ಲಿಜ್‌ ಟ್ರಸ್‌ ಬದಲು ರಿಷಿ ಸುನಾಕ್‌ ಮತ್ತೆ ಬ್ರಿಟನ್‌ ಪ್ರಧಾನಿಯಾಗ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಅಲ್ಲಿನ ಸಂಸದರು ಮತ್ತೆ ಇನ್ಫೋಸಿಸ್‌ ಅಳಿಯನತ್ತ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಮಾತು ತಪ್ಪಿದ ಲಿಜ್‌ ಟ್ರಸ್‌ ವಿರುದ್ಧ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಲಂಡನ್‌: ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತಾನು ನೀಡಿದ್ದ ಹಲವು ಭರವಸೆಗಳನ್ನು ಮುರಿದ ಬ್ರಿಟನ್‌ ಪ್ರಧಾನಿ (Britain Prime Minister) ಲಿಜ್‌ ಟ್ರಸ್‌ (Liz Truss) ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿ ಇಸ್ಫೋಸಿಸ್‌ (Infosys) ಮುಖ್ಯಸ್ಥ ನಾರಾಯಣ ಮೂರ್ತಿ (Narayana Murthy) ಅವರ ಅಳಿಯ ರಿಷಿ ಸುನಾಕ್‌ (Rishi Sunak) ಅವರನ್ನು ಪ್ರಧಾನಿ ಮಾಡಲು ಮನಸ್ಸು ಮಾಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಬೋರಿಸ್‌ ಜಾನ್ಸನ್‌ (Boris Johnson) ರಾಜೀನಾಮೆ ನೀಡಿದ ಬಳಿಕ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಗಳಾಗಿದ್ದ ಲಿಜ್‌ ಟ್ರಸ್‌ ಮತ್ತು ರಿಷಿ ಸುನಾಕ್‌ ನಡುವೆ ನಡೆದ ಚುನಾವಣೆಯಲ್ಲಿ ಟ್ರಸ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಚುನಾವಣೆಗೂ ಮೊದಲು ಲಿಜ್‌ ಟ್ರಸ್‌ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ನೆರವೇರಿಸಲಾಗುವುದಿಲ್ಲ ಎಂದು ಹೇಳಿದ್ದರು. ಇದು ಹಲವರಲ್ಲಿ ಬೇಸರಕ್ಕೆ ಕಾರಣವಾಗಿತ್ತು ಎಂದು ವರದಿಗಳು ತಿಳಿಸಿವೆ.

ಇದರ ಬೆನ್ನಲ್ಲೇ ಪ್ರಕಟವಾಗಿರುವ ಸಮೀಕ್ಷೆಯೊಂದು ಚುನಾವಣೆಯ ವೇಳೆ ಲಿಜ್‌ ಟ್ರಸ್‌ಗೆ ಮತ ಹಾಕಿದವರಲ್ಲಿ ಶೇ. 62ರಷ್ಟು ಜನರು ತಮ್ಮ ಆಯ್ಕೆಯ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ. ಬ್ರಿಟನ್‌ನಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು (Economic Crisis) ಲಿಜ್‌ ಟ್ರಸ್‌ ವಿರುದ್ಧ ಸಂಸದರು ತಿರುಗಿ ಬೀಳಲು ಒಂದು ಕಾರಣವಾಗಿದೆ. ಹಾಗಾಗಿ ಟ್ರಸ್‌ಗೆ ನೀಡಿರುವ ಬೆಂಬಲವನ್ನು ಹಿಂಪಡೆಯಲು ಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಲಿಜ್‌ ಟ್ರಸ್‌ ಬದಲು ಎಲ್ಲಾ ಸಂಸದರೂ ರಿಷಿ ಸುನಾಕ್‌ಗೆ ಬೆಂಬಲ ಸೂಚಿಸಿದರೆ ಸುನಾಕ್‌ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನು ಓದಿ: ರಿಷಿ ಸುನಕ್‌ ಸೋಲಿಗೆ ಕಾರಣವಾಗಿದ್ದು 5 ಆಪಾದನೆಗಳು!

ಲಿಜ್‌ ಟ್ರಸ್‌ ರೇಟಿಂಗ್‌ ಸಹ ಕಡಿಮೆ
ಬ್ರಿಟನ್‌ನ ಆರ್ಥಿಕ ಕುಸಿತಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಲಿಜ್‌ ಟ್ರಸ್‌, ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವುದರಲ್ಲಿ ವಿಫಲವಾಗಿದ್ದರು. ಅಲ್ಲದೇ ಟ್ರಸ್‌ ಅವರ ಜನಪ್ರಿಯ ರೇಟಿಂಗ್‌ ಸಹ ಮೈನಸ್‌ 59ಕ್ಕೆ ಕುಸಿತ ಕಂಡಿತ್ತು. ಇದು ಬ್ರಿಟನ್‌ ಪ್ರಧಾನಿಗಳ ಇತಿಹಾಸದಲ್ಲೇ ಅತ್ಯಂತ ಕಳಪೆ ರೇಟಿಂಗ್‌ ಆಗಿದೆ.
ಹಾಗಾಗಿ ಕನ್ಸರ್ವೇಟಿವ್‌ ಪಕ್ಷದ ಸಂಸದರು ಲಿಜ್‌ ಟ್ರಸ್‌ ಅವರ ಬದಲಾಗಿ ರಿಷಿ ಸುನಾಕ್‌ಗೆ ಬೆಂಬಲ ಸೂಚಿಸಲು ತೀರ್ಮಾನಿಸಿದ್ದಾರೆ. ಹೀಗಾದರೆ ರಿಷಿ ಸುನಾಕ್‌ ಪ್ರಧಾನಿಯಾಗುವುದು ಸಾಧ್ಯವಾಗಲಿದೆ.

ಇದನ್ನೂ ಓದಿ: ನಾನು ಪ್ರಧಾನಿಯಾದ ಮೊದಲ ದಿನದಿಂದಲೇ ಚೀನಾ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್‌

ತಾನು ಪ್ರಧಾನಿಯಾದ ಮೊದಲ ದಿನದಿಂದಲೇ ಕಮ್ಯೂನಿಸ್ಟ್‌ ಸರ್ಕಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಚೀನಾದ ವಿರುದ್ಧ ರಿಷಿ ಸುನಕ್‌ ಕೈಗೊಳ್ಳುವ ಪ್ರಸ್ತಾವನೆಗಳು ಹೀಗಿವೆ ನೋಡಿ..

ಬ್ರಿಟನ್‌ನಲ್ಲಿರುವ ಎಲ್ಲ 30 ಕನ್ಫ್ಯೂಶಿಯಸ್‌ ಸಂಸ್ಥೆಗಳನ್ನು ಮುಚ್ಚುವ ಒಲವನ್ನು ರಿಷಿ ಹೊಂದಿದ್ದು, ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನೀ ಪ್ರಭಾವದ ಮೃದು ಶಕ್ತಿಯ ಹರಡುವಿಕೆಯನ್ನು ತಡೆಯುವುದು ಇದರ ಉದ್ದೇಶ ಎಂದು ತಿಳಿದುಬಂದಿದೆ. ಅಲ್ಲದೆ, ನಮ್ಮ ವಿಶ್ವವಿದ್ಯಾಲಯಗಳಿಂದ ಚೀನಾದ ಕಮ್ಯೂನಿಸ್ಟ್‌ ಪಕ್ಷ (ಸಿಸಿಪಿ) ವನ್ನು ಕಿತ್ತುಹಾಕುವುದಾಗಿಯೂ ರಿಷಿ ಸುನಕ್‌ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಯೂ ಟರ್ನ್, ರಿಶಿ ಹಿಂದಿಕ್ಕಿದ ಲಿಜ್ ಟ್ರಸ್ ಬುಕ್ಕಿಗಳ ಗೆಲುವಿನ ಫೇವರಿಟ್!