ಬೀಜಿಂಗ್‌(ಅ.19): ಆಮದು ಮಾಡಿಕೊಂಡ ಶೀತಲೀಕೃತ ಮೀನಿನ ಪೊಟ್ಟಣದ ಮೇಲೆ ಚೀನಾದಲ್ಲಿ ಜೀವಂತ ಕೊರೋನಾ ವೈರಸ್‌ ಪತ್ತೆಯಾಗಿದೆ. ಇದು ಜಗತ್ತಿನಲ್ಲೇ ಶೀತಲೀಕೃತ ಆಹಾರದ ಪ್ಯಾಕ್‌ ಮೇಲೆ ಜೀವಂತ ಕೊರೋನಾ ವೈರಸ್‌ ಪತ್ತೆಯಾದ ಮೊದಲ ಪ್ರಕರಣವಾಗಿದೆ ಎಂದು ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನ್ಷನ್‌ (ಸಿಡಿಸಿ) ಶನಿವಾರ ಹೇಳಿದೆ.

ಬಂದರು ನಗರಿ ಕ್ವಿಂಗ್ಡಾವೋನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ 1.1 ಕೋಟಿ ಜನರಿಗೂ ಚೀನಾ ಸರ್ಕಾರ ಕೊರೋನಾ ಪರೀಕ್ಷೆ ಮಾಡಿದೆ. ಆ ವೇಳೆ ಎಲ್ಲೂ ಹೊಸ ಕೊರೋನಾ ಕ್ಲಸ್ಟರ್‌ಗಳು ಪತ್ತೆಯಾಗಿಲ್ಲ. ಆದರೆ, ಶೀತಲೀಕೃತ ವ್ಯವಸ್ಥೆಯಲ್ಲಿ ಆಮದು ಮಾಡಿಕೊಂಡ ಮೀನಿನ ಪೊಟ್ಟಣದ ಹೊರಮೈಯಲ್ಲಿ ಕೊರೋನಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಳವಣಿಗೆಯ ನಂತರ ಜಗತ್ತಿನೆಲ್ಲೆಡೆ ಕೋಲ್ಡ್‌ ಚೈನ್‌ ವ್ಯವಸ್ಥೆಯಡಿ ಆಮದು-ರಫ್ತು ಮಾಡುವ ಆಹಾರ ಪೊಟ್ಟಣಗಳ ಬಗ್ಗೆ ಆತಂಕ ಆರಂಭವಾಗಿದೆ.