ಚೀನಾದಲ್ಲಿ ಮಕ್ಕಳ ಗುಂಪಿನಲ್ಲಿ ಡಾನ್ಸ್ ಮಾಡುತ್ತಿದ್ದ ಮಗುವೊಂದು ವೇದಿಕೆ ಮೇಲೆಯೇ ನಿದ್ದೆಗೆ ಜಾರಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪುಟ್ಟ ಮಕ್ಕಳು ನಿದ್ದೆ ಮಾಡಿಸಬೇಕು ಎಂದು ತಾಯಿ ಮಕ್ಕಳನ್ನು ನಿದ್ದೆ ಮಾಡಿಸಲು ಹೊರಟರೇ ಎಷ್ಟು ಹೊತ್ತು ಕಳೆದರೂ ನಿದ್ದೆಗೆ ನಿದ್ದೆ ಮಾಡದೇ ತಾಯಂದಿರನ್ನು ಗಂಟೆಗಟ್ಟಲೇ ಅತ್ತು ಕರೆದು ಅಥವಾ ಆಟವಾಡುತ್ತಾ ಗೊಳು ಹೊಯ್ಯುತ್ತಾರೆ. ಅದರೆ ಕೆಲವೊಮ್ಮೆ ಮಾತ್ರ ಮಕ್ಕಳು ಆಟವಾಡುತ್ತಲೇ ನಿದ್ದೆಗೆ ಜಾರುತ್ತಿರುತ್ತವೆ. ಕೆಲವು ಮಕ್ಕಳು ಸ್ನಾನ ಮಾಡಿಸುವಾಗ ಊಟ ತಿನ್ನಿಸುವಾಗಲೂ ಹಾಗೆ ನಿಧಾನಕ್ಕೆ ನಿದ್ದೆಗೆ ಜಾರಿ ಬಿಡುವುದುಂಟು ಅದೇ ರೀತಿ ಪುಟ್ಟ ಮಕ್ಕಳು ಶಾಲೆಗಳಲ್ಲಿ ಟೀಚರ್ ಪಾಠ ಮಾಡುವ ವೇಳೆ ಹಾಗೆಯೇ ನಿದ್ದೆಗೆ ಜಾರಿದ ವಿಡಿಯೋವನ್ನು ನಾವು ನೋಡಿದ್ದೇವೆ. ಈಗ ಚೀನಾದಲ್ಲಿ ಮಕ್ಕಳ ಗುಂಪಿನಲ್ಲಿ ಡಾನ್ಸ್ ಮಾಡುತ್ತಿದ್ದ ಮಗುವೊಂದು ವೇದಿಕೆ ಮೇಲೆಯೇ ನಿದ್ದೆಗೆ ಜಾರಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಚೀನಾದ (China) ಚಾಂಗ್‌ಕಿಂಗ್‌ನಲ್ಲಿರುವ (Chongqing) ಶಿಶುವಿಹಾರದ (kindergarten) ವಿಡಿಯೋ ಇದಾಗಿದ್ದು, ಮೂರು ವರ್ಷದ ಬಾಲಕಿ, ಚಿಟ್ಟೆಯ ವೇಷಭೂಷಣವನ್ನು ಧರಿಸಿ ಗುಂಪು ನೃತ್ಯದಲ್ಲಿ ಭಾಗವಹಿಸಬೇಕಿತ್ತು. ಪುಟ್ಟ ಬಾಲೆಯೇನೋ ನೃತ್ಯ ಮಾಡಲು ವೇದಿಕೆಯೇನೋ ಏರಿದ್ದಳು. ಆದರೆ ನೃತ್ಯ ಶುರುವಾಗುವುದಕ್ಕೂ ಮೊದಲೇ ಆಕೆ ನಿದ್ದೆಗೆ ಜಾರಿದ್ದಾಳೆ. ಯಾಹೂ ನ್ಯೂಸ್ ಪ್ರಕಾರ, ಮಕ್ಕಳ ದಿನದ ಪ್ರದರ್ಶನದ ಸಮಯದಲ್ಲಿ ಈ ಪುಟ್ಟ ಬಾಲೆ ವೇದಿಕೆಯಲ್ಲಿ ನಿದ್ದೆಗೆ ಜಾರಿದ್ದಾಳೆ.

Scroll to load tweet…

ಈ ಒಂದು ಮಗು ಅವಳು ಆಯಾಸದಿಂದ ವೇದಿಕೆಯಲ್ಲೇ ನಿದ್ರೆಗೆ ಜಾರಿದ್ದರೆ, ಅವಳ ಸಹಪಾಠಿಗಳು ವೇದಿಕೆಯ ಮೇಲೆ ಅವಳಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ನಿಂತು ಗುಲಾಬಿ ಬಣ್ಣದ ಚಿಟ್ಟೆಯ ವೇಷಭೂಷಣಗಳನ್ನು ಧರಿಸಿ ತಮ್ಮ ನೃತ್ಯವನ್ನು ಪ್ರದರ್ಶಿಸಿದರು. ಪ್ರೇಕ್ಷಕರು ಆರಂಭದಲ್ಲಿ ಬಾಲಕಿ ರೇಷ್ಮೆ ಹುಳುವಿನ ಪಾತ್ರವನ್ನು ಮಾಡುತ್ತಿದ್ದಾಳೆ ಎಂದು ಭಾವಿಸಿದ್ದರು, ಆದರೆ ನಂತರ ಶಿಕ್ಷಕರೊಬ್ಬರು ಅವಳು ಸುಮ್ಮನೆ ನಿದ್ದೆ ಮಾಡುತ್ತಿದ್ದಾಳೆ ಎಂಬುದನ್ನು ದೃಢಪಡಿಸಿದರು.

ತನ್ನ ಸಾಕುನಾಯಿಯಂತೆ ಮೇಕಪ್‌ ಮಾಡಿಕೊಂಡ ಪುಟಾಣಿ

ಅಂಬೆಗಾಲಿಡುವ ಮಗು ವೇದಿಕೆಯಲ್ಲಿ ನಿದ್ದೆ ಮಾಡುತ್ತಿರುವ ದೃಶ್ಯದ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಜನ ವೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನೋಡುಗರು ತುಂಬಾ ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ. ನಾನೂ ಇಂದು ಇಡೀ ದಿನದಲ್ಲಿ ನೋಡಿದ ಅತ್ಯಂತ ಸುಂದರ ದೃಶ್ಯವಿದು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನನ್ನ ದಿನವನ್ನು ಮುನ್ನಡೆಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಗುಮ್ಮಟನಗರಿಯಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡ್ತಿರೋ ಪುಟಾಣಿಗಳು..!

ಪುಟ್ಟ ಬಾಲಕಿ ಗಾಢ ನಿದ್ದೆಯಲ್ಲಿದ್ದುದನ್ನು ನೋಡಿದ ಆಕೆಯ ಶಿಕ್ಷಕಿ ನೃತ್ಯದ ಸಮಯದಲ್ಲಿ ಆಕೆಯನ್ನು ಎಚ್ಚರಿಸಲು ಪ್ರಯತ್ನಿಸಲಿಲ್ಲ. ವರದಿಗಳ ಪ್ರಕಾರ, ನಿದ್ರಾವಸ್ಥೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪ್ರದರ್ಶನದ ನಂತರ ವೇದಿಕೆಯಿಂದ (stage) ಹೊರಗೆ ಕರೆದೊಯ್ಯುತ್ತಿದ್ದರೂ ಕೂಡ ಎಚ್ಚರಗೊಳ್ಳದಷ್ಟು ಗಾಢ ನಿದ್ದೆಯಲ್ಲಿ ಆಕೆ ಇದ್ದಳು ಎಂದು ತಿಳಿದು ಬಂದಿದೆ.