್ತು ಫ್ರೆಂಡ್ಸ್ ಸ್ಟಾರ್ ಮ್ಯಾಥ್ಯೂ ಪೆರ್ರಿ ಅವರ ಸಾವಿನ ಕುರಿತಾದ ಸುದ್ದಿಯನ್ನೂ ಹೆಚ್ಚಾಗಿ ಸರ್ಚ್‌ ಮಾಡಲಾಗಿದೆ. 

2 Min read
Santosh Naik
Published : Dec 12 2023, 06:39 PM IST
Share this Photo Gallery
  • FB
  • TW
  • Linkdin
  • Whatsapp
110

ನಿಸ್ಸಂಶಯವಾಗಿ ಭಾರತೀಯರು ಈ ಬಾರಿ ಗರಿಷ್ಠ ಬಾರಿ ಸರ್ಚ್‌ ಮಾಡಿದ ನ್ಯೂಸ್‌ ಟಾಪಿಕ್‌ ಎಂದರೆ ಅದು (Chandrayaan-3) ಚಂದ್ರಯಾನ-3. ಭಾರತದ ಈವರೆಗಿನ ಅತ್ಯಂತ ಯಶಸ್ವಿ ಬಾಹ್ಯಾಕಾಶ ಪ್ರಾಜೆಕ್ಟ್‌ ಗೂಗಲ್‌ ಸರ್ಚ್‌ನಲ್ಲಿ ನಂ.1 ಸ್ಥಾನದದಲ್ಲಿದೆ.

210

ಏಪ್ರಿಕ್‌-ಮೇ ತಿಂಗಳಲ್ಲಿ ನಡೆದ ಕರ್ನಾಟಕ ಚುನಾವಣೆಯ ಫಲಿತಾಂಶ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. Karnataka Election Results ಎನ್ನುವ ಟಾಪಿಕ್‌ ಗೂಗಲ್‌ ಸರ್ಚ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

310

Israel News ಟಾಪಿಕ್‌ ಮೂರನೇ ಸ್ಥಾನದಲ್ಲಿದೆ. ತನ್ನ ಮೇಲೆ ಕಾಲುಕೆರೆದುಕೊಂಡು ದಾಳಿ ಮಾಡಿ, ನಾಗರೀಕರನ್ನು ಹತ್ಯೆ ಮಾಡಿದ್ದ ಹಮಾಸ್‌ಅನ್ನು ಇಸ್ರೇಲ್‌ ತನ್ನ ಬಲಿಷ್ಠ ಸೇನೆ ಬಳಸಿ ಮಟ್ಟಹಾಕಿತ್ತು. ಈ ಬಗ್ಗೆ ಭಾರತೀಯರು ಆಸಕ್ತಿ ತೋರಿದ್ದರು.

410

ಸತೀಶ್ ಚಂದ್ರ ಕೌಶಿಕ್ (Satish Kaushik) ಒಬ್ಬ ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ, ಹಾಸ್ಯನಟ ಮತ್ತು ಚಿತ್ರಕಥೆಗಾರ. ಇವರ ಹಠಾತ್‌ ನಿಧನ ಕೂಡ ಭಾರತೀಯರಿಗೆ ಕಾಡಿತ್ತು.ಇದು ನಾಲ್ಕನೇ ಸ್ಥಾನದಲ್ಲಿದೆ.

510

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2023ರ ಬಜೆಟ್‌ ವಿಚಾರ ಐದನೇ ಸ್ಥಾನದಲ್ಲಿದೆ. Budget 2023 ಎನ್ನುವ ಟ್ಯಾಗ್‌ ಸರ್ಚ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

610

ಬಹುಶಃ ಈ ವರ್ಷ ನಡೆದ ಅತಿದೊಡ್ಡ ಪಾಕೃತಿಕ ವಿಕೋಪ ಟರ್ಕಿ ಭೂಕಂಪ. ಅಂದಾಜು 30 ಸಾವಿರಕ್ಕೂ ಅಧಿಕ ಮಂದಿ ಸಾವು ಕಂಡಿದ್ದರು. Turkey Earthquake ಟ್ಯಾಗ್‌ ಸರ್ಚ್‌ನಲ್ಲಿ 6ನೇ ಸ್ಥಾನದಲ್ಲಿದೆ.

710
atiq ahmed

atiq ahmed

ಉತ್ತರ ಪ್ರದೇಶದ ಅತ್ಯಂತ ಕುಖ್ಯಾತ ಮಾಫಿಯಾ ಡಾನ್‌ ಹಾಗೂ ರಾಜಕಾರಣಿ Atiq Ahmed ನನ್ನು ನಡು ರಸ್ತೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ವಿಚಾರ 7ನೇ ಸ್ಥಾನದಲ್ಲಿದೆ.

810

ಪ್ರಖ್ಯಾತ ಸಿರೀಸ್‌ ಫ್ರೆಂಡ್ಸ್‌ನಲ್ಲಿ ನಟಿಸಿದ ನಟ Matthew Perry ಅಕ್ಟೋಬರ್‌ನಲ್ಲಿ ನಿಧನರಾದರು. ಇವರ ಹಠಾತ್‌ ನಿಧನದ ವಿಚಾರವಾಗಿ ಭಾರತೀಯರು ಸರ್ಚ್‌ ಮಾಡಿದ್ದಾರೆ.

910
manipur s biju

manipur s biju

ದೇಶದ ವಿರೋಧ ಪಕ್ಷಗಳು ಮುಖ್ಯವಾಗಿ ಮುನ್ನಲೆಗೆ ತಂದ ವಿಚಾರ ಮಣಿಪುರ ಹಿಂಸಾಚಾರ. ಕಡೆಗೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸಂಸತ್‌ನಲ್ಲಿಯೇ ಅವಿಶ್ವಾಸ ನಿರ್ಣಯದಲ್ಲಿ ಮಾತನಾಡಿದರು. ಈ ವಿಚಾರ ಸರ್ಚ್‌ನಲ್ಲಿ 9ನೇ ಸ್ಥಾನದಲ್ಲಿದೆ.

1010
Odisha train accident, what is Body Embalming'

Odisha train accident, what is Body Embalming'

ಈ ವರ್ಷ ಭಾರತದಲ್ಲಿ ಸಂಭವಿಸಿದ ಅತೀದೊಡ್ಡ ದುರಂತ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ದುರಂತ. ಒಡಿಶಾದಲ್ಲಿ ಸಂಭವಿಸಿದ್ದ ಈ ಅಪಘಾತದ ವಿಚಾರ ಸರ್ಚ್‌ನಲ್ಲಿ 10ನೇ ಸ್ಥಾನದಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಗೂಗಲ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved