ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಮುಂದಿನ ಇಂಗ್ಲೆಂಡ್‌ ಪ್ರಧಾನಿಯಾಗುವ ಎಲ್ಲ ಸಾಧ್ಯತೆಗಳಿವೆ. ಸದ್ಯ, ಲಿಜ್‌ ಟ್ರಸ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ಬೃಹತ್ ಆರ್ಥಿಕ ಬಿಕ್ಕಟ್ಟಿನ ನಡುವೆ ಯುಕೆ (UK) ಪ್ರಧಾನಿ ಹುದ್ದೆಗೆ ಲಿಜ್‌ ಟ್ರಸ್‌ (Liz Truss) ರಾಜೀನಾಮೆ ನೀಡಿದ್ದಾರೆ. ಕೇವಲ 45 ದಿನಗಳ ಕಾಲ ಬ್ರಿಟನ್‌ ಪ್ರಧಾನಿಯಾಗಿ (Britain Prime Minister) ಅಧಿಕಾರ ಅನುಭವಿಸಿ ರಾಜೀನಾಮೆ ನೀಡಿದ್ದಾರೆ. ಇದು ಬ್ರಿಟನ್ ಪ್ರಧಾನಿಯೊಬ್ಬರ ಅತ್ಯಂತ ಕಡಿಮೆ ಅವಧಿಯಾಗಿದೆ. ಲಿಜ್‌ ಟ್ರಸ್‌ ವಿರುದ್ಧ ಯುಕೆ ಸಂಸದರು ಭಾರಿ ವಿರೋಧ ವ್ಯಕ್ತಪಡಿಸಿದ್ದರು, ಅವರ ವಿರುದ್ಧ ಮತ ಸಂಗ್ರಹ ನಡೆಯುತ್ತಿತ್ತು ಎಂಬ ವರದಿಗಳ ನಡುವೆಯೇ ಅವರು ರಾಜೀನಾಮೆ ನೀಡಿದ್ದಾರೆ.

ಈ ಹಿನ್ನೆಲೆ ಟೆಕ್‌ ದೈತ್ಯ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ (Rishi Sunak) ಮುಂದಿನ ಇಂಗ್ಲೆಂಡ್‌ ಪ್ರಧಾನಿಯಾಗುವ ಎಲ್ಲ ಸಾಧ್ಯತೆಗಳಿವೆ ಎಂದೂ ವರದಿಗಳು ಹೇಳುತ್ತಿವೆ. ಲಿಜ್‌ ಟ್ರಸ್‌ ಅವರ ಆರ್ಥಿಕ ನೀತಿಗೆ ಬ್ರಿಟನ್‌ ತತ್ತರಿಸಿತು. ಹಣದುಬ್ಬರ ತೀವ್ರ ಹೆಚ್ಚಾಗಿತ್ತು. ಇದು ಕನ್ಸರ್ವೇಟಿವ್ ಪಕ್ಷದ ಸಂಸದರ ಆಕ್ರೋಶಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ. 

ಇದನ್ನು ಓದಿ: ಲಿಜ್‌ ಟ್ರಸ್‌ ಬದಲು Rishi Sunakಗೆ ಮತ್ತೆ ಬ್ರಿಟನ್‌ ಪ್ರಧಾನಿ ಹುದ್ದೆ..? ಇನ್ಫಿ ಅಳಿಯನತ್ತ ಸಂಸದರ ಒಲವು

Scroll to load tweet…

ರಾಜೀನಾಮೆ ನೀಡಿರುವ ಬಗ್ಗೆ ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದ ಲಿಜ್‌ ಟ್ರಸ್‌, "ಪರಿಸ್ಥಿತಿಯನ್ನು ಗಮನಿಸಿದರೆ, ನಾನು ಚುನಾಯಿತನಾದ ಜನಾದೇಶವನ್ನು ನಿರ್ವಹಿಸಲು ಸಾಧ್ಯವಿಲ್ಲ . ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೂ ನಾನು ಪ್ರಧಾನಿಯಾಗಿಯೇ ಇರುತ್ತೇನೆ" ಎಂದು ಹೇಳಿದ್ದಾರೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿಯಾಗಿ 6 ವಾರಗಳಲ್ಲೇ ಲಿಜ್‌ ಟ್ರಸ್‌ ರಾಜೀನಾಮೆ ನೀಡುವ ಮೂಲಕ ತಮ್ಮ ಹೆಸರಿಗೆ ಹೊಸ ದಾಖಲೆ ಬರೆದುಕೊಂಡಿದ್ದಾರೆ. ಕೇವಲ 45 ದಿನಗಳ ಅವಧಿಗೆ ಯುಕೆ ಪ್ರಧಾನಿಯಾಗುವ ಮೂಲಕ ಅತಿ ಕಡಿಮೆ ಅವಧಿಗೆ ಯುನೈಟೆಡ್‌ ಕಿಂಗ್ಡಮ್‌ನ ಪ್ರಧಾನಿಯಾಗಿದ್ದಾರೆ. ಈ ಹಿಂದೆ ಜಾರ್ಜ್‌ ಕ್ಯಾನ್ನಿಂಗ್ 119 ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ತೊರೆದಿದ್ದರು. ಕ್ಷಯರೋಗದಿಂದ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾಗಲೇ ಅವರು ಮೃತಪಟ್ಟಿದ್ದರು. ಈ ಮೂಲಕ ಯುಕೆಯ ಅತಿ ಕಡಿಮೆ ಅವಧಿಯ ಪ್ರಧಾನಿ ಎನಿಸಿಕೊಂಡಿದ್ದರು. ಈ ದಾಖಲೆಯನ್ನು ಈಗ ಲಿಜ್‌ ಟ್ರಸ್‌ ಮುರಿದಿದ್ದಾರೆ. 

ಇದನ್ನೂ ಓದಿ: UK New PM ರಿಷಿ ಸುನಕ್ ಹಿಂದಿಕ್ಕಿ ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ!

ಬೋರಿಸ್‌ ಜಾನ್ಸನ್‌ (Boris Johnson) ರಾಜೀನಾಮೆ ನೀಡಿದ ಬಳಿಕ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಗಳಾಗಿದ್ದ ಲಿಜ್‌ ಟ್ರಸ್‌ ಮತ್ತು ರಿಷಿ ಸುನಕ್‌ ನಡುವೆ ನಡೆದ ಚುನಾವಣೆಯಲ್ಲಿ ಲಿಜ್ ಟ್ರಸ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಚುನಾವಣೆಗೂ ಮೊದಲು ಲಿಜ್‌ ಟ್ರಸ್‌ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ನೆರವೇರಿಸಲಾಗುವುದಿಲ್ಲ ಎಂದು ಹೇಳಿದ್ದರು. ಇದು ಹಲವರಲ್ಲಿ ಬೇಸರಕ್ಕೆ ಕಾರಣವಾಗಿತ್ತು ಎಂದೂ ವರದಿಗಳು ತಿಳಿಸಿವೆ.

ಇದರ ಬೆನ್ನಲ್ಲೇ ಪ್ರಕಟವಾಗಿರುವ ಸಮೀಕ್ಷೆಯೊಂದು ಚುನಾವಣೆಯ ವೇಳೆ ಲಿಜ್‌ ಟ್ರಸ್‌ಗೆ ಮತ ಹಾಕಿದವರಲ್ಲಿ ಶೇ. 62ರಷ್ಟು ಜನರು ತಮ್ಮ ಆಯ್ಕೆಯ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ. ಬ್ರಿಟನ್‌ನಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು (Economic Crisis) ಲಿಜ್‌ ಟ್ರಸ್‌ ವಿರುದ್ಧ ಸಂಸದರು ತಿರುಗಿ ಬೀಳಲು ಒಂದು ಕಾರಣವಾಗಿದೆ. ಹಾಗಾಗಿ ಟ್ರಸ್‌ಗೆ ನೀಡಿರುವ ಬೆಂಬಲವನ್ನು ಹಿಂಪಡೆಯಲು ಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಲಿಜ್‌ ಟ್ರಸ್‌ ಬದಲು ಎಲ್ಲಾ ಸಂಸದರೂ ರಿಷಿ ಸುನಕ್‌ಗೆ ಬೆಂಬಲ ಸೂಚಿಸಿದರೆ ಸುನಕ್‌ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನೂ ಓದಿ: ನಾನು ಪ್ರಧಾನಿಯಾದ ಮೊದಲ ದಿನದಿಂದಲೇ ಚೀನಾ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್‌

ಲಿಜ್‌ ಟ್ರಸ್‌ ರೇಟಿಂಗ್‌ ಸಹ ಕಡಿಮೆ
ಬ್ರಿಟನ್‌ನ ಆರ್ಥಿಕ ಕುಸಿತಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಲಿಜ್‌ ಟ್ರಸ್‌, ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವುದರಲ್ಲಿ ವಿಫಲವಾಗಿದ್ದರು. ಅಲ್ಲದೇ ಟ್ರಸ್‌ ಅವರ ಜನಪ್ರಿಯ ರೇಟಿಂಗ್‌ ಸಹ ಮೈನಸ್‌ 59ಕ್ಕೆ ಕುಸಿತ ಕಂಡಿತ್ತು. ಇದು ಬ್ರಿಟನ್‌ ಪ್ರಧಾನಿಗಳ ಇತಿಹಾಸದಲ್ಲೇ ಅತ್ಯಂತ ಕಳಪೆ ರೇಟಿಂಗ್‌ ಆಗಿದೆ.