Asianet Suvarna News Asianet Suvarna News

ಅನ್ಯಗ್ರಹ ಜೀವಿ ಈ ನಾರಿ ನಿದ್ರೆ ಕದೀತಾವಂತೆ!

ಅನ್ಯಗ್ರಹ ಜೀವಿಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಹಲವು ದಶಕಗಳಿಂದ ಹರಿದಾಡುತ್ತಲೇ ಇವೆ. ಹಾರುವ ತಟ್ಟೆಗಳಂಥ ಸಾಧಕಗಳು ಹಲವರ ಅರಿವಿಗೆ ಬಂದರೂ ಭೂಮಿ ಹೊರತುಪಡಿಸಿ ಬೇರೆ ಗ್ರಹಗಳಲ್ಲಿ ಜೀವಿಗಳು ಇರೋ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ, ಇಲ್ಲೊಬ್ಬ ಮಹಿಳೆ ಅನ್ಯ ಗ್ರಹ ಜೀವಿಗಳು ಕನಸಲ್ಲಿ ಬರುತ್ತಾರೆ. ಎಲ್ಲಿಗೋ ಕರ್ಕೊಂಡು ಹೋಗುತ್ತಾರೆಂದು ಹೇಳಿಕೊಳ್ಳುತ್ತಿದ್ದಾಳೆ. ಏನಿದು? 
 

london woman blames that Aliens abduct her in her sleep akb
Author
Bangalore, First Published Jun 16, 2022, 2:54 PM IST

ಲಂಡನ್ (ಜೂ.16): ನಿದ್ರಿಸುವಾಗ ತಮ್ಮ ಕನಸಿನಲ್ಲಿ ಏನೋ ಅಘೋಚರ ಸಂಗತಿಗಳು ನಡೆಯುತ್ತವೆ. ಎಚ್ಚರವಾದಾಗ ತಮ್ಮ ಚರ್ಮದಲ್ಲಿ ಸಣ್ಣಪುಟ್ಟ ಗಾಯಗಳು, ಪರಚಿದ ಕಲೆಗಳು ಕಾಣಿಸುತ್ತವೆಂದು ಮಹಿಳೆಯೊಬ್ಬರು ಹೇಳಿ ಕೊಳ್ಳುತ್ತಿದ್ದಾರೆ. ಯಾರೋ ತಮ್ಮನ್ನು ಅಪಹರಿಸುತ್ತಿದ್ದು, ಇದರಲ್ಲಿ ಅನ್ಯ ಗ್ರಹ ಜೀವಿಗಳ ಕೈವಾಡ ಇರುವುದಾಗಿ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಸಾಕ್ಷಿಗಳು ಸಿಗುತ್ತಿಲ್ಲವಾದರೂ, ಈ ನಾರಿಯ ವರ್ತನೆ ಹಾಗೂ ಹೇಳಿಕೆ ಬಗ್ಗೆ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಈಗಾಗಲೇ ಅನ್ಯಗ್ರಹ ಜೀವಿಗಳ ಅಸಿತ್ವದ ಬಗ್ಗೆ ಹತ್ತು ಹಲವು ಚರ್ಚೆಗಳು, ಪ್ರಶ್ನೆಗಳು ಮೂಡುತ್ತಿರುವಾಗಲೇ ಈ ಮಹಿಳೆ ಹೀಗೆ ಹೇಳಿಕೊಳ್ಳುತ್ತಿರುವುದು ವಿಚಿತ್ರ ಎನಿಸುತ್ತಿದೆ. 

ಇಂಗ್ಲೆಂಡ್‌ನ (England) ಕೆಂಟ್ (Kent) ಜಿಲ್ಲೆ ರಾಮ್ಸ್‌ಗೇಟ್‌ನ (Ramsgate) 51 ವರ್ಷದ ಮಹಿಳೆ ಮಾರಿಯಾ ಲಿವಾ (Maria Leiva) ಇಂಥ ವಿಚಿತ್ರ ಹೇಳಿಕೆ ನೀಡುತ್ತಿರುವ ಮಹಿಳೆ. ಕನಸಲ್ಲಿ ಅನ್ಯಗ್ರಹ ಜೀವಿಗಳು ಬಂದು ಇವಳೊಟ್ಟಿಗೆ ಮಾತನಾಡುತ್ತಾರಂತೆ. ಟೆಲಿಪತಿ ಸಹ ವರ್ಕ್‌ಔಟ್ ಆಗುತ್ತಂತೆ. ಬೆಳಗ್ಗೆ ಎದ್ದಾಗ ಚರ್ಮದಲ್ಲಿ ಗಾಯಗಳಿರುತ್ತವಂತೆ. ಬಾಹ್ಯಾಕಾಶಕ್ಕೆ ಹೋಗಿ ಬಂದ ಅನುಭವವೂ ಆಗಿದೆ ಎಂದು ಹೇಳುತ್ತಿದ್ದಾಳೆ. ಅದು ಕನಸಲ್ಲಿ ಎಂಬುವುದಕ್ಕೆ ಪುಷ್ಟಿ ನೀಡಲು ಕೆಲವೊಮ್ಮೆ ನಿದ್ರೆಯಿಂದ ಎಚ್ಚರವಾದಾಗ ಈ ಮಹಿಳೆ ಮನೆಯಿಂದ ದೂರದ ಸ್ಥಳದಲ್ಲಿಯೂ ಕಾಣಿಸಿದ್ದು ಇದೆಯಂತೆ. ಆದರೆ, ಅಲ್ಲೀ ತನಕ, ಅದೂ ರಾತ್ರಿ ಹೇಗೆ ಹೋಗುತ್ತಾಳೋ ಎಂಬುವ ಪ್ರಶ್ನೆಗೆ ಮಾತ್ರ ಸರಿಯಾದ ಉತ್ತರ ಸಿಗುತ್ತಿಲ್ಲ. 

ಗುರುಗ್ರಹದ ಚಂದ್ರ ಯುರೋಪಾದಲ್ಲಿ ವಾಸಯೋಗ್ಯ ಪ್ರದೇಶ ಪತ್ತೆ: ಏಲಿಯನ್ಸ್ ಅಸ್ತಿತ್ವಕ್ಕೆ ಮತ್ತಷ್ಟು ಪುಷ್ಟಿ?

ಇಂಥ ಅನುಭವಗಳು ಈ ಮಹಿಳೆಗೆ ಈಗಾಗಲೇ ಹಲವು ವರ್ಷಗಳಿಂದ ಆಗುತ್ತಿದ್ದು, ಬೇರೆ ಬೇರೆ ಸಂದರ್ಭಗಳಲ್ಲಾದ ವಿಭಿನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾಳೆ. ಒಮ್ಮೆ ಟ್ಯಾಕ್ಸಿಯಲ್ಲಿ ಮನೆಗೆ ಹೋಗಬೇಕಾದ ಇವಳು, ಇನ್ನೆಲ್ಲೋ ಹೋಗಿದ್ದಳಂತೆ. ಅಲ್ಲಿಗೆ ಹೇಗೆ ಹೋದರು, ಯಾರು ಕರೆದುಕೊಂಡು ಹೋದರೆಂಬುವುದು ಮಾತ್ರ ಮಾರಿಯಾಗೂ ಗೊತ್ತಿಲ್ಲದ ಸಂಗತಿ. ಟ್ಯಾಕ್ಸಿ ಹಿಡಿಯುವ ಟೈಮ್ ಮತ್ತು ಎಚ್ಚರಗೊಂಡಾಗ ಹಲವು ಗಂಟೆಗಳು ಮಿಸ್ ಆಗಿದ್ದು, ನಿಜಕ್ಕೂ ಈಕೆ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡು ಹಿಡಿಯುವುದು ಕಷ್ಟವಾಗುತ್ತಿದೆಯಂತೆ

ಈ ವರ್ತನೇ ಶುರುವಾಗಿದ್ದು ಯಾವಾಗ? 

ಮಾರಿಯಾಳಲ್ಲಿ ಇಂಥ ವರ್ತನೆಗಳು ಕಾಣಿಸಿಕೊಳ್ಳುತ್ತಿರುವುದು ಈಗೀಗ ಅಲ್ಲವಂತೆ. ಸುಮಾರು ನಾಲ್ಕು ವರ್ಷಗಳಿದ್ದಾಗಲೇ ಏಲಿಯನ್ಸ್ ಜೊತೆ ಮಾತನಾಡಲು ಆಕೆ ಶುರು ಮಾಡಿದ್ದಳಂತೆ. ಪುಟ್ಟವಳಿದ್ದಾಗ ಒಮ್ಮೆ ಕುಟುಂಬದವರನ್ನು ಭೇಟಿಯಾಗಲು ಮಾರಿಯಾ ಕೊಲಂಬಿಯಾಗೆ ಹೋಗಿದ್ರಂತೆ. ಏಕೋ ಮನಸ್ಸಿಗೆ ಬೇಜಾರು ಆಗಿತ್ತಂತೆ. ನೋವು ಕಾಡುತ್ತಿತ್ತು. ಟೆರೇಸ್ ಮೇಲೆ ನಕ್ಷತ್ರಗಳನ್ನು ಎಣಿಸುತ್ತಾ, ಕಣ್ಣೀರು ಹಾಕುತ್ತಿದ್ದಳಂತೆ. ಆ ಚಿಕ್ಕ ವಯಸ್ಸಿನಲ್ಲಿಯೇ ಮಾರಿಯಾಗೆ ಒಂಟಿತನ ಕಾಡಿತ್ತಂತೆ. ಮನೆಯವರನ್ನು ಬಿಟ್ಟು ಬಂದದ್ದು ಬೇಜಾರು ಆಗಿತ್ತಂತೆ. ಆಗಲಿಂದಲೇ ಆಕಾಶದಲ್ಲಿ ವಿಚಿತ್ರ ಕಾಯಗಳು ಇವಳ ಗಮನಕ್ಕೆ ಬರಲು ಶುರುವಾಗಿತ್ತಂತೆ. ನಕ್ಷತ್ರಗಳು, ತಾರಾಪುಂಜಗಳೊಂದಿಗ ಹಾರುವ ತಟ್ಟೆಗಳು ಹಾಗೂ ಅನ್ಯ ಜೀವಿಗ್ರಹಗಳ ಸಂಚಾರವೂ ಈಕೆಯ ಗಮನಕ್ಕೆ ಬರುತ್ತಿತ್ತು ಎನ್ನುತ್ತಾಳೆ ಮಾರಿಯಾ. 

Bermuda Triangle Mystery: ನೂರಾರು ವಿಮಾನ, ಹಡಗು ನುಂಗಿದ ಸಮುದ್ರದ ಅಗೋಚರ ರಹಸ್ಯ!
ಹೀಗೆ ಬೆಳೆಯುತ್ತಿರುವಾಗಲೇ ಮಾರಿಯಾಗೆ ಅನ್ಯಗ್ರಹ ಜೀವಿಗಳೊಂದಿಗೆ ಟೆಲಿಫಥಿಕ್ ಕಮ್ಯೂನಿಕೇಷನ್ ಮಾಡಲೂ ಶುರುವಾಯ್ತಂತೆ. ಯಾರೂ ಕಿಟಕಿ ಬಳಿ ಬಂದಂತೆ, ಏನೋ ಕಿವಿಯಲ್ಲಿ ಹೇಳಿದಂತೆ ಅನುಭವಕ್ಕೆ ಬರುತ್ತಿತ್ತಂತೆ. ಆದರೆ, ವೀಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಲಿ, ಫೋಟೋ ತೆಗೆದುಕೊಳ್ಳಲಾಗಲಿ ಆಗುತ್ತಿರಲಿಲ್ಲವಂತೆ. ಇಂಥ ಅನುಭವಗಳೂ ವಾರದಲ್ಲಿ ಮೂರ್ನಾಲ್ಕು ಬಾರಿ ಆಗಿದ್ದೂ ಇದೆ ಎನ್ನುತ್ತಾಳೆ ಮಾರಿಯಾ. ಬರ ಬರುತ್ತಾ ಈ ರೀತಿ ವಿಚಿತ್ರ ಅನುಭವಗಳು ಹೆಚ್ಚಾಯಿತು. ಎಲ್ಲಿಗೋ ಹೋದಂತೆ ಆಗುತ್ತಿತ್ತು. ಎಚ್ಚರವಾದಾಗ ನನ್ನ ಮೈ ಮೇಲೆ ಗಾಯಗಳೂ ಇರುತ್ತಿದ್ದವು. ಆದರೆ, ಎಲ್ಲಿಗೆ ಹೋಗಿದ್ದೆ, ಯಾರ ಜೊತೆ ವ್ಯವಹರಿಸಿದ್ದೆ ಎಂಬ ಬಗ್ಗೆ ಅಸ್ಪಷ್ಟತೆ ಇರುತ್ತಿತ್ತು ಎನ್ನುತ್ತಾಳೆ ಈ ನಾರಿ. 

ಈ ವಿಷಯಗಳನ್ನು ಮಾರಿಯಾ ತನ್ನ ಮಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾಳಂತೆ. ಮಗಳೂ ಅಮ್ಮನ ಈ ವರ್ತನೆಗೆ ಹೊಂದಿಕೊಂಡಿದ್ದಾಳಂತೆ. ಹಾಗಂಥ ಈ ವಿಷಯವನ್ನ ಬೇರೆ ಯಾರೊಂದಿಗೂ ಇದುವರೆಗೂ ಹಂಚಿಕೊಂಡಿಲ್ವಂತೆ. 

ಒಮ್ಮೆ ಮಗಳು ಹತ್ತು ವರ್ಷದವಳಿದ್ದಾಗ ಮಾರಿಯಾ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಳಂತೆ. ಆಗಲೇ ಅವಳಿಗೂ ಹಾರುವ ತಟ್ಟೆಗಳನ್ನು (Unidentified flying object) ತೋರಿಸಿದ್ದಳಂತೆ. ಒಟ್ಟಿನಲ್ಲಿ ಈಕೆಗೆ ಆಕಾಶ ಕಾಯಗಳು, ಹಾರುವ ತಟ್ಟೆಗಳು, ಅನ್ಯಜೀವಿ ಗ್ರಹಗಳು ಹಲವು ಸಂದರ್ಭಗಳಲ್ಲಿ ಅನುಭವಕ್ಕೆ ಬಂದಿದ್ದವಂತೆ. ಬೇರೆಯವರ ಬಗ್ಗೆ ಇದನ್ನು ಹೇಳಿಕೊಂಡರೆ ಹುಚ್ಚಿ ಎನ್ನುತ್ತಾರೆ ಎಂಬ ಭಯದಿಂದ ಮೌನವಾಗಿಯೇ ಕಾಲ ಕಳೆದಿದ್ದಾಳೆ. ತನ್ನ ಜೀವನವನ್ನೇ ಅನ್ಯ ಗ್ರಹ ಜೀವಿಗಳಿಗಾಗಿ ಮುಡುಪಿಟ್ಟಿದ್ದೇನೆ ಎನ್ನುತ್ತಾಳೆ. ಈ ಬಗ್ಗೆ ಎಷ್ಟು ವಿಷಯಗಳನ್ನು, ಅನುಭವಗಳನ್ನು ಹಂಚಿಕೊಳ್ಳುತ್ತೇನೆ ಎನ್ನುತ್ತೇನೆ. 

ಒಟ್ಟಿನಲ್ಲಿ ಈಗಾಗಲೇ ಹಲವರು ಇಂಥ ಅನುಭವಗಳನ್ನು ಹಂಚಿ ಕೊಂಡಿದ್ದು ಇದೆ. ಅದೇ ರೀತಿ ಮಾರಿಯಾ ಸಹ ಒಬ್ಬರು. ಅವರ ಮಾನಸಿಕವಾಗಿ ಅಸ್ವಸ್ಥರು ಎನ್ನುವುದಕ್ಕಿಂತ, ಅವರು ತಮ್ಮ ಹೇಳಿಕೆಗೆ ತಕ್ಕಂತೆ ಸೂಕ್ತ ಸಾಕ್ಷಿಗಳನ್ನು ಒದಗಿಸಿದರೆ ಮಾತ್ರ ಜನರು ನಂಬಲು ಸಿದ್ಧರಿರುತ್ತಾರೆ. ಒಟ್ಟಿನಲ್ಲಿ ಮಾರಿಯಾ ಹೇಳಿಕೆ ಅನ್ಯ ಗ್ರಹಜೀವಿಗಳ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಂತೂ ಸುಳ್ಳಲ್ಲ.

Follow Us:
Download App:
  • android
  • ios